ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬಕ್ಕಾಗಿ 392 ವಿಶೇಷ ರೈಲು, ಟಿಕೆಟ್ ದರವೂ ಹೆಚ್ಚು

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಕೊರೊನಾ ವೈರಸ್ ಸೋಂಕಿನ ನಡುವೆ ಹಬ್ಬದ ಸಂಭ್ರಮವೂ ಬಂದಿದೆ. ಇದರಿಂದ ಊರಿಂದೂರಿಗೆ ಪ್ರಯಾಣಿಸುವ ಜನರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ವಿಶೇಷ ರೈಲುಗಳ ಕೊಡುಗೆ ನೀಡಿದೆ. ಅಕ್ಟೋಬರ್ 20ರಿಂದ ನವೆಂಬರ್ 30ರವರೆಗೆ 392 ಹಬ್ಬದ ವಿಶೇಷ ರೈಲುಗಳ ಸಂಚಾರ ನಡೆಯಲಿದೆ.

ದೇಶದಾದ್ಯಂತ ಸಾಲು ಸಾಲು ಹಬ್ಬಗಳು ಶುರುವಾಗುತ್ತಿದ್ದು, ಈ ಅವಧಿಯಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಲಿದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ರೈಲ್ವೆ ಸಚಿವಾಲಯದ ಹೇಳಿಕೆ ತಿಳಿಸಿದೆ. ಕೋಲ್ಕತಾ, ಪಟ್ನಾ, ವಾರಣಾಸಿ, ಲಕ್ನೋ, ಮೈಸೂರು ಸೇರಿದಂತೆ ಪ್ರಮುಖ ನಗರಗಳಿಗೆ ದಸರಾ, ದುರ್ಗಾ ಪೂಜೆ, ದೀಪಾವಳಿ, ಛಾತ್ ಪೂಜಾ ಮುಂತಾದ ಹಬ್ಬಗಳಿಗಾಗಿ ತೆರಳುವವರ ಅನುಕೂಲಕ್ಕಾಗಿ ಈ ರೈಲುಗಳ ಸಂಚಾರ ನಡೆಸಲಾಗುತ್ತಿದೆ.

ರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳುರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳು

ವಿಶೇಷ ರೈಲುಗಳಿಗೆ ಅನ್ವಯವಾಗುವ ಟಿಕೆಟ್ ದರವೇ ಈ ರೈಲುಗಳಿಗೆ ಅನ್ವಯವಾಗಲಿದೆ. ಅಂದರೆ ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್ ದರಕ್ಕೆ ಹೋಲಿಸಿದರೆ ದರವು ಶೇ 10-30ರವರೆಗೂ ಹೆಚ್ಚಿರಲಿದೆ. ಪ್ರಯಾಣದ ಬೋಗಿಯನ್ನು ಇದು ಅವಲಂಬಿಸಲಿದೆ.

392 Festival Special Trains From Oct 20-Nov 30 Fares Higher Than Normal Trains

ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ

ಈ ಸೇವೆಗಳು ಸಾಧ್ಯವಾದಷ್ಟೂ ಕನಿಷ್ಠ 55 ಕಿಮೀ ವೇಗದ ಸೂಪರ್ ಫಾಸ್ಟ್ ಸೇವೆಗಳಾಗಿರಲಿವೆ. ವಲಯ ರೈಲ್ವೆಯು ಈ ಸೇವೆಗಳನ್ನು ಉತ್ತಮ ಸ್ಥಿತಿಯಲ್ಲಿ ಇರುವ ಎಸಿ 3 ಟೈರ್ ಕೋಚ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

English summary
Indian Railways has announced 392 festival special trains from October 20 to November 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X