ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ವರ್ಷದಲ್ಲಿ 30 ವಿಮಾನ ಪತನ, 41 ಪೈಲೆಟ್‌ಗಳ ಸಾವು

|
Google Oneindia Kannada News

ಬೆಂಗಳೂರು, ಫೆಬ್ರವರಿ 25 : ಕಳೆದ ನಾಲ್ಕು ವರ್ಷಗಳಲ್ಲಿ 41 ಭಾರತೀಯ ವಾಯುಪಡೆ ಪೈಲೆಟ್‌ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಫೆ. 20ರಂದು ಬೆಂಗಳೂರಿನಲ್ಲಿ ಸೂರ್ಯ ಕಿರಣ್ ವಿಮಾನ ಅಪಘಾತದಲ್ಲಿ ಒಬ್ಬ ಪೈಲೆಟ್‌ ಸಾವನ್ನಪ್ಪಿದ್ದರು.

ನಾಲ್ಕು ವರ್ಷಗಳಲ್ಲಿ 30 ವಿಮಾನಗಳು ಪತನಗೊಂಡಿವೆ. 2018-19ನೇ ಸಾಲಿನಲ್ಲಿಯೇ 8 ವಿಮಾನ ಅಪಘಾತ ಪ್ರಕರಣಗಳು ನಡೆದಿದ್ದು, ಮೂವರು ಪೈಲೆಟ್‌ಗಳು ಮೃತಪಟ್ಟಿದ್ದಾರೆ.

ಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳುಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳು

ಫೆ.20ರಂದು ಬೆಂಗಳೂರಿನ ಯಲಹಂಕದಲ್ಲಿ ಏರ್ ಶೋಗೆ ತರಬೇತಿ ನಡೆಸುತ್ತಿದ್ದ ಸೂರ್ಯ ಕಿರಣ್ ವಿಮಾನಗಳು ಡಿಕ್ಕಿಯಾಗಿದ್ದವು. ಒಬ್ಬ ಪೈಲೆಟ್ ಈ ಅಪಘಾತದಲ್ಲಿ ಮೃತಪಟ್ಟಿದ್ದರು.

ಭಾರತೀಯ ವಾಯುಸೇನೆ ವಿಮಾನ ಪತನ, ಪೈಲಟ್ ಸಾವುಭಾರತೀಯ ವಾಯುಸೇನೆ ವಿಮಾನ ಪತನ, ಪೈಲಟ್ ಸಾವು

30 IAF aircrafts have crashed in last 4 years

2015-16ರಲ್ಲಿ 6, 2016-17ರಲ್ಲಿ 10, 2017-18ರಲ್ಲಿ 6, 2018-19ರಲ್ಲಿ 8 ವಿಮಾನ ಅಪಘಾತ ಪ್ರಕರಣಗಳು ನಡೆದಿವೆ. 2016-17ರಲ್ಲಿ ಹೆಚ್ಚು ಎಂದರೆ 29 ಪೈಲೆಟ್‌ಗಳು ವಿಮಾನ ಅಪಘಾತದಲ್ಲಿ ಮರಣಹೊಂದಿದ್ದಾರೆ.

ರಫೇಲ್: ವಿಮಾನಗಳ ಸಂಖ್ಯೆ ಇಳಿದರೂ ದರ ಶೇ 14.2ರಷ್ಟು ಹೆಚ್ಚಳ ಆಗಿದ್ದು ಹೇಗೆ?ರಫೇಲ್: ವಿಮಾನಗಳ ಸಂಖ್ಯೆ ಇಳಿದರೂ ದರ ಶೇ 14.2ರಷ್ಟು ಹೆಚ್ಚಳ ಆಗಿದ್ದು ಹೇಗೆ?

2019ರ ಎರಡು ತಿಂಗಳಿನಲ್ಲಿ ಮೂರು ವಿಮಾನಗಳು ಪತನಗೊಂಡಿವೆ. ಫೆ.1ರಂದು ಬೆಂಗಳೂರಿನಲ್ಲಿ ಮೀರಾಜ್ ವಿಮಾನ ಪತನಗೊಂಡು ಇಬ್ಬರು ಪೈಲೆಟ್ ಮೃತಪಟ್ಟಿದ್ದರು. ಜನವರಿ 28 ಮತ್ತು ಫೆಬ್ರವರಿ 20 ರಂದು ಎರಡು ವಿಮಾನ ಪತನದ ಪ್ರಕರಣದ ನಡೆದಿದೆ.

English summary
In the last four years, as many as 41 IAF pilots have died in aircraft crashes. This is emerging as a serious concern for the Indian Air Force as there have been 30 crashes in the last four years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X