ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದ ಉತ್ತರಕಾಶಿಯಲ್ಲಿ ಶನಿವಾರ ಬೆಳಗ್ಗೆ 4.1 ತೀವ್ರತೆಯ ಭೂಕಂಪನ

|
Google Oneindia Kannada News

ಉತ್ತರ ಕಾಶಿ, ಫೆಬ್ರವರಿ 12: ಉತ್ತರಾಖಂಡದ ಉತ್ತರಕಾಶಿಯಲ್ಲಿ ಶನಿವಾರ ಬೆಳಗ್ಗೆ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಉತ್ತರಕಾಶಿಯಿಂದ ಪೂರ್ವಕ್ಕೆ 39 ಕಿಮೀ ದೂರದಲ್ಲಿ ತೆಹ್ರಿ ಗರ್ವಾಲ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 5.03ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಅಕ್ಷಾಂಶ 30.72 ಮತ್ತು ರೇಖಾಂಶ 78.85 ರಲ್ಲಿ 28 ಕಿಮೀ ಆಳದಲ್ಲಿದೆ.

Breaking: ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿಯಲ್ಲಿ 5.7 ತೀವ್ರತೆ ಭೂಕಂಪBreaking: ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿಯಲ್ಲಿ 5.7 ತೀವ್ರತೆ ಭೂಕಂಪ

ಲಘು ಭೂಕಂಪದಲ್ಲಿ ಯಾವುದೇ ರೀತಿ ಸಾವು-ನೋವು ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಪರಿಷ್ಕೃತ ಮರ್ಕಲ್ಲಿ ಇಂಟೆನ್ಸಿಟಿ ಸ್ಕೇಲ್ ಎಲ್ಲರಿಗೂ ಅನಿಸುವಷ್ಟು ಪ್ರಬಲವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, 4.1-ತೀವ್ರತೆಯ ಭೂಕಂಪನದಿಂದ ಪ್ಲ್ಯಾಸ್ಟರ್ ಮತ್ತು ಗಾಜಿನ ವಸ್ತುಗಳು ಬಿದ್ದು ಒಡೆಯುವಷ್ಟು ತೀವ್ರತೆಯನ್ನು ಹೊಂದಿರುತ್ತವೆ.

4.1-magnitude earthquake in Uttarakhands Uttarkashi early morning

ಕಳೆದ ವಾರ ಕಾಶ್ಮೀರದಲ್ಲಿ ಕಂಪಿಸಿದ ಭೂಮಿ:
ಕಳೆದ ವಾರ ಅಫ್ಘಾನಿಸ್ತಾನ-ತಜಕಿಸ್ತಾನ್ ಗಡಿ ಪ್ರದೇಶದಲ್ಲಿ ಸಂಭವಿಸಿದ 5.7 ತೀವ್ರತೆಯ ಭೂಕಂಪದ ನಂತರ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಇತರೆ ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು. ಅಂದು 181 ಕಿಮೀ ಆಳದಲ್ಲಿ 9.45 ISTಕ್ಕೆ ಭೂಕಂಪ ಸಂಭವಿಸಿದೆ.

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 12 ಮಂದಿ ಸಾವುಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 12 ಮಂದಿ ಸಾವು

Recommended Video

ತಕ್ಷಣವೇ Ukraine ತೊರೆಯುವಂತೆ ಅಮೆರಿಕನ್ನರಿಗೆ ಎಚ್ಚರಿಕೆ ಕೊಟ್ಟ Joe Biden | Oneindia Kannada

ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರಿಗೆ ಕರೆ ಮಾಡಿ ಭೂಕಂಪನದ ನಂತರ ಕೇಂದ್ರಾಡಳಿತ ಪ್ರದೇಶದ ಪರಿಸ್ಥಿತಿಯ ಹೇಗಿದೆ ಎಂಬುದರ ಬಗ್ಗೆ ವಿಚಾರಿಸಿದ್ದರು.
ಉತ್ತರಾಖಂಡದಲ್ಲಿ ಕಳೆದ ವಾರವೂ ಭೂಕಂಪನ:
ಕಳೆದ ಫೆಬ್ರವರಿ 5ರಂದು ಉತ್ತರ ಭಾರತದ ಹಲವೆಡೆ ಭೂಕಂಪನ ಸಂಭವಿಸಿದ ದಿನವೇ ಉತ್ತರಾಖಂಡದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲಾಗಿತ್ತು. ಉತ್ತರಕಾಶಿಯಿಂದ 58 ಕಿಮೀ ದೂರದಲ್ಲಿ ಶನಿವಾರ ಮಧ್ಯರಾತ್ರಿ 3.15ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಅಕ್ಷಾಂಶ 31.14 ಮತ್ತು ರೇಖಾಂಶ 78.06 ರಲ್ಲಿ 10 ಕಿಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಟ್ವೀಟ್ ಮಾಡಿತ್ತು.

English summary
4.1-magnitude earthquake in Uttarakhand's Uttarkashi early morning
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X