ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 26,624 ಹೊಸ ಕೋವಿಡ್ ಪ್ರಕರಣ ದಾಖಲು

|
Google Oneindia Kannada News

ನವದೆಹಲಿ, ಡಿಸೆಂಬರ್ 20: ಭಾರತದಲ್ಲಿ 24 ಗಂಟೆಯಲ್ಲಿ 26,624 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. 341ಜನರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,45,477ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ 29,690 ಜನರು ಗುಣಮುಖಗೊಂಡಿದ್ದಾರೆ. ಇದುವರೆಗೂ ಗುಣಮುಖಗೊಂಡವರ ಒಟ್ಟು ಸಂಖ್ಯೆ 95,80,402.

ವರ್ಷದ ವಿಶೇಷ; ಕೋವಿಡ್, ಮಹಾಮಳೆಯಲ್ಲಿ ಕೊಚ್ಚಿ ಹೋದ ಕೊಡಗಿನ ನೆಮ್ಮದಿ ವರ್ಷದ ವಿಶೇಷ; ಕೋವಿಡ್, ಮಹಾಮಳೆಯಲ್ಲಿ ಕೊಚ್ಚಿ ಹೋದ ಕೊಡಗಿನ ನೆಮ್ಮದಿ

ಭಾರತದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,00,31,223ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳು 3,05,344. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಶನಿವಾರ ದೇಶದಲ್ಲಿ ಹೊಸ ಪ್ರಕರಣಗಳು ಶೇ 5.8ರಷ್ಟು ಏರಿಕೆಯಾಗಿದೆ.

ಕೋವಿಡ್-19 ಲಸಿಕೆ ಪಡೆಯಲು ನೋಂದಣಿ ಅಗತ್ಯ: ಯಾವುದೇ ಬಲವಂತವಿಲ್ಲ!ಕೋವಿಡ್-19 ಲಸಿಕೆ ಪಡೆಯಲು ನೋಂದಣಿ ಅಗತ್ಯ: ಯಾವುದೇ ಬಲವಂತವಿಲ್ಲ!

26,624 New COVID Cases In India In 24 Hours

ಡಿಸೆಂಬರ್ 19ರ ತನಕ ದೇಶದಲ್ಲಿ 16,11,98,195 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಡಿಸೆಂಬರ್ 19ರಂದು 11,07,681 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ಪಂಚಾಯಿತಿ ಚುನಾವಣೆ; ಆಯೋಗದಿಂದ ವಿಶೇಷ ಕೋವಿಡ್ ಕಿಟ್‌ ಪಂಚಾಯಿತಿ ಚುನಾವಣೆ; ಆಯೋಗದಿಂದ ವಿಶೇಷ ಕೋವಿಡ್ ಕಿಟ್‌

ಯಾವ ರಾಜ್ಯದಲ್ಲಿ ಎಷ್ಟು? : ಭಾರತದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದಲ್ಲಿ ಶನಿವಾರ 3940 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 18,92,707ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 61,095.

ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 1152 ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 9,08,275ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 14,370.

ಆಂಧ್ರಪ್ರದೇಶ 8,78,285. ತಮಿಳುನಾಡು 8,05,777. ಕೇರಳ 7,00,159. ದೆಹಲಿ 6,15,914. ಉತ್ತರ ಪ್ರದೇಶದಲ್ಲಿ 5,73,401 ಪ್ರಕರಣಗಳು ದಾಖಲಾಗಿವೆ.

English summary
India records 26,624 new COVID-19 cases and 341 deaths in the last 24 hours. Health ministry said that total cases in India 1,00,31,223. Active cases 3,05,344.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X