• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಲ್ಯಾಕ್ ಫಂಗಸ್; ರೋಗಿಗಳ ಸಂಖ್ಯೆ ಆಧಾರದಲ್ಲಿ ರಾಜ್ಯಗಳಿಗೆ ಔಷಧ ಹಂಚಿಕೆ

|
Google Oneindia Kannada News

ನವದೆಹಲಿ, ಮೇ 22: ಹಲವು ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ (ಮ್ಯೂಕರ್ ಮೈಕೋಸಿಸ್) ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಒಟ್ಟು 23,680 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಶನಿವಾರ ದೇಶದಲ್ಲಿ ಆಂಫೊಟೆರಿಸಿನ್-ಬಿ ಔಷಧ ಲಭ್ಯತೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ ಅವರು, ದೇಶಾದ್ಯಂತ ಒಟ್ಟು 8848 ಬ್ಲ್ಯಾಕ್ ಫಂಗಸ್ ರೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ರೋಗಿಗಳ ಸಂಖ್ಯೆ ಆಧಾರದಲ್ಲಿ ರಾಜ್ಯಗಳಿಗೆ ಔಷಧ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಹಾರಾಷ್ಟ್ರದಲ್ಲಿ 2000, ಗುಜರಾತ್ 2281, ಆಂಧ್ರ ಪ್ರದೇಶ 910, ಹರಿಯಾಣ 250, ಕರ್ನಾಟಕ 500, ಮಧ್ಯಪ್ರದೇಶ 720, ರಾಜಸ್ಥಾನ 700, ತೆಲಂಗಾಣದಲ್ಲಿ 350 ಪ್ರಕರಣಗಳು ದಾಖಲಾಗಿವೆ ಎಂದು ವಿವರ ಹಂಚಿಕೊಂಡಿದ್ದಾರೆ.

ಭಾರೀ ಚರ್ಚೆಗೆ ಕಾರಣವಾದ ಸದಾನಂದ ಗೌಡರ ಲಸಿಕೆ ಹೇಳಿಕೆಭಾರೀ ಚರ್ಚೆಗೆ ಕಾರಣವಾದ ಸದಾನಂದ ಗೌಡರ ಲಸಿಕೆ ಹೇಳಿಕೆ

ಕರ್ನಾಟಕಕ್ಕೆ ಎಷ್ಟು ಹಂಚಿಕೆ?: ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಹಿನ್ನೆಲೆಯಲ್ಲಿ 1270 ಹೆಚ್ಚುವರಿ ವಯಲ್‌ ಔಷಧವನ್ನು ಹಂಚಿಕೆ ಮಾಡಲಾಗಿದೆ. ಎರಡು ವಾರಗಳ ಹಿಂದೆ 1660 ವಯಲ್‌ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿತ್ತು. ಇದೀಗ ಹೆಚ್ಚುವರಿ ಔಷಧಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

English summary
Union Minister for Chemicals and Fertilizers D.V Sadananda Gowda announced that after a detailed review of rising number of cases of Mucormycosis in various states, a total of 23680 additional vials of Amphotericin- B have been allocated to all States/UTs today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X