ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ-ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಸಲು ಮೂರು ಆಯ್ಕೆ

|
Google Oneindia Kannada News

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೇ ನಡೆಸುವ ಪ್ರಸ್ತಾವಕ್ಕೆ ಕಾನೂನು ಆಯೋಗದ ಮಂಡಳಿ ಮೂರು ಆಯ್ಕೆಯನ್ನು ಮುಂದಿಟ್ಟಿದೆ. ಹಾಗೆ ಮಾಡಬಹುದು ಎಂಬುದು ಸಲಹೆ. ಅವುಗಳೇನು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

2019ರಲ್ಲಿ ನಡೆಯಬೇಕಿರುವ 12 ರಾಜ್ಯದ ವಿಧಾನಸಭೆಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಯನ್ನು ಲೋಕಸಭೆ ಚುನಾವಣೆ ಜತೆ ನಡೆಸಬಹುದು. ಬಾಕಿ ಉಳಿದ ಹದಿನಾರು ರಾಜ್ಯ ಮತ್ತು ಪುದುಚೆರಿಗೆ ಆಗ ಚುನಾವಣೆ ಸಾಧ್ಯವಿಲ್ಲ. ಇವುಗಳಿಗೆ 2021ರ ಕೊನೆಯಲ್ಲಿ ನಡೆಸಬಹುದು. 2019ರ ಮಧ್ಯದಲ್ಲಿ ಆರಂಭವಾಗುವ ಮುಂದಿನ ಲೋಕಸಭೆಯ ಅವಧಿ ಅಷ್ಟು ಹೊತ್ತಿಗೆ ಮಧ್ಯಭಾಗ (ಎರಡೂವರೆ ವರ್ಷ) ತಲುಪಿರುತ್ತದೆ ಎಂದು ವರದಿ ಹೇಳಿದೆ.

ಲೋಕಸಭೆ-ವಿಧಾನಸಭೆಗೆ ಒಟ್ಟಿಗೆ ಚುನಾವಣೆ; ಯಾರು-ಏನೆಂದರು?ಲೋಕಸಭೆ-ವಿಧಾನಸಭೆಗೆ ಒಟ್ಟಿಗೆ ಚುನಾವಣೆ; ಯಾರು-ಏನೆಂದರು?

ಅಂಥ ಸನ್ನಿವೇಶದಲ್ಲಿ ರಾಜ್ಯ ವಿಧಾನಸಭೆಯ ಅವಧಿ ಕನಿಷ್ಠ ಹದಿಮೂರು ತಿಂಗಳು (ಬಿಹಾರದಲ್ಲಿ) ಹಾಗೂ ಗರಿಷ್ಠ ಹದಿನೇಳು ತಿಂಗಳು (ಕರ್ನಾಟಕದಲ್ಲಿ) ವಿಸ್ತರಣೆ ಮಾಡಬಹುದು. ಹಾಗೆ ಮಾಡುವ ಮೂಲಕ ಲೋಕಸಭೆ ಚುನಾವಣೆ ಜತೆಗೆ ನಡೆಸಲು ಸಾಧ್ಯವಾಗುತ್ತದೆ.

3 options of law panel to conduct simultaneous LS and assembly polls

ಈ ಮೊದಲ ಎರಡು ಆಯ್ಕೆಯಲ್ಲಿ ಒಟ್ಟಿಗೇ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಸಾಧ್ಯವಾಗದಿದ್ದಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನಡೆಸಬಹುದು. ಆ ವರ್ಷವೇ ಎಲ್ಲ ವಿಧಾನಸಭೆಗೂ ಲೋಕಸಭೆ ಜತೆಗೆ ಅಥವಾ ಪ್ರತ್ಯೇಕವಾಗಿ ಚುನಾವಣೆ ನಡೆಸಬಹುದು.

English summary
Narendra Modi led government proposed to conduct simultaneous LS and assembly polls in the country. For this proposal law panel suggested 3 options. Here are those.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X