• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಬಾ ರಾಮ್ ದೇವ್ ಕಂಪೆನಿಗೆ ಭೂ ಸ್ವಾಧೀನದಲ್ಲಿ 250 ಕೋಟಿ ರಿಯಾಯಿತಿ

|
Google Oneindia Kannada News

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಾಬಾ ರಾಮ್ ದೇವ್ ಕಂಪೆನಿಗೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ 4.6 ಕೋಟಿ ಅಮೆರಿಕನ್ ಡಾಲರ್ (250 ಕೋಟಿ ರುಪಾಯಿಗೂ ಹೆಚ್ಚು) ರಿಯಾಯಿತಿಯನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನೀಡಲಾಗಿದೆ ಎಂದು ಮಾಧ್ಯಮದ ವರದಿಯೊಂದು ಉಲ್ಲೇಖ ಮಾಡಿದೆ.

ರಾಯಿಟರ್ಸ್ ನಿಂದ ಸರಕಾರಿ ದಾಖಲೆಗಳ ಪರಿಶೀಲನೆ ಹಾಗೂ ಸರಕಾರಿ ಅಧಿಕಾರಿಗಳ ಸಂದರ್ಶನ ಮಾಡಿದ್ದು, ಭೂಮಿಯ ರಿಯಲ್ ಎಸ್ಟೇಟ್ ಮೌಲ್ಯವನ್ನು ಪ್ರತ್ಯೇಕವಾಗಿ ಅಂದಾಜು ಮಾಡಿ, ವರದಿ ಸಿದ್ಧಪಡಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಮ್ ದೇವ್ ಉದ್ಯಮದ ಲಾಭದಲ್ಲೂ ಭಾರೀ ಏರಿಕೆ ಆಗಿದೆ ಎಂದು ವರದಿ ತಿಳಿಸುತ್ತದೆ.

ಬಾಬಾ ರಾಮ್ ದೇವ್ 'ಪತಂಜಲಿ'ಯಲ್ಲಿ ಫ್ರಾನ್ಸ್ ಕಂಪನಿಯಿಂದ ಭಾರೀ ಹೂಡಿಕೆಬಾಬಾ ರಾಮ್ ದೇವ್ 'ಪತಂಜಲಿ'ಯಲ್ಲಿ ಫ್ರಾನ್ಸ್ ಕಂಪನಿಯಿಂದ ಭಾರೀ ಹೂಡಿಕೆ

2013ರಲ್ಲಿ 156 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟಿದ್ದ ಗ್ರಾಹಕ ವಸ್ತುಗಳ ವ್ಯವಹಾರವು 2015ರ ಮಾರ್ಚ್ ಹೊತ್ತಿಗೆ 322 ಮಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆ ಆಗಿದೆ. ಕಳೆದ ಮೇನಲ್ಲಿ ಸ್ವತಃ ಬಾಬಾ ರಾಮ್ ದೇವ್ ಹೇಳಿದಂತೆ, ಅವರ ಕಂಪೆನಿಯ ಆದಾಯ 160 ಕೋಟಿ ಅಮೆರಿಕನ್ ಡಾಲರ್ ಗೆ ಏರಿಕೆ ಆಗಿದೆ.

2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪತಂಜಲಿಯಿಂದ 2 ಸಾವಿರ ಎಕರೆಯಷ್ಟು ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಕಂಪೆನಿಯ ಕಾರ್ಖಾನೆಗಳಿಗೆ ಕಟ್ಟಡ ನಿರ್ಮಾಣಕ್ಕೆ, ಸಂಶೋಧನೆಗೆ, ಆಯುರ್ವೇದಿಕ್ ವನಮೂಲಿಕೆಗಳ ಸರಬರಾಜಿಗೆ ಹೀಗೆ ನಾನಾ ಕಾರಣಗಳಿಗೆ ಭೂ ಸ್ವಾಧೀನ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ಪತಂಜಲಿ ಮಾರಾಟ ಮಾಡಿತ್ತು. ಇನ್ನು ನೂರು ಎಕರೆಗೂ ಹೆಚ್ಚು ಭೂ ಸ್ವಾಧೀನ ಮಾಡಿಕೊಂಡ ನಾಲ್ಕರಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇನ್ನು ವರದಿ ಹೇಳಿರುವಂತೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಭೂಮಿಯ ಮಾರುಕಟ್ಟೆ ಬೆಲೆಗಿಂತ ಶೇ 77ರಷ್ಟು ರಿಯಾಯಿತಿ ಸಿಕ್ಕಿದೆ. ಕಾರ್ಖಾನೆಗಳಲ್ಲಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಭೂಮಿ ಪಡೆಯಲಾಗಿದೆ.

ಕಳೆದ ವರ್ಷ ಮಧ್ಯಪ್ರದೇಶದಲ್ಲಿ ನಲವತ್ತು ಎಕರೆಯಷ್ಟು ಭೂಮಿ ಪಡೆದ ಪತಂಜಲಿಗೆ ಒಂದು ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ರಿಯಾಯಿತಿ ಪಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

English summary
Baba Ramdev's company is alleged to have received more than 46 million dollars in discount for land acquisitions in states controlled by the BJP, a media report stated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X