• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಆಧಾರ್' ಹೆಸರಲ್ಲಿ ಠೇವಣಿದಾರರ ಖಾತೆಗೆ ಕನ್ನ ಕೊರೆದ ಬ್ಯಾಂಕ್ ಸಿಬ್ಬಂದಿ

By Sachhidananda Acharya
|

ನವದೆಹಲಿ, ಫೆಬ್ರವರಿ 8: ಬ್ಯಾಂಕ್ ಅಧಿಕಾರಿಗಳೇ ಆಧಾರ್ ಕಾರ್ಡ್ ದೃಢೀಕರಣ ಹೆಸರಿನಲ್ಲಿ ಗ್ರಾಹಕರಿಗೆ ವಂಚಿಸಿದ ಪ್ರಕರಣಗಳು ವರದಿಯಾಗಿವೆ. ನಾಲ್ಕು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಸಿಬ್ಬಂದಿಗಳು ಹೀಗೆ ಠೇವಣಿದಾರರ 1.42 ಕೋಟಿ ಹಣ ದೋಚಿದ್ದು ಬೆಳಕಿಗೆ ಬಂದಿದೆ.

ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ಗಳು ಈ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ನೀಡಿವೆ.

ಗ್ರಾಹಕರ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಅವರ ಖಾತೆಗಳಿಂದ ಹಣವನ್ನು ಡ್ರಾ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಹಣಕಾಸು ಖಾತೆ ರಾಜ್ಯ ದರ್ಜೆ ಸಚಿವ ಶಿವ ಪ್ರತಾಪ್ ಶುಕ್ಲಾ ಮಂಗಳವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದ ಎರಡು ಪ್ರಕರಣಗಳಲ್ಲಿ ಅದರ ಸಿಬ್ಬಂದಿಗಳು ತಪ್ಪಾಗಿ ಅಥವಾ ಮೋಸ ಮಾಡಿ ಆಧಾರ್ ಸಂಖ್ಯೆಗಳನ್ನು ಮ್ಯಾಪಿಂಗ್ ಮಾಡಿದ್ದಾರೆ. ಈ ಮೂಲಕ ಗ್ರಾಹಕರ ಖಾತೆಯಿಂದ 1.37 ಕೋಟಿ ರೂಪಾಯಿ ಹಣವನ್ನು ಡ್ರಾ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಈ ರೀತಿಯ ಘಟನೆ ನಡೆಯದಂತೆ ಬ್ಯಾಂಕ್ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಬ್ಯಾಂಕ್ ಹೇಳಿದೆ.

ಇನ್ನು ಅಲಹಾಬಾದ್ ಬ್ಯಾಂಕ್ ನಲ್ಲಿ ಗ್ರಾಹಕರೊಬ್ಬರ ಖಾತೆಯಿಂದ 49,000 ರೂಪಾಯಿಗಳನ್ನು ಡ್ರಾ ಮಾಡಲಾಗಿದೆ. ಇಲ್ಲಿ ಒಂದೇ ಆಧಾರ್ ಸಂಖ್ಯೆ ಎರಡು ಬೇರೆ ಬೇರೆ ಹೆಸರಿನ ವ್ಯಕ್ತಿಗಳ ಕಾರ್ಡ್ ನಲ್ಲಿ ಮುದ್ರಣವಾಗಿತ್ತು ಎಂದು ಬ್ಯಾಂಕ್ ಹೇಳಿದೆ. ಆದರೆ ಈ ಪ್ರಕರಣವನ್ನು ಪತ್ತೆ ಹಚ್ಚಿ ಹಣವನ್ನು ಮರಳಿಸಲಾಗಿದೆ.

ಈ ಪ್ರಕರಣದಲ್ಲಿ ನಾವು ನಕಲಿ ಆಧಾರ್ ಕಾರ್ಡ್ ಮುದ್ರಣ ಮಾಡಿರುವುದನ್ನು ಪತ್ತೆ ಹಚ್ಚಿದ್ದೇವೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

ಇದ ರೀತಿ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯೊಬ್ಬರು ಠೇವಣಿದಾರರ ಖಾತೆಯಿಂದ ಡ್ರಾ ಮಾಡಿದ್ದ 2,26,000 ರೂಪಾಯಿಗಳ್ನು ಹಿಂಪಡೆದಿದೆ. ಇದಾದ ಬಳಿಕ ಬ್ಯಾಂಕ್ ಖಾತೆ ಇತೆ ಆಧಾರ್ ಲಿಂಕ್ ಮಾಡಲು ನಿರ್ಧಿಷ್ಟ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ.

ಇದೇ ರೀತಿ ಕಳೆದ ವರ್ಷ ಯುಕೋ ಬ್ಯಾಂಕ್ ನಿಂದ 1,21,500 ರೂಪಾಯಿ ಡ್ರಾ ಮಾಡಲಾಗಿತ್ತು. ಇದರಲ್ಲಿ ಕೈಜೋಡಿಸಿದ್ದ ಬ್ಯಾಂಕ್ ಸಿಬ್ಬಂದಿ ನಂತರ ಸಿಕ್ಕಿಬಿದ್ದಿದ್ದರು. ಈ ಬ್ಯಾಂಕ್ ಅಧಿಕಾರಿ ಗ್ರಾಹಕರ ಖಾತೆಯಿಂದ 1,15,000 ಪಡೆದುಕೊಂಡಿದ್ದು ಬಹಿರಂಗವಾಗಿತ್ತು.

2016-17ರಲ್ಲಿ ಇದೇ ರೀತಿ 20 ಪ್ರಕರಣಗಳಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಂದ 7,65,268 ರೂಪಾಯಿ ಡ್ರಾ ಮಾಡಿದ್ದು ಪತ್ತೆಯಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aadhar- this is scary, Bank staff fraudulently withdraw money from customers' bank accounts using Aadhaar details in 4 banks. This comes at a time when SC is hearing the Aadhaar case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more