ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!

|
Google Oneindia Kannada News

ಒಂದು ಷರಟು ತೆಗೆದುಕೊಂಡರೆ ಮತ್ತೊಂದು ಫ್ರೀ! ಎರಡು ಸೀರೆಗೆ ಒಂದರ ಬೆಲೆ ಅಷ್ಟೇ. ಇಂಥ ಕೊಡುಗೆಗಳನ್ನು ಕೇಳಿರ್ತೀರಿ, ನೋಡಿರ್ತೀರಿ ಹಾಗೂ ಪಡೆದಿರ್ತೀರಿ. ಈಗ ಅಂಥ ಆಫರ್ ಗಳನ್ನು ಕೊಡುವ ಸರದಿ ಎಂಜಿನಿಯರ್ ಕಾಲೇಜುಗಳದು. ಏಕೆಂದರೆ, ಅನುಮತಿ ಪಡೆದ ಕೋರ್ಸ್ ಗಳ ಸೀಟು ಭರ್ತಿಯಾಗದೆ ಹಾಗೇ ಉಳಿದುಬಿಟ್ಟರೆ ಖಾಸಗಿ ಕಾಲೇಜುಗಳಲ್ಲಿ ಆ ಕೋರ್ಸ್ ಗಳ ಮಾನ್ಯತೆ ರದ್ದಾಗಬಹುದು.

ಎಂಜಿನಿಯರಿಂಗ್ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲೇಬೇಕು ಅನ್ನೋ ಒತ್ತಡದಲ್ಲಿ ಫೀ 2,500 ರುಪಾಯಿ, ಪುಕ್ಕಟೆ ಲ್ಯಾಪ್ ಟಾಪ್. ಅಷ್ಟೇ ಅಲ್ಲ, ಪುಕ್ಕಟೆ ದ್ವಿಚಕ್ರ ವಾಹನ ಕೂಡ ನೀಡಲಾಗುತ್ತಿದೆಯಂತೆ. ಇವೆಲ್ಲ ವಿದ್ಯಾರ್ಥಿಗಳನ್ನು ಸೆಳೆಯುವುದಕ್ಕೆ ಮಾಡುತ್ತಿರುವ ಮಾರ್ಕೆಟಿಂಗ್ ತಂತ್ರ.

ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ (AICTE) ಬಿಡುಗಡೆ ಮಾಡಿದ ಅಂಕಿ-ಅಂಶದ ಪ್ರಕಾರ, ಎಂಜಿನಿಯರಿಂಗ್ ನ ನಾನಾ ಕೋರ್ಸ್ ಗಳೆಲ್ಲವೂ ಸೇರಿ ಭಾರತದಾದ್ಯಂತ 15.5 ಲಕ್ಷ ಸೀಟುಗಳಿವೆ. ಇನ್ನು ಎಂಜಿನಿಯರಿಂಗ್ ಕಾಅಲೇಜುಗಳ ಸಂಖ್ಯೆ 3291. ಆ ಪೈಕಿ 2016-17ರಲ್ಲಿ ಶೇ 50ರಷ್ಟು ಸೀಟುಗಳು ಖಾಲಿಖಾಲಿ. 2015-16ರಲ್ಲೂ ಅದೇ ಸ್ಥಿತಿ. ಒಟ್ಟು 14.76 ಲಕ್ಷ ಸೀಟುಗಳ ಪೈಕಿ ಅರ್ಧದಷ್ಟನ್ನು ಕೇಳುವವರೇ ಇಲ್ಲ.

ರಿಯಾಯಿತಿ, ಮೊದಲ ಸೆಮಿಸ್ಟರ್ ಫೀ ಪೂರ್ತಿ ಮನ್ನಾ

ರಿಯಾಯಿತಿ, ಮೊದಲ ಸೆಮಿಸ್ಟರ್ ಫೀ ಪೂರ್ತಿ ಮನ್ನಾ

ಇನ್ನು ಈ ವರ್ಷದ ಕಥೆಯೇ ಕೇಳಿ: ಗುಜರಾತ್ ನಲ್ಲಿನ ನಡೆದ ಮೊದಲ ಸುತ್ತಿನ ಪ್ರವೇಶ ಪ್ರಕ್ರಿಯೆ ನಂತರ 55,422 ಸೀಟುಗಳ ಪೈಕಿ 34,622 ಖಾಲಿಯಿದ್ದವು. ಇಂಥ ಪರಿಸ್ಥಿತಿಯನ್ನು ಎದುರಿಸುವ ಕಾರಣಕ್ಕೆ ಕಾಲೇಜುಗಳು ನಾನಾ ಆಫರ್ ಗಳನ್ನು ಕೊಡುತ್ತಿವೆ. ಶುಲ್ಕದಲ್ಲಿ ರಿಯಾಯಿತಿ, ಮೊದಲ ಸೆಮಿಸ್ಟರ್ ಫೀ ಪೂರ್ತಿ ಮನ್ನಾ, ಪುಕ್ಕಟೆ ಲ್ಯಾಪ್ ಟಾಪ್.

ಕಾಲೇಜು ಫೀ ವರ್ಷಕ್ಕೆ 2,500 ರುಪಾಯಿ ಮಾತ್ರ

ಕಾಲೇಜು ಫೀ ವರ್ಷಕ್ಕೆ 2,500 ರುಪಾಯಿ ಮಾತ್ರ

ಅಷ್ಟೇ ಅಲ್ಲ, ನಾಲ್ಕು ವರ್ಷದ ಕೋರ್ಸ್ ಫೀ ಒಟ್ಟಿಗೆ ಕಟ್ಟುವವರಿಗೆ ಹಾಸ್ಟೆಲ್ ಮತ್ತು ಸಂಚಾರಕ್ಕೆ ಆಗುವ ವೆಚ್ಚದ ಅರ್ಧದಷ್ಟು ಮಾತ್ರ. ಇನ್ನೂ ಕೆಲವು ಕಡೆ ದ್ವಿಚಕ್ರ ವಾಹನವನ್ನೇ ಬಿಟ್ಟಿ ಕೊಡುತ್ತಿದ್ದಾರೆ. ಗುಜರಾತ್ ನ ಒಂದು ಎಂಜಿನಿಯರಿಂಗ್ ಕಾಲೇಜು ಫೀ ವರ್ಷಕ್ಕೆ 2,500 ರುಪಾಯಿ ಅಂದರೆ ನಂಬ್ತೀರಾ!?

ಒಬ್ಬ ವಿದ್ಯಾರ್ಥಿಗೆ ಪ್ರವೇಶ ಕೊಡಿಸಿದರೆ 10,000 ಕಮಿಷನ್

ಒಬ್ಬ ವಿದ್ಯಾರ್ಥಿಗೆ ಪ್ರವೇಶ ಕೊಡಿಸಿದರೆ 10,000 ಕಮಿಷನ್

ಕೆಲ ಕಾಲೇಜುಗಳಲ್ಲಂತೂ ಕಮಿಷನ್ ಏಜೆಂಟ್ ಗಳ ಮೂಲಕ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ. ಹಾಗೆ ಒಬ್ಬ ವಿದ್ಯಾರ್ಥಿಯನ್ನ್ನು ಕರೆತಂದು ಪ್ರವೇಶ ಕೊಡಿಸಿದರೆ 10,000 ಕಮಿಷನ್ ಕೊಡಲಾಗುತ್ತಿದೆ. ಹಲವು ವರ್ಷಗಳಿಂದ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಹಳ ಮಾನ್ಯತೆ ಇತ್ತು. ಇತ್ತೀಚೆಗೆ ಅಂಥ ಮಾನ್ಯತೆ ಸಿಗುತ್ತಿಲ್ಲ. ಭಾರತದಲ್ಲಿ ಗುಣಮಟ್ಟದ ಎಂಜಿನಿಯರಿಂಗ್ ಗಳು ಹೊರಬರುತ್ತಿಲ್ಲ ಎಂಬ ಆಕ್ಶ್ಶೇಪವೂ ಕೇಳಿಬರುತ್ತಿದೆ.

ಏಕೆ ಈ ರೀತಿ ಕೊಡುಗೆಗಳನ್ನು ಕೊಡ್ತಾರೆ?

ಏಕೆ ಈ ರೀತಿ ಕೊಡುಗೆಗಳನ್ನು ಕೊಡ್ತಾರೆ?

ಹ್ಞಾಂ, ಎಂಜಿನಿಯರಿಂಗ್ ಕಾಲೇಜುಗಳು ಏಕೆ ಈ ರೀತಿ ಕೊಡುಗೆಗಳನ್ನು ನೀಡಿ, ವಿದ್ಯಾರ್ಥಿಗಳನ್ನು ಸೆಳೆಯಬೇಕು ಅನ್ನೋ ಪ್ರಶ್ನೆ ನಿಮಗೆ ಬಂದಿರಬಹುದು. ಏಕೆಂದರೆ, ವರ್ಷಗಳ ಕಾಲ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಬಿದ್ದಿದ್ದವು ಅಂದರೆ AICTE ನಿಯಮಗಳ ಅನ್ವಯ ಆ ಕೋರ್ಸ್ ಗಳನ್ನು ನಿಲ್ಲಿಸಿ, ಬಾಗಿಲು ಮುಚ್ಚಿಕೊಂಡು ಹೋಗಿಬೇಕಾಗುತ್ತದೆ. ಆದ್ದರಿಂದಲೇ ಈಗ ಕಾಲೇಜುಗಳೇ ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿವೆ.

English summary
Now the season starts for engineering college admission. Staring at the possibility of thousands of seats going vacant and facing imminent closure under AICTE norms, private engineering colleges are now offering all kinds of lures to attract students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X