ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶ ಈಗ ಕೊರೊನಾ ವೈರಸ್ ಮುಕ್ತವಲ್ಲ

|
Google Oneindia Kannada News

ಇಟಾನಗರ, ಜೂನ್ 04 : ಅರುಣಾಚಲ ಪ್ರದೇಶ ರಾಜ್ಯವನ್ನು ಏಪ್ರಿಲ್ ತಿಂಗಳಿನಲ್ಲಿ ಕೊರೊನಾ ವೈರಸ್ ಸೋಂಕು ಮುಕ್ತ ಎಂದು ಘೋಷಣೆ ಮಾಡಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಕೋವಿಡ್ - 19 ಸಕ್ರಿಯ ಪ್ರಕರಣಗಳ ಸಂಖ್ಯೆ 36.

ಅರುಣಾಚಲ ಪ್ರದೇಶ ರಾಜ್ಯದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕಿನ ಸಂಖ್ಯೆ 37. ಇದರಲ್ಲಿ ಚಂಗ್ಲಾಂಗ್ ಜಿಲ್ಲೆಯೊಂದರಲ್ಲಿಯೇ 25 ಪ್ರಕರಣಗಳಿವೆ. ಆದ್ದರಿಂದ ರಾಜ್ಯ ಕೊರೊನಾ ವೈರಸ್ ಸೋಂಕಿನಿಂದ ಮುಕ್ತವಾಗಿಲ್ಲ.

ಕೊರೊನಾ ವೈರಸ್ ಭೀತಿ: 'No Entry' ಬೋರ್ಡ್ ಹಿಡಿದ ಅರುಣಾಚಲ ಪ್ರದೇಶ ಕೊರೊನಾ ವೈರಸ್ ಭೀತಿ: 'No Entry' ಬೋರ್ಡ್ ಹಿಡಿದ ಅರುಣಾಚಲ ಪ್ರದೇಶ

ಮೊದಲು ರಾಜ್ಯದಲ್ಲಿ ಒಂದು ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿತ್ತು. ಆ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ. ಏಪ್ರಿಲ್ 16ರಂದು ರಾಜ್ಯ ಕೊರೊನಾ ಮುಕ್ತ ಎಂದು ಘೋಷಣೆ ಮಾಡಲಾಗಿತ್ತು.

ಗೋವಾ ಬಳಿಕ ದೇಶದ ಮತ್ತೊಂದು ರಾಜ್ಯ ಕೊರೊನಾ ಮುಕ್ತ ಗೋವಾ ಬಳಿಕ ದೇಶದ ಮತ್ತೊಂದು ರಾಜ್ಯ ಕೊರೊನಾ ಮುಕ್ತ

37 COVID 19 Cases In Arunachal Pradesh Its Not Coronavirus Free State Now

ಕೇಂದ್ರ ಸರ್ಕಾರ ಅಂತರರಾಜ್ಯಗಳ ನಡುವೆ ಸಂಚಾರಕ್ಕೆ ಒಪ್ಪಿಗೆ ನೀಡಿದ ಬಳಿಕ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಯಿತು. ಇದರಿಂದಾಗಿ ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.

ಗೋವಾ ಈಗ ಕೊರೊನಾ ಮುಕ್ತ ರಾಜ್ಯವಲ್ಲ; 13 ಸಕ್ರಿಯ ಕೇಸ್‌ ಗೋವಾ ಈಗ ಕೊರೊನಾ ಮುಕ್ತ ರಾಜ್ಯವಲ್ಲ; 13 ಸಕ್ರಿಯ ಕೇಸ್‌

ಅರುಣಾಚಲ ಪ್ರದೇಶ ರಾಜ್ಯದಲ್ಲಿ ಕಳೆದ 11 ದಿನಗಳಲ್ಲಿ 37 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಆದ್ದರಿಂದ ರಾಜ್ಯ ಕೊರೊನಾ ವೈರಸ್ ಮುಕ್ತ ಎಂಬ ಹಣೆಪಟ್ಟಿ ಕಳಚಿಕೊಂಡಿದೆ.

ಕರ್ನಾಟಕದ ಪಕ್ಕದ ಗೋವಾ ರಾಜ್ಯದಲ್ಲಿಯೂ ಹೀಗೆಯೇ ಆಗಿತ್ತು. ಏಪ್ರಿಲ್‌ನಲ್ಲಿ ರಾಜ್ಯ ಕೊರೊನಾ ವೈರಸ್ ಸೋಂಕು ಮುಕ್ತವಾಗಿತ್ತು. ಮೇ ಅಂತ್ಯದ ವೇಳೆಗೆ ದೆಹಲಿಯಿಂದ ಬಂದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

English summary
37 people tested positive for the Coronavirus in just 11 days at Arunachal Pradesh. State which was declared Coronavirus free after on April 16, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X