ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 38,772 ಹೊಸ ಕೋವಿಡ್ ಪ್ರಕರಣ ದಾಖಲು

|
Google Oneindia Kannada News

ನವದೆಹಲಿ, ನವೆಂಬರ್ 30 : ಭಾರತದಲ್ಲಿ 38,772 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 94,31,692ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ನವೆಂಬರ್ 29ರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ 443 ಜನರು ದೇಶದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು ಮೃತಪಟ್ಟವರ ಸಂಖ್ಯೆ 1,37,139.

ಶಬರಿಮಲೆ: ಮೂವರು ಪೊಲೀಸರಲ್ಲಿ ಕೋವಿಡ್ ಪಾಸಿಟಿವ್, ತೀವ್ರ ಕಟ್ಟೆಚ್ಚರಶಬರಿಮಲೆ: ಮೂವರು ಪೊಲೀಸರಲ್ಲಿ ಕೋವಿಡ್ ಪಾಸಿಟಿವ್, ತೀವ್ರ ಕಟ್ಟೆಚ್ಚರ

24 ಗಂಟೆಯಲ್ಲಿ 45,333 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 88,47,600 ಜನರು ಗುಣಮುಖಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ದೇಶದ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 4,46,952.

ಬೆಂಗಳೂರಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 95ರಷ್ಟು ಬೆಂಗಳೂರಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 95ರಷ್ಟು

38,772 New COVID Cases On November 29

ನವೆಂಬರ್ 29ರಂದು ದೇಶದಲ್ಲಿ ಒಟ್ಟು 8,76,173 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೂ 14,03,79,976 ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

 ವಿರೋಧ ಲೆಕ್ಕಿಸದ ಭಟ್ಕಳ ಆಡಳಿತ; ಕೋವಿಡ್ ನಡುವೆ ಅಮ್ಯೂಸ್ಮೆಂಟ್ ಪಾರ್ಕ್ ಗೆ ಪರವಾನಗಿ ವಿರೋಧ ಲೆಕ್ಕಿಸದ ಭಟ್ಕಳ ಆಡಳಿತ; ಕೋವಿಡ್ ನಡುವೆ ಅಮ್ಯೂಸ್ಮೆಂಟ್ ಪಾರ್ಕ್ ಗೆ ಪರವಾನಗಿ

ಯಾವ ರಾಜ್ಯದಲ್ಲಿ ಎಷ್ಟು? : ಭಾನುವಾರ ಮಹಾರಾಷ್ಟ್ರದಲ್ಲಿ 5,544 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 4,362 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 18,20,059 ಮತ್ತು ಸಕ್ರಿಯ ಪ್ರಕರಣಗಳು 90,997. ಇದುವರೆಗೂ ರಾಜ್ಯದಲ್ಲಿ47,071 ಜನರು ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಭಾನುವಾರ 3367 ಹೊಸ ಪ್ರಕರಣಗಳು ದಾಖಲಾಗಿವೆ, 3445 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 4,80,813. ಸಕ್ರಿಯ ಪ್ರಕರಣಗಳು
24,405.

ಹಿಮಾಚಲ ಪ್ರದೇಶ ರಾಜ್ಯದಲ್ಲಿ 1,026 ಹೊಸ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 40,003ಕ್ಕೆ ಏರಿಕೆಯಾಗಿದೆ.

ಮುಂಬೈ ನಗರದಲ್ಲಿ 940 ಹೊಸ ಪ್ರಕರಣ ದಾಖಲಾಗಿದ್ದು, 515 ಜನರು ಗುಣಮುಖರಾಗಿದ್ದಾರೆ.
ಒಟ್ಟು ಪ್ರಕರಣಗಳ ಸಂಖ್ಯೆ 2,82,814. ಸಕ್ರಿಯ ಪ್ರಕರಣ 13,157.

ಕರ್ನಾಟಕ 8,83,899. ಆಂಧ್ರ ಪ್ರದೇಶದಲ್ಲಿ 8,67,683, ತಮಿಳುನಾಡಿನಲ್ಲಿ 7,80,505, ಕೇರಳದಲ್ಲಿ 5,99,601 ಕೋವಿಡ್ ಪ್ರಕರಣಗಳಿವೆ.

English summary
India reported 38,772 new COVID-19 cases on November 29, 2020. Total cases rise to 94,31,692 with active cases 4,46,952.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X