ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್‌ಗಡ: 12 ಮಹಿಳೆಯರು ಸೇರಿ 24 ನಕ್ಸಲರು ಪೊಲೀಸರಿಗೆ ಶರಣು

|
Google Oneindia Kannada News

ಛತ್ತೀಸ್‌ಗಡದಲ್ಲಿ 12 ಮಹಿಳೆಯರು ಸೇರಿ 24 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.

ಛತ್ತೀಸಗಢದ ನಕ್ಸಲ್ ಪೀಡಿತ ದಂತೇವಾಡ ಜಿಲ್ಲೆಯಲ್ಲಿ ಘಟನೆ ನಡೆದಿದೆ.ಗಣರಾಜ್ಯೋತ್ಸವದ ಸಂದರ್ಭದಲ್ಲಿ ದಕ್ಷಿಣ ಬಸ್ತಾರ್ ಪ್ರದೇಶದಲ್ಲಿ ಸಕ್ರಿಯರಾಗಿದ್ದ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

ಛತ್ತೀಸಗಡ: ನಕ್ಸಲರಿಂದ ಶರಣಾಗತ ನಕ್ಸಲನ ಹತ್ಯೆಛತ್ತೀಸಗಡ: ನಕ್ಸಲರಿಂದ ಶರಣಾಗತ ನಕ್ಸಲನ ಹತ್ಯೆ

ಜಿಲ್ಲಾ ಪೊಲೀಸರು ಪುನರ್ವಸತಿ ಅಭಿಯಾನದಿಂದ ನಕ್ಸಲರು ಪ್ರಭಾವಿತರಾಗಿ, ಹಿಂಸಾಚಾರವನ್ನು ತೊರೆದು ಶರಣಾಗಿದ್ದಾರೆ ಎಂದು ಅಭಿಷೇಕ್ ತಿಳಿಸಿದ್ದಾರೆ.

24 Naxals, Including 12 Women, Surrender In Chhattisgarh

ಮೂವರು ನಕ್ಸಲರ ತಲೆಗೆ ತಲಾ ಒಂದು ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಮಾವೋವಾದಿ ಸಿದ್ಧಾಂತದ ಬಗ್ಗೆ ನಕ್ಸಲರು ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

ಶರಣಾಗತರಿಗೆ ತಲಾ 10,000 ರೂ.ಗಳ ತಕ್ಷಣದ ನೆರವು ನೀಡಲಾಗಿದ್ದು, ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಪ್ರಕಾರ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಶರಣಾದವರ ಪೈಕಿ ಚಿಕ್ಪಾಲ್-ಜಂಗ್ಲೆಪರಾ ದಂಡಕರಣ್ಯದ ಮುಖ್ಯಸ್ಥ ಆಯಿತು ಮುಚಾಕಿ(31) ಬಕ್ಮನ್ ಡೆಂಗಾ ಸೋಧಿ(40) ಮತ್ತು ಚಿಕ್ಪಾಲ್-ಸ್ಕೂಲ್ಪರಾ ಡಿಎಕೆಎಂಎಸ್(32) ತಲೆಯ ಮೇಲೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

English summary
A total of 24 Naxals, including 12 women, have surrendered in Chhattisgarh's insurgency-hit Dantewada district, police said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X