ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ 4 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ಕಳುಹಿಸಿದ ಇಂಡೋನೆಷ್ಯಾ

|
Google Oneindia Kannada News

ನವದೆಹಲಿ, ಮೇ 10: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಿಂದ ಭಾರತದಲ್ಲಿ ಸೃಷ್ಟಿಯಾಗಿರುವ ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸಲು ಜಗತ್ತಿನ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ.
ಜಕರ್ತಾ ಮತ್ತು ಇಂಡೋನೆಷ್ಯಾದಿಂದ ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ಅನ್ನು ಹೊತ್ತ ಭಾರತೀಯ ವಾಯುಪಡೆ ಐಎಸ್-76ಎಸ್ ವಿಮಾನ ಭಾನುವಾರ ಆಂಧ್ರ ಪ್ರದೇಶದ ವಿಶಾಖಪಟ್ಟಣಂಕ್ಕೆ ಬಂದಿಳಿದಿದೆ. ಕೊವಿಡ್-19 ಎರಡನೇ ಅಲೆ ಹಿನ್ನೆಲೆ ವಾಯುಪಡೆಯ ಹಲವು ಸಿಬ್ಬಂದಿಯು ವಿದೇಶಗಳಿಂದ ಆಕ್ಸಿಜನ್ ಕಂಟೇನರ್ ತರುವುದು, ದೇಶದೊಳಗೆ ಬೇರೆ ಬೇರೆ ರಾಜ್ಯಗಳಿಗೆ ಆಮ್ಲಜನಕದ ಕಂಟೇನರ್ ಅನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

4 Oxygen Container Imports From Indonesia To India In IAF IL-76 Flight.

ದೇಶದ ಶೇ 98ರಷ್ಟು ಜನತೆ ಮೇಲೆ ಲಾಕ್‌ಡೌನ್ ಹೇರಿಕೆದೇಶದ ಶೇ 98ರಷ್ಟು ಜನತೆ ಮೇಲೆ ಲಾಕ್‌ಡೌನ್ ಹೇರಿಕೆ

ಐಎಸ್-76ಎಸ್ ವಿಮಾನದಲ್ಲಿ ಭಾರತೀಯ ವಾಯುಪಡೆ ಸಿಬ್ಬಂದಿಯು ಜಕರ್ತಾ ಮತ್ತು ಇಂಡೋನೆಷ್ಯಾದಿಂದ 4 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ಅನ್ನು ವಿಶಾಖಪಟ್ಟಣಂಗೆ ತರಲಾಗಿದೆ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

ವಿವಿಧ ರಾಷ್ಟ್ರಗಳಿಂದ ವೈದ್ಯಕೀಯ ಸಾಮಗ್ರಿ:
ಭಾರತಕ್ಕೆ ವಿವಿಧ ರಾಷ್ಟ್ರಗಳಿಂದ ವೈದ್ಯಕೀಯ ಸಾಮಗ್ರಿಗಳನ್ನು ತರಲಾಗುತ್ತಿದೆ. ಭಾರತೀಯ ವಾಯುಪಡೆಯ ಸಿ-17 ವಿಮಾನದಲ್ಲಿ ಜಿಯೋಲೈಟ್ ಎಂಬ ಉಸಿರಾಟ ಸಂಬಂಧಿತ ರೋಗ ಚಿಕಿತ್ಸೆ ಸಾಧನವನ್ನು ಜರ್ಮನಿಯ ಫ್ರಾಂಕ್ ಫರ್ಟ್ ನಿಂದ ಮಹಾರಾಷ್ಟ್ರದ ಮುಂಬೈಗೆ ತರಲಾಗಿದೆ. ಇನ್ನೊಂದು ಕಡೆ ಎರಡು ಸಿ-17 ವಿಮಾನಗಳಲ್ಲಿ ಫ್ರಾನ್ಸಿನ ಬೋರ್ಡಿಯಕ್ಸ್ ನಿಂದ ಉತ್ತರ ಪ್ರದೇಶದ ಗಜಿಯಾಬಾದ್ ನಗರಕ್ಕೆ ಎರಡು ಆಕ್ಸಿಜನ್ ಕಂಟೇನರ್ ಅನ್ನು ತರಲಾಗಿದೆ.
ದೇಶದ ಪ್ರಮುಖ ನಗರಗಳಿಗೆ ಆಕ್ಸಿಜನ್ ರವಾನೆ:
ಭಾರತೀಯ ವಾಯುಪಡೆಯು ಸಿ-17 ವಿಮಾನಗಳಲ್ಲಿ ಆಕ್ಸಿಜನ್ ಮತ್ತು ವೈದ್ಯಕೀಯ ಉಪಕರಣಗಳನ್ನು ಪ್ರಮುಖ ನಗರಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಪುಣೆಯಿಂದ ಜಾಮಾನಗರಕ್ಕೆ 4, ಗ್ವಾಲಿಯಾರ್ ಮತ್ತು ಭೋಪಾಲ್ ನಿಂದ ರಾಂಚಿಗೆ 7 ಹಾಗೂ ಹಿಂಡೋನ್ ನಿಂದ ರಾಂಚಿಗೆ 2 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ಸಾಗಿಸಲಾಗಿದೆ. ಇದರ ಜೊತೆಗೆ ವಿಜಯವಾಡದಿಂದ ಭುವನೇಶ್ವರಗೆ 2, ಚಂಡೀಘರ್ ನಿಂದ ರಾಂಚಿಗೆ 6, ಆಗ್ರಾದಿಂದ ಜಾಮಾನಗರಕ್ಕೆ 2, ಹೈದ್ರಾಬಾದ್ ನಿಂದ ಭುವನೇಶ್ವರ 6 ಮತ್ತು ಜೋಧಪುರದಿಂದ ಜಾಮಾನಗರಕ್ಕೆ 2 ಕ್ರಯೋಜೆನಿಕ್ ಆಕ್ಸಿಜನ್ ಕಂಟೇನರ್ ರವಾನಿಸಲಾಗಿದೆ.

English summary
4 Oxygen Container Imports From Indonesia To India In IAF IL-76 Flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X