• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪಾವಳಿ ಒಳಗೆ 25 ಸಾವಿರ ಟನ್ ಈರುಳ್ಳಿ ಆಮದಿಗೆ ಭಾರತ ನಿರ್ಧಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ದೀಪಾವಳಿಗೂ ಮುನ್ನ 25 ಸಾವಿರ ಟನ್ ಈರುಳ್ಳಿ ಆಮದಿಗೆ ಭಾರತ ಮುಂದಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದೆ ಆದರೆ ಈರುಳ್ಳಿ ಕೊರತೆಯೂ ಇದೆ ಹೀಗಾಗಿ ಈಗಾಗಲೇ 7 ಸಾವಿರ ಟನ್‌ ಅಷ್ಟು ಈರುಳ್ಳಿ ಆಮದು ಮಾಡಿಕೊಳ್ಳಲಾಗಿದ್ದು, ಮುಂದಿನ 15 ದಿನಗಳೊಳಗಾಗಿ ಮತ್ತೆ 25 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲಿದೆ.

ಈರುಳ್ಳಿ ಬೀಜಗಳ ರಫ್ತನ್ನು ನಿಷೇಧಿಸಿದ ಕೇಂದ್ರ ಸರ್ಕಾರ ಈರುಳ್ಳಿ ಬೀಜಗಳ ರಫ್ತನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ಈ ನಡುವೆ ಭೂತಾನ್ ನಿಂದ ಆಲೂಗಡ್ಡೆಯನ್ನೂ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ 3 ದಿನಗಳಲ್ಲಿ ಪ್ರತಿ ಕೆ.ಜಿಗೆ 65 ರೂಪಾಯಿಯಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

ಈಗಾಗಲೇ 7,000 ಟನ್ ಗಳಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದ್ದು, ಇನ್ನೂ 25,000 ಟನ್ ಗಳಷ್ಟು ಈರುಳ್ಳಿ ದೀಪಾವಳಿಗೂ ಮುನ್ನ ಆಮದು ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಮಳೆಯಿಂದಾಗಿ ಹೊಲದಲ್ಲಿ ಒಂದು ಚೀಲ ಈರುಳ್ಳಿ ಬರುತ್ತಿಲ್ಲ. ಮಳೆಯಿಂದ ಈರುಳ್ಳಿ ಕೊಳೆತಿದೆ ಎಂದು ಖರೀದಿದಾರರ ಸಬೂಬು ಹೇಳುತ್ತಿದ್ದಾರೆ. ಅಲ್ಲದೇ, ಬೆಳೆ ಕೊಳೆಯುತ್ತಿದೆ ಎಂದು ಹೇಳಿ ಖರೀದಿದಾರರು ಬೆಲೆ ಕಡಿತ ಮಾಡುತ್ತಿದ್ದಾರೆ.

English summary
The central cooperative NAFED will soon begin importing onions in a bid to tame soaring prices, Food and Consumer Affairs Minister Piyush Goyal said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X