ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ 3 ವರ್ಷದಲ್ಲಿ 348 ಕಸ್ಟಡಿ ಸಾವುಗಳು, 230 ರಾಜಕೀಯ ಹತ್ಯೆ: ಸರ್ಕಾರ ಮಾಹಿತಿ

|
Google Oneindia Kannada News

ನವದೆಹಲಿ, ಆ.04: ಬಿಹಾರದಲ್ಲಿ ಕಸ್ಟಡಿ ಸಾವಿನ ಪ್ರಕರಣದಿಂದ ಆಕ್ರೋಶಿತರಾದ ಜನರು ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದ ವೇಳೆ ಮಹಿಳಾ ಪೊಲೀಸ್ ಪೇದೆಯು ಸಾವನ್ನಪ್ಪಿದ ದಿನಗಳ ನಂತರ ಕಳೆದ ಮೂರು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 348 ಜನರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.

ಲೋಕಸಭೆಯಲ್ಲಿ ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ (ಎ‌ಎಚ್‌ಆರ್‌ಸಿ) ಲಭ್ಯವಿರುವ ಮಾಹಿತಿ ಪ್ರಕಾರ 2020-21 ನೇ ಅವಧಿಯಲ್ಲಿ 100 ಮಂದಿ ಪೊಲೀಸ್‌ ಕಸ್ಟಡಿ ಸಂದರ್ಭ ಸಾವನ್ನಪ್ಪಿದ್ದಾರೆ ಹಾಗೂ 2020-21 ನೇ ಅವಧಿಯಲ್ಲಿ ಕಸ್ಟಡಿ ವೇಳೆ ಪೊಲೀಸ್‌ ದೌರ್ಜನ್ಯದ ಬಗ್ಗೆ 236 ಪ್ರಕರಣಗಳು ವರದಿಯಾಗಿದೆ ಎಂದು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್‌ ತಿಳಿಸಿದರು.

39 ಮಂಗಗಳ ಮಾರಣಹೋಮ ಪ್ರಕರಣಕ್ಕೆ ಟ್ವಿಸ್ಟ್: ಐವರು ಪೊಲೀಸ್ ವಶಕ್ಕೆ39 ಮಂಗಗಳ ಮಾರಣಹೋಮ ಪ್ರಕರಣಕ್ಕೆ ಟ್ವಿಸ್ಟ್: ಐವರು ಪೊಲೀಸ್ ವಶಕ್ಕೆ

2017 ಮತ್ತು 2019 ರ ನಡುವೆ ರಾಜಕೀಯ ಕಾರಣಗಳಿಗಾಗಿ ದೇಶದ ವಿವಿಧ ಭಾಗಗಳಲ್ಲಿ 230 ಜನರನ್ನು ಕೊಲ್ಲಲಾಗಿದೆ ಎಂದು ಕೂಡಾ ಸಚಿವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಹಂಚಿಕೊಂಡ ದತ್ತಾಂಶಗಳ ಪ್ರಕಾರ, 2017-19 ರಿಂದ 1,189 ಮಂದಿ ಬಂಧನದಲ್ಲಿದ್ದಾಗ ಚಿತ್ರಹಿಂಸೆಗೆ ಒಳಗಾಗಿದ್ದಾರೆ. 348 ಮಂದಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

 ಯಾವ ವರ್ಷ, ಎಷ್ಟು ಕಸ್ಟಡಿ ಸಾವು?

ಯಾವ ವರ್ಷ, ಎಷ್ಟು ಕಸ್ಟಡಿ ಸಾವು?

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ (ಎ‌ಎಚ್‌ಆರ್‌ಸಿ) ಪಡೆದ ಮಾಹಿತಿಯನ್ನು ಆಧರಿಸಿದರೆ, "2018 ರಲ್ಲಿ 136 ಜನರು, 2019 ರಲ್ಲಿ 112 ಮತ್ತು 2020 ರಲ್ಲಿ 100 ಜನರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಅಂದರೆ ಕಳೆದ 3 ವರ್ಷದಲ್ಲಿ ಒಟ್ಟು 348 ಕಸ್ಟಡಿ ಸಾವುಗಳು ಸಂಭವಿಸಿದೆ. ಇದಲ್ಲದೆ, 2018 ರಲ್ಲಿ 542 ಜನರನ್ನು, 2019 ರಲ್ಲಿ 411 ಮತ್ತು 2020 ರಲ್ಲಿ 236 ಜನರನ್ನು ಪೊಲೀಸ್ ಕಸ್ಟಡಿಯಲ್ಲಿ ಹಿಂಸಿಸಲಾಗಿದೆ. ಅಂದರೆ ಮೂರು ವರ್ಷಗಳಲ್ಲಿ ಒಟ್ಟು 1,189 ಮಂದಿಯ ಮೇಲೆ ಪೊಲೀಸ್‌ ಕಸ್ಟಡಿ ವೇಳೆ ಹಿಂಸಾಚಾರ ನಡೆದಿದೆ," ಎಂದು ಸಚಿವ ನಿತ್ಯಾನಂದ ರಾಯ್‌ ಲಿಖಿತ ಪ್ರಶ್ನೆಗೆ ಉತ್ತರಿಸಿದರು.

 ''ಹಿಂಸೆ ನೀಡಿ ಸಂತೋಷ ಪಡುವವರು

''ಹಿಂಸೆ ನೀಡಿ ಸಂತೋಷ ಪಡುವವರು"

ಇತ್ತೀಚಿನ ದಿನಗಳಲ್ಲಿ, ಅಸ್ಸಾಂ ರಾಜ್ಯದಲ್ಲಿ ಹೆಚ್ಚುತ್ತಿರುವ ಎನ್‌ಕೌಂಟರ್‌ ಹತ್ಯೆಗಳು ರಾಜಕೀಯ ಪಕ್ಷಗಳು ಮತ್ತು ಮಾನವ ಹಕ್ಕು ಸಂಘಟನೆಗಳಲ್ಲಿ ಆತಂಕವನ್ನು ಉಂಟುಮಾಡಿವೆ. ಹಲವಾರು ವಿಮರ್ಶಕರು ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರದ ಅಡಿಯಲ್ಲಿ ಅಸ್ಸಾಂ ಪೊಲೀಸರನ್ನು ''ಹಿಂಸೆ ನೀಡಿ ಸಂತೋಷ ಪಡುವವರು" ಎಂದು ಉಲ್ಲೇಖಿಸಿದ್ದಾರೆ.

ಈ ವರ್ಷ ಮೇ ತಿಂಗಳಿನಿಂದೀಚೆಗೆ ಕನಿಷ್ಠ 15 ಶಂಕಿತ ಉಗ್ರರು ಮತ್ತು ಅಪರಾಧಿಗಳನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಅದಕ್ಕೆ ಕಾರಣ ಆ ಶಂಕಿತ ಉಗ್ರರು ಮತ್ತು ಅಪರಾಧಿಗಳು ಪೊಲೀಸರ ಬಳಿಯಿದ್ದ ಗನ್‌ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು ಅಥವಾ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂಬುವುದಾಗಿದೆ. ದೇ ಅವಧಿಯಲ್ಲಿ ಇದೇ ರೀತಿಯ ಘಟನೆಗಳಲ್ಲಿ ಕನಿಷ್ಠ 25 ಇತರರು ಗಾಯಗೊಂಡಿದ್ದಾರೆ.

 ಗಡಿ ಹಿಂಸಾಚಾರ: ಅಸ್ಸಾಂ ಸಿಎಂ, ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮಿಜೋರಾಂ ಪೊಲೀಸರು ಗಡಿ ಹಿಂಸಾಚಾರ: ಅಸ್ಸಾಂ ಸಿಎಂ, ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಮಿಜೋರಾಂ ಪೊಲೀಸರು

 ರಾಜಕೀಯ ಹತ್ಯೆಗಳು

ರಾಜಕೀಯ ಹತ್ಯೆಗಳು

ಲೋಕಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್‌, 2017 ಮತ್ತು 2019 ರ ನಡುವೆ ರಾಜಕೀಯ ಕಾರಣಗಳಿಗಾಗಿ ದೇಶದ ವಿವಿಧ ಭಾಗಗಳಲ್ಲಿ 230 ಜನರನ್ನು ಕೊಲ್ಲಲಾಗಿದೆ ಎಂದು ಮಾಹಿತಿ ನೀಡಿದರು. ರಾಜಕೀಯ ಕಾರಣಗಳಿಗಾಗಿ ಕೊಲ್ಲಲ್ಪಟ್ಟವರಲ್ಲಿ ಜಾರ್ಖಂಡ್‌ನಲ್ಲಿ 49, ಪಶ್ಚಿಮ ಬಂಗಾಳದಲ್ಲಿ 27 ಮತ್ತು ಬಿಹಾರದಲ್ಲಿ 26 ಮಂದಿ ಸೇರಿದ್ದಾರೆ ಎಂದು ನಿತ್ಯಾನಂದ ರಾಯ್‌ ಹೇಳಿದರು.

2017 ರಲ್ಲಿ ದೇಶದಲ್ಲಿ 99 ಜನರನ್ನು ರಾಜಕೀಯ ಕಾರಣಗಳಿಗಾಗಿ ಕೊಲ್ಲಲಾಗಿದೆ. 2018 ರಲ್ಲಿ 59 ಜನರನ್ನು ಕೊಲ್ಲಲಾಗಿದೆ ಮತ್ತು 2019 ರಲ್ಲಿ 72 2017 ಮತ್ತು 2019 ರ ನಡುವಿನ ರಾಜಕೀಯ ಕೊಲೆಗಳಲ್ಲಿ, ಕರ್ನಾಟಕದಲ್ಲಿ ಒಟ್ಟು 24 ಮತ್ತು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ 15 ಪ್ರಕರಣಗಳು ವರದಿಯಾಗಿವೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದರು.

 ಲಸಿಕೆ ಕೇಂದ್ರದ ಜಗಳದ ಬಳಿಕ ಯುವಕ ಆತ್ಮಹತ್ಯೆ: 5 ಯುಪಿ ಪೊಲೀಸರ ವಿರುದ್ಧ ಪ್ರಕರಣ ಲಸಿಕೆ ಕೇಂದ್ರದ ಜಗಳದ ಬಳಿಕ ಯುವಕ ಆತ್ಮಹತ್ಯೆ: 5 ಯುಪಿ ಪೊಲೀಸರ ವಿರುದ್ಧ ಪ್ರಕರಣ

 ಕರ್ನಾಟಕ, ಬಿಹಾರ ಇತ್ತೀಚಿನ ಪೊಲೀಸ್‌ ಕಸ್ಟಡಿ ಸಾವು

ಕರ್ನಾಟಕ, ಬಿಹಾರ ಇತ್ತೀಚಿನ ಪೊಲೀಸ್‌ ಕಸ್ಟಡಿ ಸಾವು

ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಐದು ಗ್ರಾಂ ಎಕ್ಟಾಸಿ ಮಾತ್ರೆಗಳನ್ನು ಹೊಂದಿದ್ದ ಆರೋಪದಲ್ಲಿ ಆಫ್ರಿಕನ್‌ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆ ವ್ಯಕ್ತಿ ಈಗ ಸಾವನ್ನಪ್ಪಿದ್ದಾನೆ. ಪೊಲೀಸರ ಪ್ರಕಾರ ಕಾಲೇಜಿನಲ್ಲಿ ಓದುತ್ತಿದ್ದ ಆ ವಿದೇಶಿ ವ್ಯಕ್ತಿಗೆ ಕಸ್ಟಡಿಯಲ್ಲಿರುವಾಗ ಎದೆ ನೋವು ಕಾಣಿಸಿಕೊಂಡಿದ್ದು, ಪೊಲೀಸರು ಆಸ್ಪತ್ರೆಗೆ ದಾಖಲು ಮಾಡುವಾಗ ಆತ ಸಾವನ್ನಪ್ಪಿದ್ದಾನೆ. ಆದರೆ ತಮ್ಮ ದೇಶದ ವ್ಯಕ್ತಿ ಕಸ್ಟಡಿ ಹಿಂಸಾಚಾರಕ್ಕೆ ಬಲಿಯಾಗಿದ್ದಾನೆ ಎಂದು ಆರೋಪಿಸಿ ಆತನ ಸಹಪಾಠಿ ಆಫ್ರಿಕನ್‌ ಪ್ರಜೆಗಳು ಪ್ರತಿಭಟನೆ ನಡೆಸಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಇನ್ನು ಬಿಹಾರದಲ್ಲಿ ಕಸ್ಟಡಿ ಸಾವಿನ ವಿರುದ್ದ ಪ್ರತಿಭಟನೆ ಮಾಡುತ್ತಿದ್ದ ವೇಳೆ ಹಿಂಸಾಚಾರ ನಡೆದಿದ್ದು,
ಗುಂಪನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದ ವೇಳೆ ಮಹಿಳಾ ಪೊಲೀಸ್‌ ಸಿಬ್ಬಂದಿ ವಾಹನ ಒಂದಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಹಾಗೆಯೇ ಈ ಭಾರೀ ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯಿಂದಾಗಿ ಅನೇಕ ಜನರು, ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
348 killed, 1189 tortured in custody In Last 3 Years, 230 Political Killings: Governement informed in Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X