ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಕ್ಕೆ ಹೋದ 24 ವಿದ್ಯಾರ್ಥಿಗಳು ಪ್ರವಾಹಕ್ಕೆ ಬಲಿ

By Mahesh
|
Google Oneindia Kannada News

ಮನಾಲಿ, ಜೂ.9: ಅತ್ತ ಸೀಮಾಂಧ್ರದಲ್ಲಿ ನೂತನ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸ್ವೀಕರಿಸುವ ಸಂಭ್ರಮ ಮನೆ ಮಾಡಿದ್ದರೆ ಇತ್ತ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ಹೈದರಾಬಾದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವಿನ ಸುದ್ದಿ ಅಪ್ಪಳಿಸಿತ್ತು. ಮನಾಲಿಯ ನದಿ ತೀರವೊಂದರಲ್ಲಿ ಫೋಟೋ ತೆಗೆಯಲು ಹೋಗಿದ್ದ ವಿದ್ಯಾರ್ಥಿಗಳ ಗುಂಪನ್ನು ಅಣೆಕಟ್ಟಿನ ನೀರು ಆಪೋಶನ ತೆಗೆದುಕೊಂಡ ದುರಂತ ಸಂಭವಿಸಿದೆ.

ಮನಾಲಿಯ ಲರ್ಜಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಬಿಟ್ಟಿದ್ದರಿಂದ 24 ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿದೆ. ಇಲ್ಲಿನ ಈ ದುರಂತ ಉಂಟಾಗಿದೆ. ದುರಂತವನ್ನು ಕಣ್ಣಾರೆ ಕಂಡ ಸ್ಥಳೀಯ ಗ್ರಾಮಸ್ಥರು ಜಲವಿದ್ಯುತ್ ಯೋಜನೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಮಾಂಡಿ ಇಂದ 40 ಕಿ.ಮೀ ದೂರದ ಮನಾಲಿ ಕಿರಟ್ ಪುರ್ ಹೆದ್ದಾರಿಯಲ್ಲಿರುವ ಥಾಲೌತ್ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಘಟನೆ ಬಗ್ಗೆ ಗೃಹ ಸಚಿವ ರಾಜನಾಥ್ ನಾಥ್ ಅವರು ದುಃಖ ವ್ಯಕ್ತಪಡಿಸಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಇಬ್ಬರು ವಿದ್ಯಾರ್ಥಿಗಳ ಶವ ಬಿಯಾಸ್ ನದಿಯಲ್ಲಿ ಪತ್ತೆಯಾಗಿದೆ. ಪಂಡೋಹ್ ಅಣೆಕಟ್ಟಿನ ಬಳಿ ಶವಗಳನ್ನು ಗುರುತಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ವೀರಭದ್ರ ಸಿಂಗ್ ಹೇಳಿದ್ದಾರೆ.

ಹೈದರಾಬಾದಿನ ವಿಎನ್ ಆರ್ ವಿಜ್ಞಾನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆಗೆ ಸೇರಿದ 46 ವಿದ್ಯಾರ್ಥಿಗಳು ಮನಾಲಿಗೆ ಪ್ರವಾಸಕ್ಕೆ ಬಂದಿದ್ದರು. ಒಟ್ಟು ಆರು ಜನ ವಿದ್ಯಾರ್ಥಿನಿಯರು ಸೇರಿದಂತೆ 24 ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿರುವುದು ಪತ್ತೆಯಾಗಿದೆ.

ಮುನ್ನೆಚ್ಚರಿಕೆ ನೀಡದೆ ನೀರು ಬಿಟ್ಟರು

ಮುನ್ನೆಚ್ಚರಿಕೆ ನೀಡದೆ ನೀರು ಬಿಟ್ಟರು

ಲರ್ಜಿ ಜಲ ವಿದ್ಯುತ್ ಯೋಜನಾ ಕೇಂದ್ರ(126 ಮೆ.ವ್ಯಾ ಸಾಮರ್ಥ್ಯ)ದಿಂದ ಸುಮಾರು 2 ಕಿ.ಮೀ ದೂರದಲ್ಲಿ ನದಿ ತೀರದ ಬಳಿ ಅನೇಕ ವಿದ್ಯಾರ್ಥಿಗಳು ಫೋಟೋ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ನೀಡದೆ ಅಧಿಕಾರಿಗಳು ರಭಸವಾಗಿ ನೀರನ್ನು ಹರಿಯ ಬಿಟ್ಟಿದ್ದಾರೆ. ಅಣೆಕಟ್ಟಿನಿಂದ 2 ಕಿ.ಮೀ ದೂರದಲ್ಲಿದ್ದ ವಿದ್ಯಾರ್ಥಿಗಳು ಯಮರೂಪಿಯಾಗಿ ಬಂದ ನೀರು ಕಂಡು ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲೇ ಕೊಚ್ಚಿ ಹೋಗಿದ್ದಾರೆ.

ಶವಕ್ಕಾಗಿ ಶಿಮ್ಲಾದಲ್ಲೂ ಹುಡುಕಾಟ

ಶವಕ್ಕಾಗಿ ಶಿಮ್ಲಾದಲ್ಲೂ ಹುಡುಕಾಟ

ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಈವರೆಗೂ ಇಬ್ಬರ ಶವಗಳು ಮಾತ್ರ ಪತ್ತೆಯಾಗಿದ್ದು, ಘಟನಾ ಸ್ಥಳದಿಂದ ಸುಮಾರು 200ಕಿ.ಮೀ ದೂರವಿರುವ ರಾಜಧಾನಿ ಶಿಮ್ಲಾದ ಕುಲು ಕಣಿವೆಯಲ್ಲೂ ಶವಕ್ಕಾಗಿ ಹುಡುಕಾಟ ನಡೆದಿದೆ.

ಘಟನೆ ಬಗ್ಗೆ ರಾಜನಾಥ್ ಸಿಂಗ್ ಟ್ವೀಟ್

ಘಟನೆ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಟ್ವೀಟ್

ಗ್ರಾಮಸ್ಥರಿಂದಜಲವಿದ್ಯುತ್ ಯೋಜನೆಗೆ ವಿರೋಧ

ಗ್ರಾಮಸ್ಥರಿಂದಜಲವಿದ್ಯುತ್ ಯೋಜನೆಗೆ ವಿರೋಧ

ದುರಂತವನ್ನು ಕಣ್ಣಾರೆ ಕಂಡ ಸ್ಥಳೀಯ ಗ್ರಾಮಸ್ಥರು ಜಲವಿದ್ಯುತ್ ಯೋಜನೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಮಾಂಡಿ ಇಂದ 40 ಕಿ.ಮೀ ದೂರದ ಮನಾಲಿ ಕಿರಟ್ ಪುರ್ ಹೆದ್ದಾರಿಯಲ್ಲಿರುವ ಥಾಲೌತ್ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ರಕ್ಷಣಾ ಕಾರ್ಯ ಕೈಗೊಳ್ಳಲು ಸೂಚನೆ

ರಕ್ಷಣಾ ಕಾರ್ಯ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರುವೆ ಎಂದ ರಾಜನಾಥ್ ಸಿಂಗ್ ಟ್ವೀಟ್

ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ

ಹಿಮಾಚಲ ಪ್ರದೇಶದ ಶಿಕ್ಷಣ ಸಚಿವರಿಂದ ಮಾಹಿತಿ ಕೇಳಿದ್ದೇನೆ. ಇದೊಂದು ದುರಂತ ಘಟನೆ ನನ್ನ ಮನ ಕಲುಕಿದೆ

ಸ್ಮೃತಿ ಇರಾನಿ ನೆರವಿನ ಹಸ್ತ

ವೈದ್ಯಕೀಯ ನೆರವು ನೀಡುವಂತೆ ಸದಾರ್ ಮಂಡಿ ತಹಸೀಲ್ದಾರ್ ಗೆ ಸೂಚಿಸಿದ್ದೇನೆ. ವಿದ್ಯಾರ್ಥಿಗಳ ಕಾಲೇಜಿನ ಸಿಬ್ಬಂದಿ ಜತೆ ಮಾತುಕತೆ ನಡೆಸಿದೆ ಎಂದು ಟ್ವೀಟ್

English summary
On an excursion trip to Himachal Pradesh, 24 students from Hyderabad are feared to have been washed away by the Beas on Sunday after a hydropower plant allegedly discharged water into the river without any warning, triggering protests by local residents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X