ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 24 ಗಂಟೆಯಲ್ಲಿ 38,902 ಕೋವಿಡ್ ಪ್ರಕರಣ ದಾಖಲು

|
Google Oneindia Kannada News

ನವದೆಹಲಿ, ಜುಲೈ 19 : ಕೊರೊನಾ ವೈರಸ್ ಸೋಂಕು ಭಾರತದಲ್ಲಿ ಹೆಚ್ಚಾಗುತ್ತಿದೆ. 24 ಗಂಟೆಯಲ್ಲಿ ದೇಶದಲ್ಲಿ 38,902 ಹೊಸ ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ ಇಷ್ಟು ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲು.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

ಶನಿವಾರ ಬೆಳಗ್ಗೆ 8 ಗಂಟೆಯಿಂದ ಭಾನುವಾರ ಬೆಳಗ್ಗೆ 8 ಗಂಟೆ ತನಕ ದೇಶದಲ್ಲಿ 38 ಸಾವಿರ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ.

 ಕರ್ನಾಟಕದಲ್ಲಿ 4537 ಜನರಿಗೆ ಕೊರೊನಾ ಸೋಂಕು ಕರ್ನಾಟಕದಲ್ಲಿ 4537 ಜನರಿಗೆ ಕೊರೊನಾ ಸೋಂಕು

24 ಗಂಟೆಯಲ್ಲಿ 38,902 ಹೊಸ ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲು. ಈ ಅವಧಿಯಲ್ಲಿ ದೇಶದಲ್ಲಿ 543 ಸೋಂಕಿತರ ಸಾವನ್ನಪ್ಪಿದ್ದಾರೆ. ಇದರಿಂದಾಗಿ ದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 26,816ಕ್ಕೆ ಏರಿಕೆಯಾಗಿದೆ ಎಂದು ಐಸಿಎಂಆರ್ ವರದಿ ಹೇಳಿದೆ.

ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,73,379. ಇದುವರೆಗೂ 6,77,423 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿ!ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿ!

ಅಂತರ ಜಿಲ್ಲಾ ಸಂಚಾರ ರದ್ದು

ಅಂತರ ಜಿಲ್ಲಾ ಸಂಚಾರ ರದ್ದು

ಅಸ್ಸಾಂನಲ್ಲಿ 22,982 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಲು ಸರ್ಕಾರ ಜುಲೈ 22ರಿಂದ ಮುಂದಿನ ಆದೇಶದ ತನಕ ಅಂತರ ಜಿಲ್ಲಾ ಪ್ರಯಾಣವನ್ನು ನಿಷೇಧಿಸಿದೆ. ಗೌಹಾತಿಯಲ್ಲಿ ಜಾರಿಯಲ್ಲಿರುವ ಮೂರು ವಾರಗಳ ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

3 ಲಕ್ಷದ ಗಡಿ ದಾಟಿದ ಮಹಾರಾಷ್ಟ್ರ

3 ಲಕ್ಷದ ಗಡಿ ದಾಟಿದ ಮಹಾರಾಷ್ಟ್ರ

ಮಹಾರಾಷ್ಟ್ರ ರಾಜ್ಯದಲ್ಲಿ ಶನಿವಾರ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. 1,186 ಹೊಸ ಪ್ರಕರಣಗಳು ಮುಂಬೈನಲ್ಲಿ ದಾಖಲಾಗಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ.

ದೆಹಲಿ ರಾಜ್ಯದ ಸ್ಥಿತಿ ಏನು?

ದೆಹಲಿ ರಾಜ್ಯದ ಸ್ಥಿತಿ ಏನು?

ದೆಹಲಿಯಲ್ಲಿ ಶನಿವಾರ 1,475 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,21,582ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 1,973 ಜನರು ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 1,01,274ಕ್ಕೆ ಏರಿಕೆಯಾಗಿದೆ.

ಆಂಧ್ರಪ್ರದೇಶ ರಾಜ್ಯ

ಆಂಧ್ರಪ್ರದೇಶ ರಾಜ್ಯ

ಶನಿವಾರ ಆಂಧ್ರಪ್ರದೇಶದಲ್ಲಿ 3,963 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಒಂದೇ ದಿನದಲ್ಲಿ ಇಷ್ಟು ಪ್ರಕರಣ ಪತ್ತೆಯಾಗಿದ್ದು ಇದೇ ಮೊದಲು. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 44,609ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ 52 ಜನರು ಸಾವನ್ನಪ್ಪಿದ್ದಾರೆ.

English summary
COVID - 19 cases highest single day spike with 38,902 new cases and 543 deaths in India. Total positive cases stand at 10,77,618 including 3,73,379 active cases and Total 26,816 deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X