ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ : 36 ಬಾಲಾಪರಾಧಿಗಳು ಪರಾರಿ

|
Google Oneindia Kannada News

Madhya Pradesh
ಭೋಪಾಲ್‌, ಅ.3 : ಮಧ್ಯಪ್ರದೇಶದಲ್ಲಿ ಮತ್ತೊಂದು ಜೈಲ್ ಬ್ರೇಕ್ ನಡೆದಿದೆ. ರೇವಾ ಜಿಲ್ಲಾ ಜುವೆನೈಲ್‌ ಸುಧಾರಣಾ ಗೃಹದಿಂದ 36 ಮಂದಿ ಅಪ್ರಾಪ್ತ ವಯಸ್ಕರು ಬುಧವಾರ ರಾತ್ರಿ ಕಾನ್ಸ್‌ಸ್ಟೇಬಲ್‌ಗಳಿಗೆ ಥಳಿಸಿ ಜೈಲಿನಿಂದ ಪರಾರಿಯಾಗಿದ್ದಾರೆ.

ಸಮನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ರೇವಾ ಜಿಲ್ಲಾ ಜುವೆನೈಲ್‌ ಸುಧಾರಣಾ ಗೃಹವಿದೆ. ಬುಧವಾರ ರಾತ್ರಿ 10.05ರ ಸುಮಾರಿಗೆ ಕಾನ್ಸ್‌ಸ್ಟೇಬಲ್‌ ಮತ್ತು ಗಾರ್ಡ್ ಗೆ ಥಳಿಸಿ 36 ಜನರು ತಪ್ಪಿಸಿಕೊಂಡಿದ್ದಾರೆ. ಪರಾರಿಯಾದವರು ವಿವಿಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

ಇದೊಂದು ಪೂರ್ವಯೋಜಿತ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪರಾರಿಯಾದ 36 ಬಾಲಾಪರಾಧಿಗಳಲ್ಲಿ 9 ಜನರನ್ನು ಪೊಲೀಸರು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದವರಿಗಾಗಿ ಹುಟುಕಾಟ ಪ್ರಾರಂಭಿಸಿದ್ದಾರೆ.

ಸುಧಾರಣಾ ಗೃಹದ ಅಧಿಕಾರಿ ಹಮೀದ್ ಖಾನ್‌ ಜತೆಗೆ ಬುಧವಾರ ಹುಡುಗರು ರಾತ್ರಿ 9.30ರ ಸುಮಾರಿಗೆ ಮಾತನಾಡಿದ್ದಾರೆ. ನಂತರ ಇಬ್ಬರು ವಿದ್ಯಾರ್ಥಿಗಳು, ಬಾತ್‌ರೂಮಿಗೆ ಹೋಗಬೇಕೆಂದು ಗಾರ್ಡ್‌ಬಳಿ ಮನವಿ ಮಾಡಿದ್ದಾರೆ.

ಗಾರ್ಡ್ ಗೇಟ್ ತೆರೆಯುತ್ತಿದ್ದಂತೆಯೇ ಆತನನ್ನು ಹೊರದಬ್ಬಿದ ಹುಡುಗರು ಓಡಿ ಹೋಗಿದ್ದಾರೆ. ಕರ್ತವ್ಯದಲ್ಲಿದ್ದ ಕಾನ್ಸ್‌ಸ್ಟೇಬಲ್‌ಗಳು ಮಕ್ಕಳನ್ನು ತಡೆಯಲು ಮುಂದಾದಾಗ ಅವರಿಗೂ ಥಳಿಸಿದ್ದಾರೆ. ಸದ್ಯ ಗಾರ್ಡ್ ಮತ್ತು ಕಾನ್ಸ್‌ಸ್ಟೇಬಲ್‌ ಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನ್ಯಾಯಾಲಯದಿಂದ ಶಿಕ್ಷೆಗೊಳಗಾದ 15ರಿಂದ 18 ವಯಸ್ಸಿನ ಅಪ್ರಾಪ್ತರು ಕಾರಾಹೃಗದಲ್ಲಿದ್ದರು ಎಂದು ತಿಳಿದು ಬಂದಿದೆ. ಅತ್ಯಾಚಾರ, ಕೊಲೆ, ಹಲ್ಲೆ, ಅಕ್ರಮ ಶಸ್ತ್ರಾಸ್ತ ಹೊಂದಿರುವ ಮತ್ತು ಮನೆಗಳ್ಳತನದ ಕೃತ್ಯಗಳನ್ನು ಎಸಗಿದ ಕಾರಣಕ್ಕೆ ಇವರು ಜೈಲು ಸೇರಿದ್ದರು.

ಸಮನ್‌ ಪೊಲೀಸ್‌ ಠಾಣೆಯಲ್ಲಿ ಎಲ್ಲಾ 36 ಬಾಲಾಪರಾಧಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೈಲಿನ ಸುತ್ತಮುತ್ತಲಿನ ಕಾಡುಗಳಲ್ಲಿ ಪರಾರಿಯಾದವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಸೋಮವಾರ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲಾ ಕಾರಾಗೃಹದಿಂದ ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್‌ ಆಫ್ ಇಂಡಿಯಾ (ಸಿಮಿ) ಗೆ ಸೇರಿದ ಶಂಕಿತ ಉಗ್ರಗಾಮಿಗಳು ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. (Jailbreak: ಸಿನಿಮೀಯ ರೀತಿಯಲ್ಲಿ ಸಿಮಿ ಉಗ್ರರು ಪರಾರಿ)

English summary
35 teenage offenders escaped from a juvenile reform house in Rewa district of Madhya Pradesh, after knocking out a guard and three constables on Wednesday, October 2 night. Nine of them were captured a few hours later. An FIR was being lodged against all 36 inmates with charges of assault and escape at Saman police out post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X