ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಮೂರು ವಿಧದ ವೆಂಟಿಲೇಟರ್ ಅಭಿವೃದ್ಧಿ

|
Google Oneindia Kannada News

ನವದೆಹಲಿ, ಜೂನ್ 07: ಕೊರೊನಾ ಸೋಂಕಿನ ವಿರುದ್ಧ ದೇಶದ ಹೋರಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮೂರು ರೀತಿಯ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ವಿವಿಧ ಮಜಲುಗಳನ್ನು ಪರಿಚಯಿಸಲು ಮುಂದಾಗಿದೆ.

ತನ್ನಲ್ಲಿ ಲಭ್ಯವಿರುವ ಅನೇಕ ಸೌಕರ್ಯಗಳನ್ನು ನೀಡುವ ಮೂಲಕ ದೇಶದಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ನೆರವಾಗಿದ್ದ ಇಸ್ರೋ ಇದೀಗ ಮೂರು ವಿಧದ ಕಡಿಮೆ ವೆಚ್ಚದ ಹಾಗೂ ಸುಲಭ ಸಾಗಣೆಗೆ ನೆರವಾಗುವ ವೆಂಟಿಲೇಟರ್‌ಗಳನ್ನು ರೂಪಿಸಿದೆ.

ಇಸ್ರೋ 2021 ನೇಮಕಾತಿ, 24 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಇಸ್ರೋ 2021 ನೇಮಕಾತಿ, 24 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೊದಲನೆಯದಾಗಿ, "ಪ್ರಾಣ" (ಪ್ರೋಗ್ರಾಮೆಬಲ್ ರೆಸ್ಪಿರೇಟರಿ ಅಸಿಸ್ಟನ್ಸ್ ಫಾರ್ ನೀಡಿ ಏಡ್) ಪರಿಚಯಿಸಿದೆ. ವಾಯು ಒತ್ತಡ ಸೆನ್ಸರ್, ಆಮ್ಲಜನಕ ಸೆನ್ಸರ್, ಸರ್ವೊ ಆಕ್ಚುಯೇಟರ್ ಹಾಗೂ ಎಕ್ಸ್‌ಪಿರೇಷನ್‌ಗಳನ್ನು ಇದು ಒಳಗೊಂಡಿದೆ. ವೆಂಟಿಲೇಷನ್ ಮೋಡ್‌ಗಳನ್ನು ಆಯ್ಕೆ ಮಾಡಿಕೊಂಡು ಯಾವ ರೀತಿಯ ವ್ಯವಸ್ಥೆ ಬೇಕು ಎಂಬುದನ್ನು ಟಚ್‌ ಸ್ಕ್ರೀನ್ ಮೂಲಕ ಹೊಂದಿಸಬಹುದು. ಒಂದೇ ಪರದೆಯಲ್ಲಿ ಒತ್ತಡ, ಆಮ್ಲಜನಕ ಸಾಂದ್ರತೆಯನ್ನು ಪಡೆಯಬಹುದಾಗಿದೆ. ವಿದ್ಯುತ್ ಇಲ್ಲದಾಗ ಬ್ಯಾಟರಿ ಹಾಕುವ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ.

3 Types Of Ventilators Developed By ISRO To Battle Against Coronavirus

VaU ಎಂಬ ಮತ್ತೊಂದು ಮಾದರಿಯನ್ನು ಪರಿಚಯಿಸಿದ್ದು, ಇದು ಮೈಕ್ರೊ ಕಂಟ್ರೋಲರ್ ಅವಲಂಬಿತವಾಗಿದೆ. ಗ್ಯಾಸ್ ಅವಲಂಬಿತ "ಸ್ಪೇಸ್ ವೆಂಟಿಲೇಟರ್ ಏಡೆಡ್ ಸಿಸ್ಟಂ ಫಾರ್ ಟ್ರೌಮಾ ಅಸಿಸ್ಟನ್ಸ್ (SVASTA) ಮೂರನೇ ವಿಧವಾಗಿದೆ. ತುರ್ತು ಬಳಕೆಗೆ ಇದನ್ನು ಬಳಸಬಹುದು ಎಂದು ಇಸ್ರೋ ಹೇಳಿದೆ.

ತಿರುವನಂತಪುರಂನ ವಿಕ್ರಮ ಸಾರಾಬಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಈ ಮೂರು ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಾಕಷ್ಟು ಪರೀಕ್ಷೆ, ಪರಿಶೀಲನೆಗಳನ್ನು ನಡೆಸಲಾಗಿದ್ದು, ಈ ಉತ್ಪನ್ನಗಳು ಹಲವು ಮಾನದಂಡಗಳನ್ನು ಪೂರೈಸಿರುವುದಾಗಿ ಸಂಸ್ಥೆ ತಿಳಿಸಿದೆ.

English summary
The Indian Space Research Organisation (Isro) has developed three types of ventilators as the country battles the second wave of the Covid-19 pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X