ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ಹಂತದ ರಣಕಣದಲ್ಲಿ 340 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನಲೆ

|
Google Oneindia Kannada News

ನವದೆಹಲಿ, ಏಪ್ರಿಲ್ 19: ಲೋಕಸಭೆ ಚುನಾವಣೆ 2019ರ ಮೂರನೇ ಹಂತದ ಚುನಾವಣೆಯಲ್ಲಿ 392 ಕೋಟ್ಯಧಿಪತಿಗಳಿ, 340 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆಯುಳ್ಳವರು ಕಣದಲ್ಲಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

1594 ಅಭ್ಯರ್ಥಿಗಳ ಪೈಕಿ 340(12%) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿದ್ದಾರೆ. 230(14%) ಅಭ್ಯರ್ಥಿಗಳು ಗುರುತರ ಕ್ರಿಮಿನಲ್ ಮೊಕದ್ದಮೆ ಇವೆ ಎಂದಿದ್ದರೆ ಹಾಗೂ 14 ಮಂದಿ ಅಪರಾಥಿ ಎನಿಸಿಕೊಂಡವರು ಇದ್ದಾರೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

13 ಅಭ್ಯರ್ಥಿಗಳ ವಿರುದ್ಧ ಕೊಲೆ(ಐಪಿಸಿ 302) ಕೇಸ್ ಗಳಿವೆ. 30 ಅಭ್ಯರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 307 ಕೇಸ್ ಗಳಿವೆ. 14 ಅಭ್ಯರ್ಥಿಗಳ ವಿರುದ್ಧ ಕಿಡ್ನಾಪ್, ಬೆದರಿಕೆ(ಐಪಿಸಿ ಸೆಕ್ಷನ್ 364 ಎ) ಕೇಸ್ ಗಳಿವೆ. 29 ಅಭ್ಯರ್ಥಿಗಳ ವಿರುದ್ಧ ಮಹಿಳೆ ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ಇನ್ನಿತರ ಮೊಕದ್ದಮೆಯಿದೆ. ಐಪಿಸಿ ಸೆಕ್ಷನ್ 376, ಐಪಿಸಿ ಸೆಕ್ಷನ್ 354, 498 ಎರಂತೆ ಕೇಸ್ ಗಳಿವೆ. 26 ಅಭ್ಯರ್ಥಿಗಳ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪಗಳಿವೆ ಎಂದು ವರದಿ ಹೇಳಿದೆ.

29 candidates with pending crimes against women contesting 3rd phase of LS polls

ಪಕ್ಷವಾರು ಲೆಕ್ಕಾಚಾರದಂತೆ ಕಾಂಗ್ರೆಸ್ಸಿನ 90 ಅಭ್ಯರ್ಥಿಗಳ ಪೈಕಿ 40(44%), ಬಿಜೆಪಿಯ 97 ಅಭ್ಯರ್ಥಿಗಳ 38(39%), ಬಿಎಸ್ಪಿಯ 92 ಅಭ್ಯರ್ಥಿಗಳ ಪೈಕಿ 16(17%), ಸಿಪಿಐಎಂನ 19 ಅಭ್ಯರ್ಥಿಗಳ ಪೈಕಿ 11(58%) ಮಂದಿ ವಿರುದ್ಧ ಪ್ರಕರಣಗಳಿವೆ.

English summary
340 candidates with a criminal background and 392 crorepatis are in the fray for the third phase of the Lok Sabha elections 2019. 340(21%) out of 1594 candidates have declared criminal cases against themselves says a report by the Association for Democratic Reforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X