ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಗುಂಡಿನ ದಾಳಿಗೆ 9ರ ಬಾಲಕ ಸೇರಿ 3 ಮಕ್ಕಳ ಸಾವು

By Sachhidananda Acharya
|
Google Oneindia Kannada News

ಪೂಂಛ್, ಅಕ್ಟೋಬರ್ 2: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದು, 8 ಜನ ಗಾಯಗೊಂಡಿದ್ದಾರೆ.

ಸಾವಿಗೀಡಾದವರಲ್ಲಿ 9 ವರ್ಷದ ಬಾಲಕ, 15 ವರ್ಷದ ಬಾಲಕಿ ಸೇರಿದ್ದಾರೆ. ನಾಗರೀಕರು ಸೇರಿ 8 ಜನ ಗಾಯಗೊಂಡಿದ್ದು ಪೂಂಛ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.

 3 children killed as Pakistan violates ceasefire in Poonch

ಪೂಂಛ್ ನ ಧಿಘ್ವರ್, ಕೆರ್ನಿ ಮತ್ತು ಶಹ್ಪುರ್ ಭಾಗದಲ್ಲಿ ಇಂದು ಮುಂಜಾನೆ 6.30ಕ್ಕೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದ್ದವು ಎಂದು ಸೇನೆಯ ಮೂಲಗಳು ಹೇಳಿವೆ. ಪಾಕ್ ದಾಳಿಗೆ ಪ್ರತಿಯಾಗಿ ಭಾರತವೂ ಗುಂಡಿನ ದಾಳಿ ನಡೆಸಿದೆ.

 3 children killed as Pakistan violates ceasefire in Poonch

ಪಾಕಿಸ್ತಾನದ ಗುಂಡಿನ ದಾಳಿಯ ಬೆನ್ನಿಗೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಒಟ್ಟಾರೆ ಈ ವರ್ಷದ ಆಗಸ್ಟ್ 1ರವೆಗೆ 285 ಬಾರಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

English summary
A nine-year-old boy and a teenage girl were today killed while nine other civilians injured as Pakistani troops opened fire and lobbed mortars at dozens of villages and posts along the Line of Control in Poonch district of Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X