ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ; 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣ ದಾಖಲು

|
Google Oneindia Kannada News

ನವದೆಹಲಿ, ಏಪ್ರಿಲ್ 25; ಭಾರತದಲ್ಲಿ 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 2,767 ಜನರು ಸಾವನ್ನಪ್ಪಿದ್ದು, 2,17,113 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಭಾರತದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,69,60,172ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 26,82,751.

ಕೋವಿಡ್; ಶನಿವಾರ ಬೆಂಗಳೂರಲ್ಲಿ 149 ಸಾವು ಕೋವಿಡ್; ಶನಿವಾರ ಬೆಂಗಳೂರಲ್ಲಿ 149 ಸಾವು

ದೇಶದಲ್ಲಿ ಇದುವರೆಗೂ 1,40,85,110 ಜನರು ಗುಣಮುಖಗೊಂಡಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 1,92,311. ಇದುವರೆಗೂ 14,09,16,417 ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ.

ಸಿಬ್ಬಂದಿ, ಕುಟುಂಬ ಸದಸ್ಯರಿಗೆ ಕೋವಿಡ್ ಕೇಂದ್ರ ತೆರೆದ ಇನ್ಫೋಸಿಸ್ಸಿಬ್ಬಂದಿ, ಕುಟುಂಬ ಸದಸ್ಯರಿಗೆ ಕೋವಿಡ್ ಕೇಂದ್ರ ತೆರೆದ ಇನ್ಫೋಸಿಸ್

3,49,691 New COVID 19 Cases Reported In India In 24 Hours

ಏಪ್ರಿಲ್ 24ರ ತನಕ 27,79,18,810 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ. ಏಪ್ರಿಲ್ 24ರ ಶನಿವಾರ 17,19,588 ಮಾದರಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್‌ ಹೇಳಿದೆ.

ದೆಹಲಿಯಲ್ಲಿ ಕೈಮೀರಿದ ಕೊರೊನಾ; ಎಲ್ಲಾ ಸಿಎಂಗಳಿಗೆ ಕೇಜ್ರಿವಾಲ್ ಮನವಿದೆಹಲಿಯಲ್ಲಿ ಕೈಮೀರಿದ ಕೊರೊನಾ; ಎಲ್ಲಾ ಸಿಎಂಗಳಿಗೆ ಕೇಜ್ರಿವಾಲ್ ಮನವಿ

ಯಾವ ರಾಜ್ಯದಲ್ಲಿ ಎಷ್ಟು?; ಮಹಾರಾಷ್ಟ್ರದಲ್ಲಿ 67,160 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 42,28,836.

ಕೇರಳದಲ್ಲಿ 26,685 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13,77,187ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 1,98,572.

ಕರ್ನಾಟಕದಲ್ಲಿ 29,438 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 13,04,397ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.34,483.

English summary
3,49,691 new COVID-19 cases reported in India in 24 hours. 2,767 deaths and 2,17,113 people discharged. India total cases raised to 1,69,60,172. Active cases number 26,82,751.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X