ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ 30 ದೇಶದ ಮಾನ್ಯತೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 14; ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕಾ ಅಭಿಯಾನವನ್ನು ಭಾರತ ನಡೆಸುತ್ತಿದೆ. 30 ವಿವಿಧ ರಾಷ್ಟ್ರಗಳು ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ ಮಾನ್ಯತೆ ನೀಡಲು ಒಪ್ಪಿಕೊಂಡಿವೆ.

ಭಾರತ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆ ನೀಡುತ್ತಿದೆ. ಲಸಿಕೆ ಪಡೆದವರಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಗುತ್ತಿದೆ. ದೇಶದ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ ವಿಶ್ವದ ವಿವಿಧ ರಾಷ್ಟ್ರಗಳ ಮಾನ್ಯತೆ ಸಿಕ್ಕಿದೆ.

ಭಾರತದಲ್ಲಿ 18 ವರ್ಷದೊಳಗಿನವರಿಗೆ ಲಸಿಕೆ ಆರಂಭಿಸಿದ ಮೊದಲ ರಾಜ್ಯ ಯಾವುದು?ಭಾರತದಲ್ಲಿ 18 ವರ್ಷದೊಳಗಿನವರಿಗೆ ಲಸಿಕೆ ಆರಂಭಿಸಿದ ಮೊದಲ ರಾಜ್ಯ ಯಾವುದು?

ಯುಕೆ, ಫ್ರಾನ್ಸ್, ಜರ್ಮನಿ, ನೇಪಾಳ, ಲೆಬೆನಾನ್, ಅಮೆರಿಕ, ಉಕ್ರೇನ್, ಬೆಲ್ಜಿಯಂ, ಹಂಗೇರಿ, ಸೈಬಿರಿಯಾ ಸೇರಿದಂತೆ 30 ವಿವಿಧ ರಾಷ್ಟ್ರಗಳು ಕೋವಿಡ್ ಲಸಿಕಾ ಪ್ರಮಾಣ ಪತ್ರಕ್ಕೆ ಮಾನ್ಯತೆ ನೀಡಲು ಒಪ್ಪಿವೆ.

 ಅಕ್ಟೋಬರ್‌ನಲ್ಲಿ 100 ಕೋಟಿ ಕೋವಿಡ್‌ ಲಸಿಕೆ ಡೋಸ್‌ ನೀಡಲು ಕೇಂದ್ರದ ಗುರಿ ಅಕ್ಟೋಬರ್‌ನಲ್ಲಿ 100 ಕೋಟಿ ಕೋವಿಡ್‌ ಲಸಿಕೆ ಡೋಸ್‌ ನೀಡಲು ಕೇಂದ್ರದ ಗುರಿ

30 Countries Agree To Recognise Vaccine Certificates Of India

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕೋವ್ಯಾಕ್ಸಿನ್ ಲಸಿಕೆ ಪ್ರಮಾಣ ಪತ್ರಕ್ಕೆ ಇರಾನ್, ಮೆಕ್ಸಿಕೋ, ಜಿಂಬಾಬ್ವೆ, ಫಿಲಿಫೈನ್ಸ್ ಸೇರಿದಂತೆ 11 ದೇಶಗಳು ಒಪ್ಪಿಗೆ ಕೊಟ್ಟಿವೆ. ಜರ್ಮನಿ, ಎಸ್ಟೋನಿಯಾ, ಗ್ರೀಸ್, ಬೆಲಾರಸ್, ಹಂಗೇರಿ, ಲೆಬನಾನ್ ದೇಶಗಳಲ್ಲಿ ಪ್ರಯಾಣದ ಉದ್ದೇಶಗಳಿಗಾಗಿ ಕೋವಾಕ್ಸಿನ್ ಲಸಿಕೆ ಪ್ರಮಾಣ ಪತ್ರಕ್ಕೆ ಮಾನ್ಯತೆ ನೀಡಲಾಗಿದೆ.

ಭಾರತದಲ್ಲಿ 2-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮೋದನೆ ಭಾರತದಲ್ಲಿ 2-18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮೋದನೆ

ವಿಶ್ವದ ಅತಿ ದೊಡ್ಡ ಕೋವಿಡ್ ಲಸಿಕೆ ಅಭಿಯಾನವನ್ನು ಭಾರತ ಕೈಗೊಂಡಿದೆ. ಗುರುವಾರದ ತನಕ 97 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಗುರುವಾರ ಒಂದೇ ದಿನ 27 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ 100 ಕೋಟಿ ಕರೋನಾ ಲಸಿಕೆ ಹಾಕಿರುವುದರ ಪ್ರತೀಕವಾಗಿ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯವು ದೇಶಾದ್ಯಂತ 100 ಸ್ಮಾರಕಗಳನ್ನು ಗುರುತಿಸಿ ಅವುಗಳಿಗೆ ರಾತ್ರಿ ದೀಪದ ಅಲಂಕಾರವನ್ನು ಮಾಡಲು ನಿರ್ಧರಿಸಿದೆ.

ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿರುವ ಸ್ಮಾರಕಗಳಿಗೆ ದೀಪಾಲಂಕಾ ಮಾಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. 100 ಸ್ಮಾರಕಗಳಿಗೆ ಮೂರು ಬಣ್ಣದ, ರಾಷ್ಟ್ರಧ್ವಜದ ಮಾದರಿಯ ದೀಪಾಲಂಕಾರವನ್ನು ಮಾಡಿ, ರಾಷ್ಟ್ರಗೀತೆಯನ್ನು ನಿರಂತರವಾಗಿ ಕಡಿಮೆ ಧ್ವನಿಯಲ್ಲಿ ನುಡಿಸಲಾಗುತ್ತದೆ.

ಭಾರತ ಸರ್ಕಾರ ಕೋವಿಡ್ ಲಸಿಕಾ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲು ಹೊಸ ಲಸಿಕಾ ಅಭಿಯಾನವನ್ನು 2021ರ ಜೂನ್ 21ರಿಂದ ಆರಂಭಿಸಿದೆ. ಈ ಅಭಿಯಾನದಡಿ ಹೆಚ್ಚು ಲಸಿಕೆ ಲಭ್ಯತೆಯ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ.

ದೇಶವ್ಯಾಪಿ ಲಸಿಕಾ ಅಭಿಯಾನದ ಅಂಗವಾಗಿ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ಒದಗಿಸುತ್ತಿದೆ. ಕೇಂದ್ರ ಸರ್ಕಾರ ದೇಶದ ಲಸಿಕೆ ಉತ್ಪಾದಕರಿಂದ ಶೇ 75 ರಷ್ಟು ಲಸಿಕೆಯನ್ನು ಖರೀದಿಸುತ್ತಿದೆ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದೆ.

English summary
30 countries have agreed on mutual recognition of COVID-19 vaccine certificates with India. Covaxin has been cleared from the 11 nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X