ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಸೇರ್ಪಡೆಯಾಗಲಿದೆ 4 ರಫೇಲ್ ಯುದ್ಧ ವಿಮಾನ

|
Google Oneindia Kannada News

ನವದೆಹಲಿ, ಮೇ 16: ಜುಲೈ ತಿಂಗಳಾಂತ್ಯಕ್ಕೆ ಭಾರತ ಖರೀದಿಸಿರುವ 36 ರಫೇಲ್ ಫೈಟರ್ ಜೆಟ್ ಗಳ ಪೈಕಿ 4 ರಫೇಲ್ ಗಳು ಭಾರತಕ್ಕೆ ಆಗಮಿಸಲಿವೆ.

ಕೊರೊನಾ ಭೀತಿಯ ನಡುವೆಯೂ ಇದು ಭಾರತದ ಮಟ್ಟಿಗೆ ಸಂತಸದ ಸುದ್ದಿಯಾಗಿದೆ. ಕೋವಿಡ್-19 ರ ಕಾರಣದಿಂದಾಗಿಯೇ ರಫೇಲ್ ಗಳ ಆಗಮನ 11 ವಾರ ವಿಳಂಬವಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಬರಬೇಕಿದ್ದ ರಾಫೆಲ್ ಜೆಟ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತ ತಲುಪುತ್ತಿವೆ.

58,000 ಕೋಟಿ ರೂಪಾಯಿ ಮೊತ್ತದ 36 ರಫೇಲ್ ಜೆಟ್ ಗಳ ಖರೀದಿಗೆ 2016 ರಲ್ಲಿ ಭಾರತ ಸರ್ಕಾರ ಫ್ರಾನ್ಸ್ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

Rafale

ಅದರಲ್ಲಿ ಮೊದಲ ಬ್ಯಾಚ್ ರಫೇಲ್ ಜೆಟ್ ಮೇ ಮೊದಲ ವಾರದಲ್ಲಿ ಬರುವುದಾಗಿ ಅಂದಾಜಿಸಲಾಗಿತ್ತು. ಈ ಏರ್‌ಕ್ರಾಫ್ಟ್‌ಗಳು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯೊಲಿವೆ.

ಫ್ರೆಂಚ್ ನಿರ್ಮಿತ 36 ರಫೇಲ್ ಫೈಟರ್ ಜೆಟ್ ಗಳನ್ನು ಡಿಅಸಾಲ್ಟ್ ನಿಂದ ಭಾರತವು ಖರೀದಿಸುತ್ತದೆ ಎಂದು 2015ರ ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. 2012ನೇ ಇಸವಿಯಲ್ಲೇ ರಫೇಲ್ ವಿಮಾನವನ್ನು ಖರೀದಿ ಮಾಡಬೇಕು ಎಂದು ಆಯ್ಕೆ ಮಾಡಲಾಗಿತ್ತು. ಆ ವೇಳೆಗೆ ಯುಎಸ್ ಎ, ಯುರೋಪ್ ಹಾಗೂ ರಷ್ಯಾದ ಪ್ರಸ್ತಾವವಗಳನ್ನು ಪಕ್ಕಕ್ಕೆ ಸರಿಸಿ, ರಫೇಲ್ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಲಾಗಿತ್ತು.

ರಫೇಲ್ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತೆ ಕ್ಲೀನ್ ಚಿಟ್ರಫೇಲ್ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತೆ ಕ್ಲೀನ್ ಚಿಟ್

ಏಕೆಂದರೆ ಭಾರತದ ವಾಯುಸೇನೆಯಲ್ಲಿದ್ದ ಯುದ್ಧ ವಿಮಾನಗಳು ಹಳೆಯದಾಗಿದ್ದವು. ಹಾಗೆ ನೋಡಿದರೆ ಫ್ರಾನ್ಸ್ ನ ಡಿಅಸಾಲ್ಟ್ ನಿಂದ ಭಾರತ ಖರೀದಿಸಬೇಕು ಅಂದುಕೊಂಡಿದ್ದು 18 ಜೆಟ್ ಮಾತ್ರ. ಉಳಿದ 108 ವಿಮಾನವನ್ನು ಬೆಂಗಳೂರಿನಲ್ಲಿರುವ ಎಚ್ ಎಎಲ್ ನಲ್ಲೇ ನಿರ್ಮಿಸಲು ತೀರ್ಮಾನಿಸಲಾಗಿತ್ತು.

ಆದರೆ, ಮೋದಿ ನೇತೃತ್ವದ ಸರಕಾರವು ದುಬಾರಿ ಆಗುತ್ತದೆ ಎಂಬ ಕಾರಣಕ್ಕೆ ಅದಕ್ಕೂ ಮುಂಚೆ ಯುಪಿಎ ಮಾಡಿಕೊಂಡಿದ್ದ 126 ರಫೇಲ್ ಖರೀದಿ ಒಪ್ಪಂದ ತೀರ್ಮಾನದಿಂದ ಹಿಂದೆ ಸರಿಯಿತು.

ಹೀಗೆ ಖರೀದಿ ಮಾಡಬೇಕು ಅಂತಿದ್ದ ಜೆಟ್ ನ ಸಂಖ್ಯೆಯು ಕಡಿಮೆಯಾಯಿತು. ಆದರೆ ಭಾರತೀಯ ವಾಯು ಸೇನೆಗೆ ತುರ್ತಾಗಿ ಖರೀದಿ ಮಾಡಲೇಬೇಕಿತ್ತು ಅನ್ನೋ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ, ಹಾರಾಟಕ್ಕೆ ಸಿದ್ಧವಾದ ಮೂವತ್ತಾರು ವಿಮಾನವನ್ನು ಖರೀದಿಸಲು ನಿರ್ಧಾರ ಮಾಡಲಾಯಿತು. ಅದಕ್ಕೂ ಮುನ್ನ ಡಿಅಸಾಲ್ಟ್ ನಿಂದ ತಂತ್ರಜ್ಞಾನ ಪಡೆದು, ಭಾರತದಲ್ಲೇ ವಿಮಾನ ನಿರ್ಮಿಸುವ ಆಲೋಚನೆ ಕೈ ಬಿಡಲಾಯಿತು.

ಭಾರತ- ಫ್ರಾನ್ಸ್ ಮಧ್ಯದ ಈ ಒಪ್ಪಂದವನ್ನು 'ರಫೇಲ್ ಒಪ್ಪಂದ' ಎಂದು ಕರೆಯಲಾಯಿತು. 58,000 ಕೋಟಿ ರುಪಾಯಿಯ ವ್ಯವಹಾರ ಅದಾಗಿತ್ತು. ರಫೇಲ್ ಎರಡು ಎಂಜಿನ್ ನ 36 ವಿಮಾನಕ್ಕೆ 15 ಪರ್ಸೆಂಟ್ ಮೊತ್ತವನ್ನು ಮುಂಗಡವಾಗಿ ಪಾವತಿಸಲಾಯಿತು.

ಒಪ್ಪಂದದ ಪ್ರಕಾರ ಭಾರತವು ರಫೇಲ್ ಜತೆಗೆ ಜಗತ್ತಿನಲ್ಲೇ ಅತ್ಯಾಧುನಿಕವಾದ ಶಸ್ತ್ರಾಸ್ತ್ರ ಪಡೆಯಲಿದೆ. ಮತ್ತು ಆ ಒಪ್ಪಂದದ ಭಾಗವಾಗಿ 58,000 ಕೋಟಿ ರುಪಾಯಿ ಒಟ್ಟು ಮೊತ್ತದ ಶೇಕಡಾ ಮೂವತ್ತರಷ್ಟನ್ನು ಭಾರತೀಯ ಮಿಲಿಟರಿ- ಏರೋನಾಟಿಕ್ಸ್ ಸಂಬಂಧಿಸಿದ ಸಂಶೋಧನೆಗಳಿಗೆ ಮತ್ತು ಶೇ ಇಪ್ಪತ್ತರಷ್ಟನ್ನು ರಫೇಲ್ ಬಿಡಿ ಭಾಗಗಳ ಸ್ಥಳೀಯ ಉತ್ಪಾದನೆಗೆ ಫ್ರಾನ್ಸ್ ಸರಕಾರ ಹೂಡಿಕೆ ಮಾಡಿದೆ.

English summary
The first four of 36 Rafale jets are expected to land in India by last week of July as the coronavirus pandemic delayed their scheduled delivery by around 11 weeks, official sources said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X