ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ 29,429 ಹೊಸ ಕೇಸ್ ಪತ್ತೆ, ಟಾಪ್ 5 ರಾಜ್ಯಗಳು ಯಾವುದು?

|
Google Oneindia Kannada News

ದೆಹಲಿ, ಜುಲೈ 15: ಕಳೆದ 24 ಗಂಟೆಯಲ್ಲಿ 29,429 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 9,36,181ಕ್ಕೆ ಏರಿಕೆಯಾಗಿದೆ.

ನಿನ್ನೆ ಒಂದೇ ದಿನ 582 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಹೀಗಾಗಿ, ಇದುವರೆಗೂ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 24,309ಕ್ಕೆ ಜಿಗಿದಿದೆ.

ಕೊವಿಡ್-19ಗೆ ಬಲಿಯಾದವರ ಅಂತ್ಯಕ್ರಿಯೆಗೆ 15000 ರೂ. ಘೋಷಿಸಿದ ಸರ್ಕಾರ!ಕೊವಿಡ್-19ಗೆ ಬಲಿಯಾದವರ ಅಂತ್ಯಕ್ರಿಯೆಗೆ 15000 ರೂ. ಘೋಷಿಸಿದ ಸರ್ಕಾರ!

ದೇಶದಲ್ಲಿ ವರದಿಯಾಗಿರುವ ಒಟ್ಟು ಸೋಂಕಿತರ ಪೈಕಿ 5,92,032 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 3,19,840 ಜನರು ಸೋಂಕಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮುಂದೆ ಓದಿ...

ಚೇತರಿಕೆ ಪ್ರಮಾಣ ಏರಿಕೆ

ಚೇತರಿಕೆ ಪ್ರಮಾಣ ಏರಿಕೆ

ಇಂದಿನ ವರದಿ ಬಳಿಕ ದೇಶದಲ್ಲಿ ಚೇತರಿಕೆ ಕಂಡಿರುವ ರೋಗಿಗಳ ಶೇಕಡಾವಾರು ನೋಡುವುದಾದರೆ 63.20ರಷ್ಟು ಏರಿಕೆಯಾಗಿದೆ. ಒಟ್ಟಾರೆ ಪ್ರಕರಣಗಳ ಪೈಕಿ ಭಾರತದಲ್ಲಿ ಶೇಕಡಾ 96.05ರಷ್ಟು ಜನರು ಗುಣಮುಖರಾಗಿದ್ದಾರೆ. ಶೇಕಡಾ 3.95ರಷ್ಟು ಮಂದಿ ಸಾವನ್ನಪ್ಪಿದ್ದಾರೆ.

ಒಂದೇ ದಿನ 3.2 ಲಕ್ಷ ಪರೀಕ್ಷೆ

ಒಂದೇ ದಿನ 3.2 ಲಕ್ಷ ಪರೀಕ್ಷೆ

ಜುಲೈ 14ರಂದು ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಜನರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 3,20,161 ಜನರನ್ನು ಪರೀಕ್ಷೆ ಮಾಡಿರುವುದು ಎಂದು ಐಸಿಎಂಆರ್ ತಿಳಿಸಿದೆ. ಈ ಮೂಲಕ ಭಾರತದಲ್ಲಿ ಈ ಕ್ಷಣದವರೆಗೂ 1,24,12,664 ಮಂದಿಗೆ ಕೊವಿಡ್ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರು ಲಾಕ್ ಡೌನ್ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುಬೆಂಗಳೂರು ಲಾಕ್ ಡೌನ್ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಟಾಪ್ ಐದು ರಾಜ್ಯಗಳು ಯಾವುದು

ಟಾಪ್ ಐದು ರಾಜ್ಯಗಳು ಯಾವುದು

ಜುಲೈ 14ರಂದು ಅತಿ ಹೆಚ್ಚು ಕೊರೊನಾ ಕೇಸ್ ದಾಖಲು ಮಾಡಿರುವ ಟಾಪ್ ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ನಿನ್ನೆ ಸಂಜೆಯವರೆಗೂ 6741 ಕೇಸ್ ದಾಖಲಾಗಿದೆ. ತಮಿಳುನಾಡಿನಲ್ಲಿ 4526 ಕೇಸ್ ವರದಿಯಾಗಿದೆ. ಕರ್ನಾಟಕದಲ್ಲಿ 2496 ಕೇಸ್ ಪತ್ತೆಯಾಗಿದೆ. ಆಂಧ್ರ ಪ್ರದೇಶದಲ್ಲಿ 1916 ಕೇಸ್ ವರದಿಯಾಗಿದ್ದರೆ, ದೆಹಲಿಯಲ್ಲಿ 1606 ಜನರಿಗೆ ಸೋಂಕು ದೃಢವಾಗಿದೆ.

ಜಗತ್ತಿನಲ್ಲಿ ಹೆಚ್ಚು ಕೇಸ್ ದಾಖಲು ಮಾಡಿದ ದೇಶಗಳು?

ಜಗತ್ತಿನಲ್ಲಿ ಹೆಚ್ಚು ಕೇಸ್ ದಾಖಲು ಮಾಡಿದ ದೇಶಗಳು?

ಕಳೆದ 24 ಗಂಟೆಗೆ ಅಮೆರಿಕದಲ್ಲಿ 65,594 ಕೊರೊನಾ ಕೇಸ್ ಪತ್ತೆಯಾಗಿದೆ. ಬ್ರೆಜಿಲ್‌ನಲ್ಲಿ 43,245 ಜನರಿಗೆ ಕೊವಿಡ್ ತಗುಲಿದೆ. ಮೂರನೇ ಸ್ಥಾನದಲ್ಲಿ ಭಾರತವಿದ್ದು 29,429 ಕೊವಿಡ್ ಪ್ರಕರಣ ದಾಖಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಿನ್ನೆ 10,496 ಕೇಸ್ ವರದಿಯಾಗಿದೆ. ಐದನೇ ಸ್ಥಾನದಲ್ಲಿ ರಷ್ಯಾವಿದ್ದು 6248 ಜನರಿಗೆ ಸೋಂಕು ತಗುಲಿದೆ.

English summary
Spike of 29,429 COVID19 cases & 582 deaths reported in the last 24 hours in India. Total positive cases stand at 9,36,181 including 3,19,840 active case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X