ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್ ದುರಂತ: ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ

|
Google Oneindia Kannada News

ನವದೆಹಲಿ, ಏಪ್ರಿಲ್ 03: ಕಳೆದ ನಾಲ್ಕು ವರ್ಷಗಳ ಹಿಂದೆ ಇರಾಕ್ ನ ಮಾಸುಲ್ ಐಸಿಸ್(ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಅಂಡ್ ಸಿರಿಯಾ) ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಯಾದ 39 ಭಾರತೀಯರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 10 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

2014 ರಲ್ಲಿ ಅಪಹರಣಕ್ಕೊಳಗಾಗಿದ್ದ 40 ಭಾರತೀಯರಲ್ಲಿ 39 ಜನ ಮೃತರಾಗಿದ್ದಾರೆಂಬ ಸುದ್ದಿಯನ್ನು ಮಾರ್ಚ್ 22 ರಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೊರಹಾಕಿದ್ದರು. ಅದುವರೆಗೂ ಈ 39 ಜನರೂ ಬದುಕಿಲ್ಲ ಎಂಬ ವದಂತಿ ಹರಿದಾಡಿತ್ತಾದರೂ ಸ್ಪಷ್ಟ ಸಾಕ್ಷ್ಯವಿಲ್ಲದ ಕಾರಣ ಈ ಕುರಿತು ನಿಖರ ಮಾಹಿತಿಯನ್ನಾಗಲೀ, ಅಧಿಕೃತ ಹೇಳಿಕೆಯನ್ನಾಗಲೀ ಸರ್ಕಾರ ನೀಡಿರಲಿಲ್ಲ.

ಇರಾಕ್‌ನ ಆ ದಿಬ್ಬದ ಅಡಿಯಲ್ಲಿತ್ತು 39 ಭಾರತೀಯರ ಶವಇರಾಕ್‌ನ ಆ ದಿಬ್ಬದ ಅಡಿಯಲ್ಲಿತ್ತು 39 ಭಾರತೀಯರ ಶವ

ಏ.1 ರಂದು ಇರಾಕಿಗೆ ಪ್ರಯಾಣ ಬೆಳೆಸಿದ್ದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್, 39 ಭಾರತೀಯರ ಮೃತ ಶರೀರವನ್ನು ನಿನ್ನೆ(ಏ.2) ಸ್ವದೇಶಕ್ಕೆ ಕರೆತಂದಿದ್ದರು. ಆದರೆ ತಮಗೆ ಸರ್ಕಾರ ಪರಿಹಾರ ನೀಡುವವರೆಗೂ ಪಾರ್ಥಿವ ಶರೀರ ಸ್ವೀಕರಿಸುವುದಿಲ್ಲ ಎಂದು ಕೆಲವು ಕುಟುಂಬದ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

39 Indians Died in Iraq: PM Modi announces Rs.10 lakh ex gratia for family

ಈ ಬೆಳವಣಿಗೆ ನಂತರ ಇಂದು(ಏ.3) ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಿದ್ದಾರೆ.

English summary
PM announces ex-gratia payment of Rs 10 lakh each to families of those killed in Iraq's Mosul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X