• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಕಾಣಿಸಿಕೊಂಡ ಮಾರಕ ಜಿಕಾ ವೈರಸ್: ಜೈಪುರದಲ್ಲಿ 22 ಪ್ರಕರಣ ಪತ್ತೆ

|

ಜೈಪುರ, ಅಕ್ಟೋಬರ್ 9: ಎರಡು ವರ್ಷದ ಹಿಂದೆ ಜಗತ್ತಿನಾದ್ಯಂತ ಭೀತಿ ಮೂಡಿಸಿದ್ದ ಜಿಕಾ ವೈರಸ್, ಈಗ ಮತ್ತೆ ಕಾಣಿಸಿಕೊಂಡಿದೆ. ಅದರಲ್ಲಿಯೂ ಭಾರತದಲ್ಲಿ ಅದರ ಅಸ್ತಿತ್ವ ದೃಢಪಟ್ಟಿದ್ದು, ಆರೋಗ್ಯ ಕ್ಷೇತ್ರದಲ್ಲಿ ಹೊಸ ಸವಾಲು ಎದುರಾಗಿದೆ.

ರಾಜಸ್ಥಾನದ ಜೈಪುರದಲ್ಲಿ 22 ಮಂದಿಯಲ್ಲಿ ಜಿಕಾ ವೈರಾಣು ಪತ್ತೆಯಾಗಿದೆ. ಈ ಸಂಬಂಧ ವಿವರವಾದ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಗೆ ಪ್ರಧಾನಿ ಕಾರ್ಯಾಲಯ ಸೂಚಿಸಿದೆ. ಆರೋಗ್ಯ ಸಚಿವಾಲಯದ ತಂಡವೊಂದು ಜೈಪುರಕ್ಕೆ ಮಂಗಳವಾರ ಭೇಟಿ ನೀಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸಲಿದೆ.

ಸೆ. 24ರಂದು ಮೊದಲ ಬಾರಿಗೆ ಮಹಿಳೆಯೊಬ್ಬರಲ್ಲಿ ಜಿಕಾ ವೈರಸ್ ಪಾಸಿಟಿವ್ ಕಾಣಿಸಿಕೊಂಡ ಬಳಿಕ, ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಹೆಚ್ಚಿನ ಮಾದರಿಗಳನ್ನು ಪರೀಕ್ಷೆಗೆಂದು ರವಾನಿಸಲಾಗಿತ್ತು. ಒಂದೇ ಸ್ಥಳದಲ್ಲಿ ವಾಸಿಸುತ್ತಿದ್ದ ಏಳು ಮಂದಿಯಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ.

ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ

ಜೈಪುರದಲ್ಲಿ ಆತಂಕ ಸೃಷ್ಟಿಸಿರುವ ಜಿಕಾ ವೈರಸ್ ಪತ್ತೆಗೆ ಸಂಬಂಧಿಸಿದಂತೆ ವಿವರವಾದ ವರದಿ ನೀಡುವಂತೆ ಪ್ರಧಾನ ಕಚೇರಿ ಸೂಚಿಸಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಹಾರದಲ್ಲಿ ತೀವ್ರ ನಿಗಾ

ಬಿಹಾರದಲ್ಲಿ ತೀವ್ರ ನಿಗಾ

ಜೈಪುರದಲ್ಲಿ ಜಿಕಾ ವೈರಸ್‌ ಸೋಂಕು ಪಾಸಿಟಿವ್ ಎಂದು ದೃಢಪಟ್ಟಿರುವ ವಿದ್ಯಾರ್ಥಿಯೊಬ್ಬ ಬಿಹಾರದವನಾಗಿದ್ದಾನೆ. ಆತನ ಆಗಸ್ಟ್‌ 28 ತನ್ನ ತವರು ಸಿವಾನ್‌ಗೆ ಭೇಟಿ ನೀಡಿದ್ದು, ಸೆಪ್ಟೆಂಬರ್ 12ರವರೆಗೂ ಅಲ್ಲಿಯೇ ಇದ್ದ. ಹೀಗಾಗಿ ರಾಜ್ಯದ ಎಲ್ಲ 38 ಜಿಲ್ಲೆಗಳಲ್ಲಿಯೂ ಎಚ್ಚರಿಕೆ ವಹಿಸುವಂತೆ ಸೂಚನೆ ಹೊರಡಿಸಲಾಗಿದೆ. ಆ ವಿದ್ಯಾರ್ಥಿಯ ಪೋಷಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಸಚಿತ್ರ ಸುದ್ದಿ: ಆಯುಷ್ಮಾನ್ ಭಾರತ್ ಪ್ರಯೋಜನ ಪಡೆಯುವುದು ಹೇಗೆ?

ರಾಜಸ್ಥಾನದಲ್ಲಿ ತ್ವರಿತ ಕ್ರಮ

ರಾಜಸ್ಥಾನದಲ್ಲಿ ತ್ವರಿತ ಕ್ರಮ

ಸೋಂಕು ಇರುವುದು ದೃಢಪಟ್ಟ ಎಲ್ಲ 22 ಮಂದಿಯನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ತಿಳಿಸಿದೆ.

ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಏಳು ಸದಸ್ಯರ ಉನ್ನತ ಮಟ್ಟದ ಕೇಂದ್ರ ತಂಡ ಈಗಾಗಲೇ ಜೈಪುರಕ್ಕೆ ತೆರಳಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಲು ಮತ್ತು ಅದರ ಮಾಹಿತಿ ಸಂಗ್ರಹಿಸಲು ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರದಲ್ಲಿ ನಿಯಂತ್ರಣ ಕೊಠಡಿಯೊಂದನ್ನು ಸ್ಥಾಪಿಸಲಾಗಿದೆ.

ಆಯುಷ್ಮಾನ್ ಭಾರತ-ಬಡ ರೋಗಿಗಳ ಆಶಾಕಿರಣ: ಉಪಯೋಗಗಳೇನು?

179 ವೈದ್ಯಕೀಯ ತಂಡ

179 ವೈದ್ಯಕೀಯ ತಂಡ

ಜೈಪುರದ ಶಾಸ್ತ್ರಿನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಗರ್ಭಿಣಿಯರಿಗೆ ಈ ವೈರಸ್ ತೀವ್ರ ಅಪಾಯಕಾರಿಯಾಗಿರುವುದರಿಂದ, ಅವರಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆಯೇ ಎಂಬುದನ್ನು ಪರಿಶೀಲನೆ ಮಾಡಲು ಅಲ್ಲಿನ ಆರು ವಾರ್ಡ್‌ಗಳಲ್ಲಿ 179 ವೈದ್ಯಕೀಯ ತಂಡಗಳು ಕೆಲಸ ಮಾಡುತ್ತಿವೆ.

ವೈರಸ್ ಇನ್ನಷ್ಟು ವ್ಯಾಪಿಸದಂತೆ ತಡೆಯಲು ಜೈಪುರದಲ್ಲಿ ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಔಷಧ ಸಿಂಪಡಣೆಯ ಜತೆಗೆ, ಜೈಪುರದ 6 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಸಮೀಕ್ಷೆ ನಡೆಸಿ 2 ಸಾವಿರಕ್ಕೂ ಅಧಿಕ ಟೆಮೆಫೊಸ್ ಎಂಬ ರಾಸಾಯನಿಕ ಕಂಟೈನರ್‌ಗಳನ್ನು ಸಿಂಪಡಿಸಿದೆ.

ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್‌ ಜೊತೆ ವಿಲೀನ

ಲಕ್ಷಣಗಳು

ಲಕ್ಷಣಗಳು

ಜಿಕಾ ವೈರಸ್‌ನಿಂದ ಎದುರಾಗುವ ಆರೋಗ್ಯ ಸಮಸ್ಯೆಗಳು ಡೆಂಗ್ಯುವಿನ ಲಕ್ಷಣಗಳಿಗೆ ಸಾಮ್ಯತೆ ಹೊಂದಿವೆ. ಜ್ವರ, ಚರ್ಮದ ಉರಿ, ಸ್ನಾಯು ಮತ್ತು ಸಂದಿ ನೋವು, ತಲೆನೋವು, ಆಯಾಸ ಮುಂತಾದವು ಇದರ ಲಕ್ಷಣಗಳಾಗಿವೆ.

ಬ್ರೆಜಿಲ್‌ನಲ್ಲಿ ಆತಂಕ ಸೃಷ್ಟಿಸಿತ್ತು

ಬ್ರೆಜಿಲ್‌ನಲ್ಲಿ ಆತಂಕ ಸೃಷ್ಟಿಸಿತ್ತು

ಆಫ್ರಿಕಾದ ದೇಶಗಳಲ್ಲಿ 1947ರಲ್ಲಿ ಸೊಳ್ಳೆ ಮತ್ತು ಮಂಗಗಳಲ್ಲಿ ಕಾಣಿಸಿಕೊಂಡ ಈ ವೈರಸ್, 1952ರಲ್ಲಿ ಉಗಾಂಡದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಪತ್ತೆಯಾಗಿತ್ತು. ಬಳಿಕ ಏಷ್ಯಾ, ಅಮೆರಿಕಗಳಿಗೂ ಪಸರಿಸಿತ್ತು. 2015ರಲ್ಲಿ ಬ್ರೆಜಿಲ್‌ನಲ್ಲಿ ಜಿಕಾ ವೈರಸ್ ಸಮಸ್ಯೆ ತೀವ್ರ ಸ್ವರೂಪದಲ್ಲಿ ತಲೆದೋರಿತ್ತು. ಲಕ್ಷಾಂತರ ಮಂದಿ ಇದರ ಸೋಂಕಿಗೆ ಒಳಗಾಗಿದ್ದರು. ಅದರ ಆತಂಕದ ನಡುವೆಯೇ 2016ರಲ್ಲಿ ರಿಯೊ ಡಿ ಜನೈರೊದಲ್ಲಿ ಒಲಿಂಪಿಕ್ಸ್ ನಡೆದಿತ್ತು.

ಭಾರತದಲ್ಲಿ ಎರಡು ಪ್ರಕರಣ

ಭಾರತದ ಅಹ್ಮದಾಬಾದ್‌ನಲ್ಲಿ 2017ರ ಜನವರಿ ಮತ್ತು ಫೆಬ್ರುವರಿ ತಿಂಗಳಿನಲ್ಲಿ ಜಿಕಾ ಪ್ರಕರಣ ದಾಖಲಾಗಿತ್ತು. ಅದೇ ವರ್ಷದ ಜುಲೈ ತಿಂಗಳಿನಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಎರಡನೆಯ ಪ್ರಕರಣ ಪತ್ತೆಯಾಗಿತ್ತು. ಈ ಎರಡೂ ಪ್ರಕರಣಗಳನ್ನು ತ್ವರಿತ ಆರೋಗ್ಯ ಕ್ರಮಗಳ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಿ ನಿಯಂತ್ರಿಸಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
22 people were tested positive for Zika Virus in Rajasthan's Jaipur. Bihar issued alert in all the 38 districts of the state as one of them is from Bihar. PMO seeks a report from Health Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more