ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಜಿ ಹಗರಣ: ಮ್ಯಾಕ್ಸಿಸ್ ಸಂಸ್ಥೆಗೆ ನಿರ್ಬಂಧ ಹೇರಿದ ಸುಪ್ರೀಂಕೋರ್ಟ್

ಏರ್ ಸೆಲ್-ಮ್ಯಾಕ್ಸಿಸ್ ನಡುವಿನ 65 ಕೋಟಿ ರು ಡೀಲ್ ನಿಂದ ಯಾವುದೇ ಆದಾಯ ಪಡೆಯದಂತೆ ಮ್ಯಾಕ್ಸಿಸ್ ಸಂಸ್ಥೆಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ಬಂಧ ಹೇರಿದೆ.

By Mahesh
|
Google Oneindia Kannada News

ನವದೆಹಲಿ, ಜನವರಿ 06: ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಬಂಧನ ಭೀತಿಯಿಂದ ಸದ್ಯಕ್ಕೆ ಪಾರಾಗಿರುವ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಮುಂದಿನ ಆದೇಶದ ತನಕ ಏರ್ ಸೆಲ್-ಮ್ಯಾಕ್ಸಿಸ್ ನಡುವಿನ 65 ಕೋಟಿ ರು ಡೀಲ್ ನಿಂದ ಯಾವುದೇ ಆದಾಯ ಪಡೆಯದಂತೆ ಮ್ಯಾಕ್ಸಿಸ್ ಸಂಸ್ಥೆಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ಬಂಧ ಹೇರಿದೆ.

ಸುಪ್ರೀಂಕೋರ್ಟಿನ ಈ ಆದೇಶದಿಂದಾಗಿ ಏರ್ ಸೆಲ್-ಮ್ಯಾಕ್ಸಿಸ್ ಹೊಂದಿರುವ 2ಜಿ ತರಂಗ ಗುಚ್ಛ(spectrum)ವನ್ನು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಷನ್ ಹಾಗೂ ಭಾರ್ತಿ ಏರ್ ಟೆಲ್ ಗೆ ಮಾರಾಟ ಮಾಡುವ ಪ್ರಕ್ರಿಯೆಗೆ ತಡೆ ಸಿಕ್ಕಿದೆ.[2ಜಿ ಹಗರಣದಲ್ಲಿ ಕರುಣಾನಿಧಿ ಕುಟುಂಬಕ್ಕೆ ಸಿಕ್ಕಿದ್ದೆಷ್ಟು?]

2G: SC bars Maxis from earning revenue till accused come to court

ಮ್ಯಾಕ್ಸಿಸ್ ಸಂಸ್ಥೆಯ ಮಾಲೀಕರು ಭಾರತದಲ್ಲಿ ಡೀಲ್ ಮಾಡುತ್ತಿದ್ದು, ಇಲ್ಲಿನ ಕಾನೂನಿಗೆ ತಲೆಬಾಗಬೇಕಿದೆ. ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಒಪ್ಪಂದದಿಂದ ಯಾವುದೇ ಆದಾಯ ಪಡೆಯದಂತೆ ನಿರ್ಬಂಧ ಹೇರಲಾಗಿದೆ ಎಂದು ಮುಖ್ಯ ನ್ಯಾ. ಜೆಎಸ್ ಖೆಹರ್ ಹೇಳಿದ್ದಾರೆ.[ಮಾರನ್ 700 ಪ್ಲಸ್ ಕೋಟಿ ಆಸ್ತಿ 'ಇಡಿ' ವಶಕ್ಕೆ]

2004 ಹಾಗೂ 2007ರಲ್ಲಿ ಕೇಂದ್ರ ಟೆಲಿಕಾಂ ಸಚಿವರಾಗಿದ್ದ ದಯಾನಿಧಿ ಮಾರನ್ ಅವರು ಏರ್ ಸೆಲ್ ಗೆ ತರಂಗ ಗುಚ್ಛ ಗುತ್ತಿಗೆ ಸಿಗುವಂತೆ ಮಾಡಿದ್ದರು. ಇದಕ್ಕೆ ಬದಲಾಗಿ ಮಲೇಷಿಯಾ ಮೂಲದ ಮ್ಯಾಕ್ಸಿಸ್ ಕಮ್ಯೂನಿಕೇಷನ್ ಸಂಸ್ಥೆ, ಸನ್ ನೆಟ್ವರ್ಕ್ ಮಾರಲು ಮಾರನ್ ಮುಂದಾಗಿದ್ದರು.ಸನ್ ನೆಟ್ವರ್ಕ್ ನಲ್ಲಿ ಮ್ಯಾಕ್ಸಿಸ್ 69 ಕೋಟಿ ರು ಹೂಡಿಕೆ ಮಾಡಿತ್ತು ಎನ್ನಲಾಗಿದೆ.[ಮಾರನ್ ಬಂಧನಕ್ಕೆ ಮುಂದಾದ ಸಿಬಿಐಗೆ ಸುಪ್ರೀಂ ತಡೆ]

ಸುಮಾರು 549,96,01,793 ಲಂಚ ರೂಪದಲ್ಲಿ ಪಡೆದು ಸನ್ ಡೈರೆಕ್ಟ್ ನಲ್ಲಿ ಬಂಡವಾಳ ರೂಪದಲ್ಲಿ ಹೂಡಲಾಗಿತ್ತು. ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್ಸ್ ಒಡೆತನದ ಸೌಥ್ ಏಷ್ಯಾ ಎಂಟರ್ ಟ್ರೈನ್ ಮೆಂಟ್ ಹೋಲಿಂಗ್ಸ್ ಹಣ ಪಾವತಿಸಿರುವ ಬಗ್ಗೆ ಮಾಹಿತಿ, ಪುರಾವೆ ಸಿಕ್ಕಿತು. ಮ್ಯಾಕ್ಸಿಸ್ ಸಂಸ್ಥೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು ಹಾಗೂ ಸುಪ್ರೀಂ ಕೋರ್ಟ್ ನಿಂದ ಸಮನ್ಸ್ ಜಾರಿಯಾಗಿತ್ತು.

English summary
The Supreme Court on Friday restrained Maxis from earning any revenue from Aircel-Maxis's 65 million mobile phone connections till further orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X