• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2ಜಿ ಹಗರಣ, ಸಿಬಿಐ ಲೆಕ್ಕದಂತೆ 30 ಸಾವಿರ ಕೋಟಿ ರು!

By ವಿಕಾಸ್ ನಂಜಪ್ಪ
|

ಬೆಂಗಳೂರು, ಡಿಸೆಂಬರ್ 21: 2ಜಿ ತರಂಗಗುಚ್ಛ ಹಂಚಿಕೆ ಹಗರಣದಲ್ಲಿ ಅಂದಿನ ಟೆಲಿಕಾಂ ಸಚಿವ ಎ ರಾಜಾ ಪಡೆದ ಲಂಚದ ಮೊತ್ತವನ್ನು ಸ್ವತಃ ರಾಜಾ ಕೂಡಾ ಲೆಕ್ಕ ಹಾಕಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಅಂದಿನ ಮಹಾ ಲೆಕ್ಕ ಪರಿಶೋಧಕ(ಸಿಎಜಿ) ವಿನೋದ್ ರೈ ಕೊಟ್ಟ ಮೊತ್ತ ಹಾಗೂ ಸಿಬಿಐ ನೀಡಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ ಏಕೆ? ಮುಂದೆ ಓದಿ..

2ಜಿ ಸ್ಪೆಕ್ಟ್ರಂ ಹಗರಣ: ಎಲ್ಲಾ ಆರೋಪಿಗಳು ಖುಲಾಸೆ

ಮಾಜಿ ಮಹಾ ಲೆಕ್ಕ ಪರಿಶೋಧಕ ವಿನೋದ್ ರೈ ಅವರು 2ಜಿ ಹಗರಣದ ಮೊತ್ತ 1.76 ಲಕ್ಷ ಕೋಟಿ ರುಪಾಯಿ - ಎಂದು ವರದಿ ನೀಡಿದ್ದರು. ಆದರೆ, ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟದ ಮೊತ್ತ 30,000 ಕೋಟಿ ರು ಎಂದು ಸಿಬಿಐ ವರದಿ ನೀಡಿದೆ.

2ಜಿ ಹಗರಣ : 'ಸುಳ್ಳು ವರದಿ ನೀಡಿದ ವಿನೋದ್ ರೈ ಕ್ಷಮೆಯಾಚಿಸಲಿ'

ಸಿಬಿಐನ ಮಾಜಿ ನಿರ್ದೇಶಕ ಎಪಿ ಸಿಂಗ್ ಅವರ ಎಣಿಕೆಯಂತೆ 2001ರಲ್ಲಿ ಸ್ಪೆಕ್ಟ್ರಂ ಲೈಸನ್ಸ್ ಹರೌ ಬೆಲೆಯಲ್ಲಿನ ವ್ಯತ್ಯಾಸದಿಂದ ಆದ ನಷ್ಟ ಹಾಗೂ 2007ರಲ್ಲಿ ಲೈಸನ್ಸ್ ಗೆ ನೀಡಿದ ಮೊತ್ತ ತುಲನೆ ಮಾಡಲಾಗಿದೆ.

2ಜಿ ಸ್ಪೆಕ್ಟ್ರಂ ತೀರ್ಪು: ನ್ಯಾಯಾಂಗದ ವಿರುದ್ಧ ಛೂಬಿಟ್ಟ ಟೀಕಾಸ್ತ್ರ!

ಸಿಬಿಐ ವಾದದಲ್ಲೂ ಹುರುಳಿದೆ. ಲೈಸನ್ಸ್ ನೀಡಿದ ತಕ್ಷಣ ಸ್ವನ್ ಟೆಲಿಕಾಮ್ ಗೆ ಶೇ 45ರಷ್ಟು ಅಂದರೆ ಸುಮಾರು 4,200 ಕೋಟಿ ರು ಹಾಗೂ ಯೂನಿಟೆಕ್ ಗೆ ಶೇ 65ರ್ಷ್ತು ಈಕ್ವಿಟಿ ಅಂದರೆ 6,200 ಕೋಟಿ ರು ಸಿಕ್ಕಿತ್ತು. ಇದನ್ನು ಪರಿಗಣಿಸಿದರೆ , 30,000 ಕೊಟಿ ರು ನಷ್ಟದ ಮೊತ್ತ ತೋರಿಸಬಹುದು.

2ಜಿ ಸ್ಪೆಕ್ಟ್ರಂ: ಎಲ್ಲಾ ಆರೋಪಿಗಳು ಖುಲಾಸೆ, ಯಾರು, ಏನು ಹೇಳಿದರು?

ಅಂದಿನ ಟೆಲಿಕಾಂ ಸಚಿವ ಎ.ರಾಜಾರಿಂದ ಈ ಎರಡು ಕಂಪನಿಗಳಿಗೆ ಲಾಭವಾಗಿತ್ತು. ಪರಿಸರ ಖಾತೆ ಸಿಕ್ಕಾಗಲೂ ಈ ಕಂಪನಿಗಳಿಗೆ ಕೊಡುಗೆಗಳನ್ನು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

2ಜಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ, ಸಿಬಿಐ ತನಿಖೆ ನಡೆಸಿ, ಎ ರಾಜಾ, ಕನ್ನಿಮೋಳಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ ಜೈಲಿಗೆ ಕಳಿಸಲಾಗಿತ್ತು. ಆದರೆ, ಈಗ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಓ ಪಿ ಸೈನಿ ಅವರು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಗುರುವಾರದಂದು ಆದೇಶ ಹೊರಡಿಸಿದ್ದಾರೆ.

English summary
The loss in the 2G spectrum scam was Rs 30,000 crore as per the findings of the CBI. The CAG had initially pegged the loss at Rs 1.76 lakh crore and the government of the day was stating a zero loss figure in a bid to counter the CAG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X