ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ರಾಜ್ಯಗಳಿಗೆ ಪ್ರಾಣವಾಯು ಒದಗಿಸಿದ 234 ಆಮ್ಲಜನಕ ಎಕ್ಸ್‌ಪ್ರೆಸ್

|
Google Oneindia Kannada News

ನವದೆಹಲಿ, ಮೇ 24: ಭಾರತೀಯ ರೈಲ್ವೇಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್.ಎಂ.ಒ.) ಪೂರೈಕೆ ಮಾಡಿ ತನ್ನ ಪರಿಹಾರ ತರುವ ಯಾನವನ್ನು ಮುಂದುವರೆಸಿದೆ. ಇದುವರೆಗೆ ಭಾರತೀಯ ರೈಲ್ವೇಯು 936ಕ್ಕೂ ಅಧಿಕ ಟ್ಯಾಂಕರ್ ಗಳಲ್ಲಿ 15284 ಎಂ.ಟಿ.ಗೂ ಅಧಿಕ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡಿದೆ. ಇದುವರೆಗೆ 234 ಆಮ್ಲಜನಕ ಎಕ್ಸ್ ಪ್ರೆಸ್ ಗಳು ತಮ್ಮ ಪ್ರಯಾಣ ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರ ತಂದಿವೆ.

ಈ ಹೇಳಿಕೆ ಬಿಡುಗಡೆಯಾಗುವವರೆಗೆ 9 ಆಮ್ಲಜನಕ ಎಕ್ಸ್ ಪ್ರೆಸ್ ಗಳು 569 ಎಂ.ಟಿ.ಗೂ ಅಧಿಕ ಪ್ರಮಾಣದ ದ್ರವೀಕೃತ ಆಮ್ಲಜನಕವನ್ನು 31 ಟ್ಯಾಂಕರುಗಳಲ್ಲಿ ತುಂಬಿಕೊಂಡು ಪ್ರಯಾಣದಲ್ಲಿವೆ.

ಅಸ್ಸಾಂಗೆ ಮೊದಲ ಆಮ್ಲಜನಕ ಎಕ್ಸ್ ಪ್ರೆಸ್ 4 ಟ್ಯಾಂಕರುಗಳಲ್ಲಿ 80 ಎಂ.ಟಿ.ಯಷ್ಟು ಎಲ್.ಎಂ.ಒ. ತುಂಬಿಕೊಂಡು ಇಂದು ಬೆಳಿಗ್ಗೆ 11.30 ಗಂಟೆ ಹೊತ್ತಿಗೆ ಅಸ್ಸಾಂ ತಲುಪಿದೆ.

234 Oxygen Expresses with 936 tankers brought relief to 14 States

ಕರ್ನಾಟಕಕ್ಕೆ ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ 1000 ಎಂ.ಟಿಗೂ ಅಧಿಕ ಪ್ರಮಾಣದ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು (ಎಲ್.ಎಂ.ಒ.) ಪೂರೈಸಲಾಗಿದೆ. ಈಗ ಪ್ರತಿದಿನ ಆಮ್ಲಜನಕ ಎಕ್ಸ್ ಪ್ರೆಸ್ 800 ಎಂ.ಟಿ.ಗೂ ಅಧಿಕ ಎಲ್.ಎಂ.ಒ. ವನ್ನು ರಾಷ್ಟ್ರಕ್ಕೆ ಪೂರೈಕೆ ಮಾಡುತ್ತಿದೆ.

ಕೋರಿಕೆ ಸಲ್ಲಿಸಿದ ರಾಜ್ಯಗಳಿಗೆ ಸಾದ್ಯ ಇರುವಷ್ಟು ಕಡಿಮೆ ಅವಧಿಯಲ್ಲಿ ಮತ್ತು ಸಾಧ್ಯ ಇರುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಎಲ್.ಎಂ.ಒ.ವನ್ನು ಪೂರೈಕೆ ಮಾಡುವುದು ಭಾರತೀಯ ರೈಲ್ವೇಯ ಇರಾದೆಯಾಗಿದೆ.

ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣಾ, ತೆಲಂಗಾಣ, ಪಂಜಾಬ್, ಕೇರಳ, ದಿಲ್ಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ಸಹಿತ 14 ರಾಜ್ಯಗಳಿಗೆ ಆಮ್ಲಜನಕ ಪರಿಹಾರ ತಲುಪಿದೆ.

ಈ ಪ್ರಕಟಣೆ ಹೊರಡಿಸುವವರೆಗೆ ಮಹಾರಾಷ್ಟ್ರದಲ್ಲಿ 614 ಎಂ.ಟಿ. ಆಮ್ಲಜನಕವನ್ನು ಇಳಿಸಲಾಗಿದ್ದರೆ, ಸುಮಾರು 3609 ಎಂ.ಟಿ.ಯನ್ನು ಉತ್ತರ ಪ್ರದೇಶದಲ್ಲಿ, 566 ಎಂ.ಟಿ.ಯನ್ನು ಮಧ್ಯ ಪ್ರದೇಶದಲ್ಲಿ, 4300 ಎಂ.ಟಿ. ಯನ್ನು ದಿಲ್ಲಿಯಲ್ಲಿ , 1759 ಎಂ.ಟಿ.ಯನ್ನು ಹರ್ಯಾಣಾದಲ್ಲಿ, 98 ಎಂ.ಟಿ.ಯಷ್ಟನ್ನು ರಾಜಸ್ಥಾನದಲ್ಲಿ, 1063 ಎಂ.ಟಿ.ಯನ್ನು ಕರ್ನಾಟಕದಲ್ಲಿ, 320 ಎಂ.ಟಿ.ಯನ್ನು ಉತ್ತರಾಖಂಡದಲ್ಲಿ, 857 ಎಂ.ಟಿ.ಯನ್ನು ತಮಿಳುನಾಡಿನಲ್ಲಿ, 642 ಎಂ.ಟಿ.ಯನ್ನು ಆಂಧ್ರ ಪ್ರದೇಶದಲ್ಲಿ, 153 ಎಂ.ಟಿ.ಯನ್ನು ಪಂಜಾಬಿನಲ್ಲಿ, 246 ಎಂ.ಟಿ.ಯನ್ನು ಕೇರಳದಲ್ಲಿ, 976 ಎಂ.ಟಿ.ಯನ್ನು ತೆಲಂಗಾಣದಲ್ಲಿ, ಮತ್ತು 80 ಎಂ.ಟಿ.ಯನ್ನು ಅಸ್ಸಾಂನಲ್ಲಿ ಇಳಿಕೆ ಮಾಡಲಾಗಿದೆ.

ರೈಲ್ವೇಯು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ವಿವಿಧ ಮಾರ್ಗಗಳ ನಕ್ಷೆಯನ್ನು ಸಿದ್ಧ ಮಾಡಿಟ್ಟುಕೊಂಡಿದೆ. ಮತ್ತು ಯಾವುದೇ ಸಂಭಾವ್ಯ ಸ್ಥಿತಿಯಲ್ಲಿ ರಾಜ್ಯಗಳ ಬೇಡಿಕೆಯನ್ನು ಈಡೇರಿಸಲು ತಯಾರಾಗಿದೆ. ರಾಜ್ಯಗಳು ಎಲ್.ಎಂ.ಒ. ತರಲು ಭಾರತೀಯ ರೈಲ್ವೇಗೆ ಟ್ಯಾಂಕರುಗಳನ್ನು ಒದಗಿಸಿಕೊಡುತ್ತವೆ.

ಆಮ್ಲಜನಕ ಎಕ್ಸ್ ಪ್ರೆಸ್ ಗಳು ತಮ್ಮ ಪೂರೈಕೆ/ಸರಬರಾಜನ್ನು 29 ದಿನಗಳ ಹಿಂದೆ ಆರಂಭ ಮಾಡಿದ್ದವು ಎಂಬುದನ್ನಿಲ್ಲಿ ಸ್ಮರಿಸಬಹುದು. ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 126 ಎಂ.ಟಿ. ಯಷ್ಟನ್ನು ಪೂರೈಕೆ ಮಾಡಲಾಗಿತ್ತು.

ದೇಶಾದ್ಯಂತ ಓಡಾಟ ನಡೆಸುವ ಭಾರತೀಯ ರೈಲ್ವೇಯು ಪಶ್ಚಿಮದಲ್ಲಿ ಹಪಾ, ಬರೋಡಾ, ಮುಂದ್ರಾ ಮತ್ತು ಪೂರ್ವದಲ್ಲಿ ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಅಂಗುಲ್ ಗಳಿಂದ ಆಮ್ಲಜನಕ ಪಡೆದುಕೊಂಡು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳು ನಾಡು, ಹರ್ಯಾಣಾ, ತೆಲಂಗಾಣ, ಪಂಜಾಬ್, ಕೇರಳ, ದಿಲ್ಲಿ, ಉತ್ತರ ಪ್ರದೇಶ, ಮತ್ತು ಅಸ್ಸಾಂ ರಾಜ್ಯಗಳಿಗೆ ಅತ್ಯಂತ ಸಂಕೀರ್ಣ ಕಾರ್ಯಾಚರಣಾ ಮಾರ್ಗಗಳನ್ನು ಯೋಜಿಸಿ ಸರಬರಾಜು ಮಾಡುತ್ತದೆ.

English summary
Indian Railways 234 Oxygen Expresses with 936 tankers completed their journey so far and brought relief to 14 States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X