ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾರತದಲ್ಲಿ 96 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು
ಬೆಂಗಳೂರು, ಡಿಸೆಂಬರ್ 5: ಭಾರತದಲ್ಲಿ ಇಂದು 36,652 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 512 ಮಂದಿ ಮೃತಪಟ್ಟಿದ್ದಾರೆ.
ಇದುವರೆಗೆ 1,39,700 ಮಂದಿ ಸಾವನ್ನಪ್ಪಿದ್ದಾರೆ. 4,09,689 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 90,58,822 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 96,08,212 ಕೊರೊನಾ ಸೋಂಕಿತರಿದ್ದಾರೆ.
ಕರ್ನಾಟಕದಲ್ಲಿ ಈವರೆಗೂ 853461 ಕೊವಿಡ್-19 ಸೋಂಕಿತರು ಗುಣಮುಖ
ಕಳೆದ 24 ಗಂಟೆಯಲ್ಲಿ 42,533 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಒಂದೇ ದಿನ 11,70,102 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 14,47,27,749 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ
Chahal Jadeja ಅದಲು ಬದಲು ಸರಿ ಇಲ್ಲ ಎಂದ Henriques | Oneindia Kannada