ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್ ವಿರುದ್ಧ ಹೋರಾಡಲು ಮೋದಿ ನೆರವು ಕೇಳಿದ ಇರಾನ್

|
Google Oneindia Kannada News

ನವದೆಹಲಿ, ಮಾರ್ಚ್ 15: ಕೊರೊನಾವೈರಸ್ ಭೀತಿಯಿಂದ ಚೀನಾ ನಂತರ ಇಟಲಿ, ಇರಾನ್ ಹೆಚ್ಚು ತತ್ತರಿಸಿವೆ. ಕೊವಿಡ್19 ವಿರುದ್ಧ ಹೋರಾಡಲು ನೆರವು ನೀಡಬೇಕೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ ಇರಾನ್ನಿನಲ್ಲಿ ಸಿಲುಕಿದ್ದ 234 ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.

ಕೊರೊನಾವೈರಸ್ ಗೆ ಯಾವುದೇ ಗಡಿ, ರಾಜಕೀಯ, ಮತ, ಪಂಥದ ಮಿತಿಯಿಲ್ಲ, ಇದರ ವಿರುದ್ಧ ಹೋರಾಡಲು ಭಾರತದ ನೆರವು ಅತ್ಯಗತ್ಯ ಎಂದು ಹಸನ್ ಹೇಳಿದ್ದಾರೆ. ಈ ನಡುವೆ ಇರಾನ್ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ತೆರವುಗೊಳಿಸಲು ಸೂಚಿಸುವಂತೆ ವಿಶ್ವಸಂಸ್ಥೆಗೆ ಇರಾನ್ ಮನವಿ ಮಾಡಿಕೊಂಡಿದೆ.

234 Indians Stranded In Coronavirus-Hit Iran Arrive In India: S Jaishankar

 ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ

ಕೊರೊನಾ ವೈರಸ್‌ನಿಂದ ಇರಾನ್‌ ತತ್ತರಿಸಿದೆ. ಇರಾನ್ ನಲ್ಲಿದ್ದ 234 ಭಾರತೀಯರು ಭಾನುವಾರ ಸ್ವದೇಶಕ್ಕೆ ಮರಳಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದಾರೆ.

ಮುಂಜಾನೆ ಟ್ವೀಟ್ ಮಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌, 234 ಮಂದಿ ಪೈಕಿ 131 ವಿದ್ಯಾರ್ಥಿಗಳು ಹಾಗೂ 103 ಯಾತ್ರಿಕರು ಇದ್ದಾರೆ. ಎಲ್ಲರನ್ನು ರಾಜಸ್ಥಾನದ ಜೇಸ್ಮಲೇರ್ ನಲ್ಲಿರುವ ಮಿಲಿಟರಿ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಭಾನುವಾರದಂದು ವಿಶೇಷ ವಿಮಾನ ಮೂಲಕ ಇರಾನ್ನಿನಿಂದ ಮೂರನೇ ಹಾಗೂ ಕೊನೆಯ ತಂಡ ಬಂದಿದೆ

ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

ಈ ನಡುವೆ ರಾಯಭಾರಿ ಧಾಮು ಗದ್ದಾಮ್‌ ಹಾಗೂ ಇರಾನ್‌ನ ಅಧಿಕಾರಿಗಳಿಗೆ ಜೈಶಂಕರ್‌ ಧನ್ಯವಾದ ತಿಳಿಸಿದ್ದಾರೆ. ಇದೇ ರೀತಿ ಇಟಲಿಯ ಮಿಲಾನ್‌ನಿಂದ ಹೊರಟಿರುವ ವಿಮಾನದಲ್ಲಿ 211 ಭಾರತೀಯ ವಿದ್ಯಾರ್ಥಿಗಳಿದ್ದು, ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಲಾಗಿದೆ.

English summary
"234 Indians stranded in Iran have arrived in India; including 131 students and 103 pilgrims.Thank you Ambassador Dhamu Gaddam and @India_in_Iran team for your efforts. Thank Iranian authorities," S Jaishankar tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X