ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಿಕಲ್ ಸ್ಟ್ರೈಕ್ ನ ಆ ರೋಚಕ ದಿನಕ್ಕೆ ಇಂದಿಗೆ ಎರಡು ವರುಷ...

|
Google Oneindia Kannada News

Recommended Video

ಸರ್ಜಿಕಲ್ ಸ್ಟ್ರೈಕ್ ನ ಆ ರೋಚಕ ದಿನಕ್ಕೆ ಇಂದಿಗೆ ಎರಡು ವರುಷ... | Oneindia Kannada

ನವದೆಹಲಿ, ಸೆಪ್ಟೆಂಬರ್ 29: ಪಾಕಿಸ್ತಾನಿ ಭಯೋತ್ಪಾದಕರ ನಿದ್ದೆ ಕೆಡಿಸಿದ, ಉಗ್ರ ನೆಲೆಯನ್ನು ಪಾಕ್ ಗಡಿಯೊಳಗೇ ನುಗ್ಗಿ ದ್ವಂಸಗೊಳಿಸಿದ ಭಾರತದ ಸರ್ಜಿಕಲ್ ಸ್ಟ್ರೈಕ್ ಎಂಬ ರೋಚಕ ಘಟನೆ ನಡೆದು ಇಂದಿಗೆ ಎರಡು ವರ್ಷ!

2016 ರ ಸೆಪ್ಟೆಂಬರ್ 29 ರಂದು ಪಾಕಿಸ್ತಾನದ ಗಡಿಯೊಳಗೇ ಭಾರತ ಸೇನೆಯ ಯೋಧರು ನುಗ್ಗಿದ್ದರು. ಅತ್ಯಂತ ಗೌಪ್ಯವಾಗಿ ನಡೆದ ಈ ಘಟನೆಯ ನಂತರ ಇಡೀ ವಿಶ್ವವೂ ಭಾರತದತ್ತ ಬೆರಗುಗಣ್ಣಿನಿಂದ ನೋಡಿತ್ತು.

ಸರ್ಜಿಕಲ್ ಸ್ಟ್ರೈಕ್: ಮತ್ತೆರಡು ರೋಚಕ ವಿಡಿಯೋ ಬಿಡುಗಡೆಸರ್ಜಿಕಲ್ ಸ್ಟ್ರೈಕ್: ಮತ್ತೆರಡು ರೋಚಕ ವಿಡಿಯೋ ಬಿಡುಗಡೆ

2nd year anniversary of Indias Surgical Strike against Pakistan terrorists

ಆದರೆ ಈ ಘಟನೆಯ ಕುರಿತು ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಘಟನೆ ನಡೆದಿದ್ದೇ ಸುಳ್ಳು, ಎನ್ ಡಿಎ ಸರ್ಕಾರ ಶ್ರೇಯಸ್ಸು ಪಡೆಯುವುದಕ್ಕೆ ಈ ಕತೆ ಕಟ್ಟಿದೆ ಎಂದು ವಿಪಕ್ಷಗಳು ದೂರಿದ್ದವು. ಆದರೆ ಎನ್ ಡಿಎ ನಾಯಕರು ಮಾತ್ರ ಸರ್ಜಿಕಲ್ ಸ್ಟ್ರೈಕ್ ಅನ್ನು ತಮ್ಮ ಪ್ರತಿ ಭಾಷಣದ
ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರು.

ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿ

ಅಂದು ಆ ಘಟನೆ ನಡೆದಿದ್ದು ಸತ್ಯ ಎಂಬುದಕ್ಕೆ ಪುರಾವೆಯಾಗಿ ಈ ವರ್ಷದ ಜುಲೈನಲ್ಲಿ ವಿಡಿಯೋವೊಂದನ್ನು ಸರ್ಕಾರ ಬಿಡುಗಡೆ ಮಾಡಿತು. ಇದೀಗ ಸೆ.26 ರಂದು ಸಹ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನ ಮತ್ತೊಂದಷ್ಟು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.

ಸರ್ಜಿಕಲ್ ಸ್ಟ್ರೈಕ್ ಸೇಡು ತೀರಿಸಿಕೊಳ್ಳಲು ತಯಾರಾಗಿದ್ದಾರೆ 300 ಭಯೋತ್ಪಾದಕರುಸರ್ಜಿಕಲ್ ಸ್ಟ್ರೈಕ್ ಸೇಡು ತೀರಿಸಿಕೊಳ್ಳಲು ತಯಾರಾಗಿದ್ದಾರೆ 300 ಭಯೋತ್ಪಾದಕರು

2016 ರಲ್ಲಿ ಜಮ್ಮು-ಕಾಶ್ಮೀರದ ಉರಿಯಲ್ಲಿನ ಸೈನಿಕ ಶಿಬಿರದ ಮೇಲೆ ಪಾಕ್ ಉಗ್ರರು ದಾಳಿ ನಡೆಸಿ ಭಾರತೀಯ ಸೇನೆಯ ಹಲವು ಯೋಧರನ್ನು ಕೊಂದಿದ್ದರು. ಈ ದಾಳಿಗೆ ಸೇಡು ಎಂಬಂತೆ ಭಾರತ ಉಗ್ರ ನೆಲೆಯನ್ನು ದಮನಗೊಳಿಸಿತ್ತು.

English summary
2nd year anniversary of India's Surgical Strike, Surgical strike against Pakistan, Indian army and Pakistan terrorists
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X