ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಯನ ಆಧಾರ: ಈಗ ಉತ್ತಮ ರಕ್ಷಣೆಗಾಗಿ ಕೋವಿಡ್‌ ಲಸಿಕೆಯ 3 ನೇ ಡೋಸ್‌ ಬಗ್ಗೆ ಚರ್ಚೆ!

|
Google Oneindia Kannada News

ಲಂಡನ್‌, ಜೂ.29: ಬ್ರಿಟಿಷ್-ಸ್ವೀಡಿಷ್ ಸಂಸ್ಥೆಯೊಂದಿಗೆ ಅಭಿವೃದ್ಧಿಪಡಿಸಿದ ಅಸ್ಟ್ರಾಜೆನೆಕಾ ಲಸಿಕೆಯ ವಿಳಂಬವಾದ ಎರಡನೇ ಮತ್ತು ಮೂರನೇ ಡೋಸೇಜ್‌ಗಳು ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನವು ಜೂನ್ 28 ರಂದು ತಿಳಿಸಿದೆ.

ಅಸ್ಟ್ರಾಜೆನೆಕಾ ಲಸಿಕೆಯ ಮೊದಲ ಮತ್ತು ಎರಡನೆಯ ಡೋಸ್ ನಡುವೆ 45 ವಾರಗಳ ಕಾಲವು ಹೆಚ್ಚು ರೋಗನಿರೋಧಕ ಶಕ್ತಿಯನ್ನು ವೃದ್ದಿ ಮಾಡುತ್ತದೆ ಎಂದು ಈ ಅಧ್ಯಯನವು ತಿಳಿಸಿದೆ.

ದೇಶದಲ್ಲಿ ಮಂಗಳವಾರ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ ದಿಢೀರ್‌ ಇಳಿಕೆದೇಶದಲ್ಲಿ ಮಂಗಳವಾರ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ ದಿಢೀರ್‌ ಇಳಿಕೆ

ಈವರೆಗೆ ಎರಡು ಡೋಸ್‌ ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಈಗೊಂದು ಅಧ್ಯಯನವು ಎರಡನೇ ಡೋಸ್ ನಂತರ ಆರು ತಿಂಗಳಿಗಿಂತಲೂ ಹೆಚ್ಚು ಸಮಯದ ನಂತರ ಮೂರನೆಯ ಡೋಸ್‌ ತೆಗೆದುಕೊಳ್ಳುವುದು ಪ್ರತಿಕಾಯಗಳಲ್ಲಿ "ಗಣನೀಯ ಹೆಚ್ಚಳ"ಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ. ಈ ಅಧ್ಯಯನವನ್ನು ಈ ಲಸಿಕೆ ಅಭಿವೃದ್ಧಿಯ ಹಿಂದಿನ ಪ್ರಮುಖ ಗುಂಪಾಗಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ನಡೆಸಿದೆ.

 ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ 3 ನೇ ಡೋಸ್‌ನಿಂದ ರೋಗನಿರೋಧಕ ಹೆಚ್ಚಳ?

ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ 3 ನೇ ಡೋಸ್‌ನಿಂದ ರೋಗನಿರೋಧಕ ಹೆಚ್ಚಳ?

ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್‌ ಲಸಿಕೆ ಬಳಕೆ ಮತ್ತು ಮಿತಿಗಳ ವಿವಾದಗಳಿಂದ ಕೂಡಿದೆ. ಆದರೆ ಇದು ಇನ್ನೂ ಬಳಕೆಯಲ್ಲಿರುವ ಅತ್ಯಂತ ಜನಪ್ರಿಯ ಲಸಿಕೆಗಳಲ್ಲಿ ಒಂದಾಗಿದೆ. ಇತ್ತೀಚಿನ ಅಧ್ಯಯನಗಳು ಲಸಿಕೆ ಡೆಲ್ಟಾ ಕೋವಿಡ್‌ ರೂಪಾಂತರದ ವಿರುದ್ಧ ಉತ್ತಮವಾಗಿ ಪರಿಣಾಮಕಾರಿಯಾಗಿದೆ ಎಂದು ಸೂಚಿಸಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಲಸಿಕೆಯನ್ನು ಇತರ ಲಸಿಕೆಗಳಿಗಿಂತ ಭಿನ್ನವಾಗಿ, ತಿಂಗಳುಗಳ ಅಂತರದಲ್ಲಿ ವಿತರಿಸಿದಾಗ ಅತ್ಯಧಿಕ ಪ್ರಬಲ ಪರಿಣಾಮಕಾರಿತ್ವವನ್ನು ಬೀರುತ್ತದೆ. ಲಸಿಕೆಯನ್ನು ಪ್ರಸ್ತುತ 3-4 ತಿಂಗಳುಗಳ ಅಂತರದಲ್ಲಿ ನೀಡಲಾಗುತ್ತದೆ. ಇದು ಉತ್ತಮ ಪ್ರತಿಕಾಯಗಳ ಸೃಷ್ಟಿಗೆ ಕಾರಣವಾಗುತ್ತದೆ. ಈ ಶಿಫಾರಸುಗಳು ಪ್ರಸ್ತುತ ಭಾರತ ಮತ್ತು ಯುನೈಟೆಡ್ ಕಿಂಗ್‌ಡಂನಂತಹ ದೇಶಗಳಲ್ಲಿ ಜಾರಿಯಲ್ಲಿವೆ. ಈಗ, ಹೊಸ ಅಧ್ಯಯನಗಳು ಲಸಿಕೆ ಪ್ರಮಾಣದ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ. ಮೊದಲನೆಯ ಲಸಿಕೆಯ ಕನಿಷ್ಠ 10 ತಿಂಗಳ ನಂತರ ಜನರಿಗೆ 'ಮೂರನೇ' ಪ್ರಮಾಣವನ್ನು ಪಡೆಯಲು ಅವಕಾಶ ಮಾಡಿಕೊಡುವುದು ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಸೂಚಿಸಿದೆ.

 ಇತ್ತೀಚಿನ ಅಧ್ಯಯನಗಳು ಏನು ಹೇಳುತ್ತದೆ?

ಇತ್ತೀಚಿನ ಅಧ್ಯಯನಗಳು ಏನು ಹೇಳುತ್ತದೆ?

''ಹಿಂದಿನ ತಿಂಗಳುಗಳಲ್ಲಿ ನಡೆಸಿದ ಅನೇಕ ಅಧ್ಯಯನಗಳು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಎರಡನೇ ಪ್ರಮಾಣವನ್ನು ವಿಳಂಬಗೊಳಿಸುವುದರಿಂದ ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ನೀಡುತ್ತದೆ ಮತ್ತು ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ,'' ಎಂದು ತಿಳಿಸಿದೆ. ಹೊಸ ಕ್ಲಿನಿಕಲ್ ಅವಲೋಕನಗಳ ಪ್ರಕಾರ, ಲಸಿಕೆಯ ಸಂಭವನೀಯ 'ಮೂರನೇ' ಪ್ರಮಾಣವನ್ನು ತಡವಾಗಿ ನೀಡಬಹುದಾಗಿದೆ, ಇದು ಕೋವಿಡ್‌ ವಿರುದ್ಧ ಲಸಿಕೆಯ ಪ್ರತಿರಕ್ಷೆ ಮತ್ತು ಪರಿಣಾಮಕಾರಿತ್ವದ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಈ ಅಧ್ಯಯನವು ಲಸಿಕೆ ಡೋಸೇಜ್ ನಡುವಿನ ಅಂತರ ವಿಳಂಬವು ಉತ್ತಮ ಪರಿಣಾಮಕಾರಿ ಎಂದು ಪ್ರತಿಪಾದಿಸಿದೆ.

ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಗಣನೀಯ ಇಳಿಕೆಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಗಣನೀಯ ಇಳಿಕೆ

 ಡೋಸೇಜ್‌ ಅಂತರ ಹೆಚ್ಚಳದಿಂದ ಪ್ರತಿರಕ್ಷೆ ಹೆಚ್ಚಳವಾಗುತ್ತದೆಯೇ?

ಡೋಸೇಜ್‌ ಅಂತರ ಹೆಚ್ಚಳದಿಂದ ಪ್ರತಿರಕ್ಷೆ ಹೆಚ್ಚಳವಾಗುತ್ತದೆಯೇ?

ಅಸ್ಟ್ರಾಜೆನೆಕಾ ಲಸಿಕೆ ರೂಪಾಂತರಿತ ತಳಿಗಳ ವಿರುದ್ಧ ಉತ್ತಮವಾಗಿ ಪರಿಣಾಮಕಾರಿಯಾಗಿದೆ ಮತ್ತು ಲಸಿಕೆ ಸುರಕ್ಷಿತವಾಗಿದೆ. ಆದರೆ ಇತರ ಲಸಿಕೆಗಳಿಗೆ ಹೋಲಿಸಿದರೆ ಇದು ಕಡಿಮೆ ಪರಿಣಾಮಕಾರಿತ್ವವಾಗಿದೆ. ಲಸಿಕೆಯ ಒಂದು ಡೋಸ್‌ನಿಂದ ಕಡಿಮೆ ಪ್ರತಿಕಾಯ ಸೃಷ್ಟಿಯಾಗುತ್ತದೆ. ಆದಾಗ್ಯೂ, ಇನ್ನೂ ಪ್ರಕಟವಾಗದ ಆಕ್ಸ್‌ಫರ್ಡ್ ಅಧ್ಯಯನವು, ಲಸಿಕೆಯ ಮೂರನೇ ಪ್ರಮಾಣ ತೆಗೆದುಕೊಳ್ಳುವುದು ಹೆಚ್ಚು ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ನೀಡುತ್ತದೆ ಹಾಗೂ ಪ್ರತಿಕಾಯಗಳಲ್ಲಿ 'ಗಣನೀಯ' ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತದೆ. ಇನ್ನು ಲಸಿಕೆಯ ಎರಡನೇ ಪ್ರಮಾಣವನ್ನು 10 ತಿಂಗಳ ನಂತರ ನೀಡಿದಾಗ ಲಸಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಒಟ್ಟಾರೆಯಾಗಿ, ಸಂಶೋಧಕರು ಮೂರನೇ ಸಂಭಾವ್ಯ ಕೋವಿಡ್‌ ಡೋಸ್‌ನ ಅಗತ್ಯವನ್ನು ಪ್ರತಿಪಾದಿಸಿದೆ. ಲಸಿಕೆಯ ಅಡ್ಡಪರಿಣಾಮಕಾರಿ ಹೆಚ್ಚಾಗಿ ಇರಲಾರದು ಎಂದು ಅಧ್ಯಯನ ತಿಳಿಸಿದೆ.

ಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರ

 ಡೋಸ್‌ಗಳ ವಿಳಂಬ ಕೋವಿಡ್‌ ರೂಪಾಂತರಗಳ ವಿರುದ್ದ ಪರಿಣಾಮಕಾರಿಯೇ?

ಡೋಸ್‌ಗಳ ವಿಳಂಬ ಕೋವಿಡ್‌ ರೂಪಾಂತರಗಳ ವಿರುದ್ದ ಪರಿಣಾಮಕಾರಿಯೇ?

ಎರಡನೆಯದಾಗಿ, ಮತ್ತಷ್ಟು ವಿಳಂಬವಾಗಿ ಕೋವಿಡ್‌ ಡೋಸ್‌ ಪಡೆಯುವುದು, ಉತ್ತಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಹೇಳುವ ಈ ಅಧ್ಯಯನವು, ಪ್ರಸ್ತುತ ಲಸಿಕೆ ಕೊರತೆಯನ್ನು ಎದುರಿಸುತ್ತಿರುವ ದೇಶಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಒಂದು ಡೋಸ್‌ ಪಡೆದ ಬಳಿಕ ಇನ್ನೊಂದು ಡೋಸ್‌ ಪಡೆಯುವಾಗ ವಿಳಂಬ ಮಾಡುವುದೇ ಉತ್ತಮ ಎಂದು ಈ ಸಂಶೋಧಕರು ಹೇಳುತ್ತಾರೆ. ಮೂರನೆಯ ಡೋಸ್‌ನಿಂದ ಸಾಕಷ್ಟು ಪ್ರತಿಕಾಯಗಳು ದೇಹದಲ್ಲಿ ಸೃಷ್ಟಿಯಾಗುತ್ತದೆ ಇದು ಕೊರೊನಾ ರೂಪಾಂತರಗಳ ವಿರುದ್ದ ಹೋರಾಡಲು ಸಹಕಾರಿ ಎನ್ನಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
3rd dose of the AstraZeneca vaccine administered more than six months after the second could boost protection against COVID-19, an Oxford University study has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X