ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢ ಮತ ಎಣಿಕೆಗೆ ಚುನಾವಣೆ ಆಯೋಗಕ್ಕೆ ಪಟೇಲ್ 4 ಸಲಹೆ

|
Google Oneindia Kannada News

ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ಚುನಾವಣೆ ಆಯೋಗಕ್ಕೆ ನಾಲ್ಕು ಸಲಹೆಗಳನ್ನು ನೀಡಿದ್ದಾರೆ ಛತ್ತೀಸ್ ಗಢ ವಿಧಾನಸಭಾ ಚುನಾವಣೆಯ ಮತ ಎಣಿಕೆ ವೇಳೆಯಲ್ಲಿ ಅವುಗಳನ್ನು ಆಯೋಗ ಜಾರಿಗೆ ತರಬಹುದು ಎಂಬ ವಿಶ್ವಾಸ ಕೂಡ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಅಹ್ಮದ್ ಪಟೇಲ್ ನೀಡಿರುವ ನಾಲ್ಕು ಸಲಹೆ ಏನು ಗೊತ್ತೆ?

* ಇವಿಎಂ ಅಂದರೆ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್ ನಿಂದ ಮತ ಎಣಿಕೆ ಕೇಂದ್ರಗಳಿಗೆ ತೆಗೆದುಕೊಂಡು ಹೋಗುವಾಗ ದಯವಿಟ್ಟು ಎಲ್ಲ ಪಕ್ಷದ ಪ್ರತಿನಿಧಿಗಳಿಗೂ ಜತೆಯಲ್ಲಿರುವ ಅವಕಾಶ ಮಾಡಿಕೊಡಿ.

ಕಾಂಗ್ರೆಸ್ ಅಧ್ಯಕ್ಷರದ್ದೇ ಒಂದು ದಾರಿ, ಉಳಿದವರದ್ದು ಇನ್ನೊಂದು ದಾರಿ!ಕಾಂಗ್ರೆಸ್ ಅಧ್ಯಕ್ಷರದ್ದೇ ಒಂದು ದಾರಿ, ಉಳಿದವರದ್ದು ಇನ್ನೊಂದು ದಾರಿ!

* ಅರ್ಹ ಮತದಾರರಿಂದಲೇ ಅಂಚೆ ಮತ ಪತ್ರಗಳು ಬಂದಿವೆಯೇ ಎಂಬುದನ್ನು ಸರಿಯಾಗಿ ಪರಿಶೀಲಿಸಿ.

Ahmed Patel

* ರಾಜ್ ನಂದ್ ಗಾಂವ್, ಕೊಂಡಗಾಂವ್ ಹಾಗೂ ಬಿಲಾಸ್ ಪುರ್ ಜಿಲ್ಲೆಯ ಉನ್ನತ ಅಧಿಕಾರಿಗಳ ನಡಾವಳಿಗಳನ್ನು ಪರಿಶೀಲಿಸಿ.

* ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ನಂತರವಷ್ಟೇ ಎರಡನೇ ಸುತ್ತಿನ ಎಣಿಕೆಯನ್ನು ಆರಂಭಿಸುವಂತೆ ನೋಡಿಕೊಳ್ಳಬೇಕು.

ಹೀಗೆ ನಾಲ್ಕು ಸಲಹೆಗಳು ಒಳಗೊಂಡ ಪತ್ರವನ್ನು ಅಹ್ಮದ್ ಪಟೇಲ್ ರು ಚುನಾವಣೆ ಆಯೋಗಕ್ಕೆ ಬರೆದಿದ್ದು, ಅವುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ಇದೆ ಕೂಡ ಹೇಳಿದ್ದಾರೆ.

English summary
MP and Congress senior leader Ahmed Patel 4 suggestions to EC ahead of Chattisgarh counting. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X