ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ಫ್ ರಾಷ್ಟ್ರಗಳಲ್ಲಿ ಪ್ರತಿ ಎರಡು ದಿನಕ್ಕೆ ಮೂವರು ಆಂಧ್ರದವರ ಸಾವು

|
Google Oneindia Kannada News

ಹೈದರಾಬಾದ್, ಜೂನ್ 27: ಭಾರತದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ವರದಿಯೊಂದು ಎದೆ ನಡುಗಿಸುವ ಮಾಹಿತಿ ಹೊರ ಹಾಕಿದೆ. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಆಂಧ್ರ ಮೂಲದವರು ಪ್ರತಿ ಎರಡು ದಿನಕ್ಕೆ ಮೂವರಂತೆ ಸಾವನ್ನಪ್ಪುತ್ತಿದ್ದಾರಂತೆ. ಆತ್ಮಹತ್ಯೆ, ಅನಾರೋಗ್ಯ ಹಾಗೂ ರಸ್ತೆ ಅಪಘಾತ ಹೀಗೆ ಒಂದೊಂದು ಕಾರಣ.

ಕಳೆದ 3 ವರ್ಷದ ಅವಧಿಯಲ್ಲಿ ಆಂಧ್ರದಿಂದ ತೆರಳಿದ 1656 ಕಾರ್ಮಿಕರು ಗಲ್ಫ್ ನಲ್ಲಿ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಬಹಿರಂಗಪಡಿಸಿದೆ. ಈ ಬಗ್ಗೆ ಲೋಕಸಭೆಯಲ್ಲಿ ಬುಧವಾರ ಕಿರಿಯ ವಿದೇಶಾಂಗ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಅಪಘಾತದಿಂದ ಹೃದಯಾಘಾತಕ್ಕೊಳಗಾಗಿ ಹೈದರಾಬಾದ್ ಯುವಕ ಸಾವುಅಮೆರಿಕದಲ್ಲಿ ಅಪಘಾತದಿಂದ ಹೃದಯಾಘಾತಕ್ಕೊಳಗಾಗಿ ಹೈದರಾಬಾದ್ ಯುವಕ ಸಾವು

ಆಂಧ್ರಪ್ರದೇಶದಿಂದ ತೆರಳಿರುವ ವಲಸಿಗರ ಪ್ಪೈಕಿ ಕಡಪಾ, ಚಿತ್ತೂರು, ಗೋದಾವರಿ ಜಿಲ್ಲೆಯವರೇ ಹೆಚ್ಚು. ಸ್ವಚ್ಛತಾ ಸಿಬ್ಬಂದಿಯಾಗಿ ಹಾಗೂ ಮನೆಗೆಲಸದವರಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳಿದವರೇ ಹೆಚ್ಚು. ಮಚಲೀಪಟ್ಣಂನ ಸಂಸದ ವಲ್ಲಭನೇನಿ ಬಾಲಶೌರಿ ಕೇಳಿದ ಪ್ರಶ್ನೆಗೆ ಮುರಳೀಧರನ್ ಉತ್ತರ ನೀಡಿದ್ದಾರೆ.

3 people from AP dies in every 2 days in Gulf countries

ಅತಿ ಹೆಚ್ಚಿನ ಸಾವು ಸಂಭವಿಸಿರುವುದು ಕುವೈತ್ ನಲ್ಲಿ. ಆ ನಂತರ ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ. ಕಳೆದ ಮೂರು ವರ್ಷಗಳಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಾವನ್ನಪ್ಪಿದವರ ಅಂಕಿ- ಅಂಶಗಳ ವಿವರ ಹೀಗಿದೆ:
ಕುವೈತ್ 488

ಸೌದಿ ಅರೇಬಿಯಾ 478

ಯುಎಇ 351

ಒಮನ್ 153

ಕತಾರ್ 108

ಬಹರೇನ್ 78

ಒಟ್ಟು 1656

ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಹಾಗೂ ಅಪಘಾತದಲ್ಲಿ ಮೃತಪಡುವುದನ್ನು ತಡೆಗಟ್ಟಲು ಕಾರ್ಮಿಕರ ಕ್ಯಾಂಪ್ ಗಳಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದರ ಜತೆಗೆ ಭಾರತೀಯ ಕಾರ್ಮಿಕರಿಗೆ ಹೆಚ್ಚುವರಿ ಕೆಲಸದ ಅವಧಿ, ವೈದ್ಯಕೀಯ ಸೌಲಭ್ಯದ ಕೊರತೆ ಹಾಗೂ ಉಷ್ಣ ಹವೆಗೆ ವಿಪರೀತ ಒಡ್ಡಿಕೊಳ್ಳುವಂಥ ಅಪಾಯಗಳು ಎದುರಿಸುತ್ತಿದ್ದಾರೆ.

English summary
3 people from AP dies in every 2 days in Gulf countries, haunting data revealed by MEA on Wednesday in Lok Sabha. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X