• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಯಾಚಿನ್‌ನಲ್ಲಿ ಹಿಮಪಾತ; ನಾಲ್ವರು ಯೋಧರ ದುರ್ಮರಣ

|
Google Oneindia Kannada News
      ಹಿಮದಡಿ ಸಿಲುಕಿದವರಿಗಾಗಿ ಮುಂದುವರಿದ ಶೋಧ ಕಾರ್ಯ | Oneindia Kannada

      ನವದೆಹಲಿ, ನವೆಂಬರ್ 18 : ಸಿಯಾಚಿನ್ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ. ಪಹರೆ ಕಾಯುತ್ತಿದ್ದ ನಾಲ್ವರು ಯೋಧರು ಸಹ ಮೃತಪಟ್ಟಿದ್ದು, 3 ಮೃತದೇಹಗಳು ಸಿಕ್ಕಿವೆ.

      ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಹಿಮಪಾತ ಸಂಭವಿಸಿದೆ. ಈ ವೇಳೆ ಗಸ್ತು ತಿರುಗುತ್ತಿದ್ದ ಯೋಧರು ಹಿಮದಡಿ ಸಿಲುಕಿದರು. ಹಿಮಾಲಯದ ಉತ್ತರ ತುದಿಯ ಲಡಾಖ್ ಪ್ರದೇಶದಲ್ಲಿ ಹಿಮಪಾತವಾಗಿದೆ. ನಾಲ್ವರು ಯೋಧರು ಸೇರಿದಂತೆ 6 ಜನರು ಹಿಮದಡಿ ಸಿಲುಕಿ ಮೃತಪಟ್ಟಿದ್ದಾರೆ.

      ಭಾರತೀಯ ನಾಗರಿಕರಿಗೆ ಸಿಯಾಚಿನ್ ಪ್ರವೇಶ; ಗೊತ್ತಿರಬೇಕಾದ 5 ಸಂಗತಿ ಭಾರತೀಯ ನಾಗರಿಕರಿಗೆ ಸಿಯಾಚಿನ್ ಪ್ರವೇಶ; ಗೊತ್ತಿರಬೇಕಾದ 5 ಸಂಗತಿ

      ಸಿಯಾಚಿನ್ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾಗಿದೆ. 1984 ರಿಂದ ಇದುವರೆಗೂ ಭಾರತ ಮತ್ತು ಪಾಕಿಸ್ತಾನದ ಹಲವು ಯೋಧರು ಇಲ್ಲಿ ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸಮುದ್ರಮಟ್ಟದಿಂದ ಈ ಪ್ರದೇಶ ಸುಮಾರು 19 ಸಾವಿರ ಅಡಿ ಎತ್ತರದಲ್ಲಿದೆ.

      ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್ ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್

      ಹಿಮಪಾತದಲ್ಲಿ ಸಿಲುಕಿದವರ ರಕ್ಷಣೆ ಮಾಡುವ ತಂಡ ಸ್ಥಳಕ್ಕೆ ಧಾವಿಸಿದ್ದು, ಇದುವರೆಗೂ 3 ಮೃತದೇಹಗಳು ಸಿಕ್ಕಿವೆ. ಮೃತಪಟ್ಟವರ ವಿವರ ಇನ್ನೂ ಲಭ್ಯವಾಗಿಲ್ಲ. ಹಿಮದಡಿ ಸಿಲುಕಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

      ಸಿಯಾಚಿನ್ ನಲ್ಲಿನ ಯೋಧರು ಸ್ನಾನಕ್ಕಾಗಿ ಇನ್ನು 90 ದಿನ ಕಾಯಬೇಕಿಲ್ಲ ಸಿಯಾಚಿನ್ ನಲ್ಲಿನ ಯೋಧರು ಸ್ನಾನಕ್ಕಾಗಿ ಇನ್ನು 90 ದಿನ ಕಾಯಬೇಕಿಲ್ಲ

      2016ರ ಫೆಬ್ರವರಿಯಲ್ಲಿ ಸಿಯಾಚಿನ್‌ನಲ್ಲಿ ನಡೆದ ಹಿಮಪಾತದಲ್ಲಿ 10 ಯೋಧರು ಮೃತಪಟ್ಟಿದ್ದರು. 25 ಅಡಿ ಆಳದ ಹಿಮದಲ್ಲಿ ಕರ್ನಾಟಕದ ಹನುಮಂತಪ್ಪ ಕೊಪ್ಪದ್ ಸಿಲುಕಿದ್ದರು. ಆರು ದಿನಗಳ ಬಳಿಕ ಅವರನ್ನು ಹೊರತೆಗೆಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

      ಪಾಕಿಸ್ತಾನ ಮತ್ತು ಚೀನಾ ಸೈನಿಕರು ಗಡಿ ದಾಟಿ ಒಳ ನುಗ್ಗಲು ಪ್ರಯತ್ನ ನಡೆಸುತ್ತಾರೆ. ಆದ್ದರಿಂದ, ಸಿಯಾಚಿನ್‌ನಲ್ಲಿ ಭಾರತೀಯ ಸೇನೆ 800 ಸೈನಿಕರನ್ನು ಗಸ್ತಿಗೆ ನಿಯೋಜನೆ ಮಾಡುತ್ತದೆ. ಇಲ್ಲಿರುವ ಸೇನಾ ಶಿಬಿರದ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ.

      ಸಿಯಾಚಿನ್ ಸೇನಾ ನೆಲೆಯಲ್ಲಿ - 50 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುತ್ತದೆ. ಯೋಧರು ಊಟ, ಟೀಗಾಗಿ ಅಪಾರ ವೆಚ್ಚವಾಗುತ್ತದೆ. ಇಲ್ಲಿ ಪಹರೆ ಕಾಯುವ ಸೈನಿಕರಿಗೆ ವಿಶೇಷ ಬೂಟು, ಕಾಲುಚೀಲ ಸೇರಿದಂತೆ ವಿಶೇಷ ಸೌಲಭ್ಯ ನೀಡಲಾಗುತ್ತದೆ.

      English summary
      Six persons including 4 soldiers killed in avalanche in the Siachen on Monday, November 18, 2019.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X