ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನ 2 ನೇ ಅಲೆಯಲ್ಲಿ ಸಾವಿನ ಪ್ರಮಾಣ ಶೇ.30 ರಷ್ಟು ಅಧಿಕ: ಐಸಿಎಂಆರ್‌

|
Google Oneindia Kannada News

ನವದೆಹಲಿ, ಜು.04: ಕೋವಿಡ್ -19 ರ ಎರಡನೇ ಅಲೆಯ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಸಾವುಗಳಲ್ಲಿ ಶೇ.30 ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೊಸ ಅಧ್ಯಯನದಲ್ಲಿ ತಿಳಿಸಿದೆ.

ಐಸಿಎಂಆರ್ ಸಂಶೋಧಕರು ಮೊದಲ ಅಲೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾದ 11,178 ರೋಗಿಗಳ ಫಲಿತಾಂಶವನ್ನು ಎರಡನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದ 3,258 ರೋಗಿಗಳೊಂದಿಗೆ ಹೋಲಿಸಿದ್ದು ಈ ಸಂದರ್ಭ ಆಸ್ಪತ್ರೆಗೆ ದಾಖಲಾದ ಶೇ. 13.3 ಜನರು ಎರಡನೇ ಅಲೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೊದಲನೇ ಅಲೆಯ ಸಂದರ್ಭದಲ್ಲಿ ಶೇ.10.2 ಮಂದಿ ಸಾವನ್ನಪ್ಪಿದ್ದು, ಎರಡನೇ ಅಲೆಯ ಸಂದರ್ಭ ಕೋವಿಡ್‌ ಸಾವಿನ ಪ್ರಮಾಣ ಶೇ. 30 ರಷ್ಟು ಏರಿಕೆಯಾಗಿದೆ.

ಕರ್ನಾಟಕದಲ್ಲಿ ತಗ್ಗಿದ ಕೊವಿಡ್-19 ಸಕ್ರಿಯ ಪ್ರಕರಣಕರ್ನಾಟಕದಲ್ಲಿ ತಗ್ಗಿದ ಕೊವಿಡ್-19 ಸಕ್ರಿಯ ಪ್ರಕರಣ

ದೇಶದಾದ್ಯಂತ ಕೊರೊನಾ ಎರಡನೇ ಅಲೆಯು ಹೆಚ್ಚಾಗಿ ಯುವ ಜನರ ಮೇಲೆ ಪ್ರಭಾವ ಬೀರಿದ್ದು, ಇನ್ನು ಸಂಭವನೀಯ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವ ಆತಂಕವಿದೆ. ಈ ಹಿನ್ನೆಲೆ ಈಗಾಗಲೇ ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಡಿರುವ ಅಧ್ಯಯನವು ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್‌ ಸಾವಿನ ಭಾರೀ ಏರಿಕೆಯನ್ನು ಉಲ್ಲೇಖ ಮಾಡಿದೆ.

 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮರಣ ಪ್ರಮಾಣ ಕಡಿಮೆ

20 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮರಣ ಪ್ರಮಾಣ ಕಡಿಮೆ

"ಮೊದಲ ಅಲೆಗೆ ಹೋಲಿಸಿದರೆ, 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಹೊರತುಪಡಿಸಿ ಎಲ್ಲಾ ವಯೋಮಾನದವರಲ್ಲಿ ಎರಡನೇ ಅಲೆಯಲ್ಲಿ ಮರಣ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ," ಎಂದು ಐಸಿಎಂಆರ್ ಅಧಿಕಾರಿಯೊಬ್ಬರು ಹೇಳಿದರು. ಐಸಿಎಂಆರ್ ವಿಶ್ಲೇಷಿಸಿದ ದಾಖಲೆಗಳು ಕಳೆದ ವರ್ಷದಿಂದ ಕೌನ್ಸಿಲ್ ನಿರ್ವಹಿಸುತ್ತಿರುವ ಕೋವಿಡ್ -19 ಕ್ಲಿನಿಕಲ್ ರಿಜಿಸ್ಟ್ರಿಯಿಂದ ಪಡೆಯಲಾಗಿದೆ.

 ಉಸಿರಾಟದ ಸಮಸ್ಯೆ ಗಮನಾರ್ಹ ಹೆಚ್ಚಳ

ಉಸಿರಾಟದ ಸಮಸ್ಯೆ ಗಮನಾರ್ಹ ಹೆಚ್ಚಳ

ಎರಡನೇ ಅಲೆಯಲ್ಲಿ ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯ ರೋಗಿಗಳು ಉಸಿರಾಟದ ತೊಂದರೆ ಬಗ್ಗೆ ತಿಳಿಸಿದ್ದಾರೆ, ಅಂದರೆ ಎಆರ್‌ಡಿಎಸ್‌ (ತೀವ್ರ ಉಸಿರಾಟದ ತೊಂದರೆ ಸಿಂಡ್ರೋಮ್, ಮಾರಣಾಂತಿಕ ಸ್ಥಿತಿ) ಹೆಚ್ಚಾಗಿ ಕಂಡು ಬಂದಿದೆ. ರೋಗಿಗಳಿಗೆ ಆಮ್ಲಜನಕ ಅಥವಾ ವೆಂಟಿಲೇಟರ್‌ನ ಅಗತ್ಯ ಹೆಚ್ಚಾಗಿತ್ತು. ''ಎಆರ್‌ಡಿಎಸ್‌ ಪ್ರಮಾಣವು ಮೊದಲ ಅಲೆಯಲ್ಲಿ ಶೇ. 8 ರಷ್ಟಿದ್ದು, ಎರಡನೇ ಅಲೆಯಲ್ಲಿ ಶೇ.13 ಕ್ಕೆ ಏರಿಕೆಯಾಗಿದೆ,'' ಎಂದು ಈ ಅಧ್ಯಯನವು ಉಲ್ಲೇಖ ಮಾಡಿದೆ. ಎರಡನೇ ಅಲೆಯಲ್ಲಿ ದಾಖಲಾದ ರೋಗಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಮೊರ್ಬಿಡಿಟಿ ಇದ್ದವು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಇದು ಆಮ್ಲಜನಕ ಬಳಕೆ ಹೆಚ್ಚಳ, ವೆಂಟಿಲೇಟರ್‌ ಬಳಕೆ ಹೆಚ್ಚಳ ಹಾಗೂ ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ತಮಿಳುನಾಡಿನಲ್ಲಿ 'ಡೆಲ್ಟಾ ಪ್ಲಸ್' ರೂಪಾಂತರಕ್ಕೆ ಮೊದಲ ಬಲಿತಮಿಳುನಾಡಿನಲ್ಲಿ 'ಡೆಲ್ಟಾ ಪ್ಲಸ್' ರೂಪಾಂತರಕ್ಕೆ ಮೊದಲ ಬಲಿ

 ಆರೋಗ್ಯ ಮೂಲಸೌಕರ್ಯದ ಒತ್ತಡಕ್ಕೆ ಕಾರಣವಾದ 2 ನೇ ಅಲೆ

ಆರೋಗ್ಯ ಮೂಲಸೌಕರ್ಯದ ಒತ್ತಡಕ್ಕೆ ಕಾರಣವಾದ 2 ನೇ ಅಲೆ

"ಕೋವಿಡ್‌ನ ಎರಡನೇ ಅಲೆಯು ದಿಢೀರ್‌ ಸ್ಪೋಟವಾಗಿದ್ದು, ಅಲ್ಪಾವಧಿಯಲ್ಲಿಯೇ ಹೆಚ್ಚಿನ ಸಂಖ್ಯೆಯ ಜನರನ್ನು ಬಾಧಿಸಿದೆ. ಇದು ಆರೋಗ್ಯ ಮೂಲಸೌಕರ್ಯದಲ್ಲಿ ಒತ್ತಡಕ್ಕೆ ಕಾರಣವಾಯಿತು. ಹೆಚ್ಚು ತೀವ್ರವಾದ ರೋಗಿಗಳಿಗೆ ಮಾತ್ರ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಹೆಚ್ಚಿನ ಮರಣ ಪ್ರಮಾಣವು ಕೂಡಾ ಗಮನಾರ್ಹ ಎಂದು ಐಸಿಎಂಆರ್ ತಂಡವು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ವರದಿ ಮಾಡಿದೆ.

ರಾಜ್ಯದಲ್ಲಿ ಕೋವಿಡ್ ನಿಂದ ಮೃತ ಪಟ್ಟ ಅಸಲಿ ಸಾವಿನ ಸಂಖ್ಯೆ ಬಹಿರಂಗ!ರಾಜ್ಯದಲ್ಲಿ ಕೋವಿಡ್ ನಿಂದ ಮೃತ ಪಟ್ಟ ಅಸಲಿ ಸಾವಿನ ಸಂಖ್ಯೆ ಬಹಿರಂಗ!

 2 ನೇ ಅಲೆಯಲ್ಲಿ ಶೇ.40 ರಷ್ಟು ಸಾವಿನ ಪ್ರಮಾಣ

2 ನೇ ಅಲೆಯಲ್ಲಿ ಶೇ.40 ರಷ್ಟು ಸಾವಿನ ಪ್ರಮಾಣ

ಮೊದಲನೆಯ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಶೇ.40 ರಷ್ಟು ಹೆಚ್ಚಿನ ಮರಣ ಪ್ರಮಾಣವಿದೆ ಎಂದು ಮತ್ತೊಂದು ಸಂಶೋಧನಾ ಪ್ರಬಂಧ ಉಲ್ಲೇಖ ಮಾಡಿದೆ. ಆ ಬಳಿಕ ಬಂದ ಐಸಿಎಂಆರ್ ಸಂಶೋಧನೆ ಎರಡನೇ ಅಲೆಯ ಸಂದರ್ಭ ಕೋವಿಡ್‌ ಸಾವಿನ ಪ್ರಮಾಣ ಶೇ. 30 ರಷ್ಟು ಏರಿಕೆಯಾಗಿದೆ ಎಂದಿದೆ. ಐದು ಉತ್ತರದ ರಾಜ್ಯಗಳಲ್ಲಿ ಹರಡಿರುವ ಒಂಬತ್ತು ಮ್ಯಾಕ್ಸ್ ಗುಂಪು ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ. ಮತ್ತೊಂದೆಡೆ, ಐಸಿಎಂಆರ್ ತನಿಖೆಯು ದೇಶದ ವಿವಿಧ ಪ್ರದೇಶಗಳ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಒಳಗೊಂಡಿದೆ.

(ಒನ್‌ಇಂಡಿಯಾ ಸುದ್ದಿ)

English summary
The second wave of Covid-19 saw a 30% rise in deaths in public as well as private hospitals, the Indian Council of Medical Research said in a new study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X