• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ 21ನೇ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಸಂಭ್ರಮ

|

ನವದೆಹಲಿ, ಜುಲೈ.26: ಕಾರ್ಗಿಲ್ ವಿಜಯ ದಿವಸದ 21ನೇ ವರ್ಷಾಚರಣೆ ಹಿನ್ನೆಲೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ಗೌರವ ಸಲ್ಲಿಸಿದರು.

ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಸಾಧಿಸಿದ ದಿಗ್ವಿಜಯದ ಪ್ರತೀಕವಾಗಿ ಜುಲೈ.26ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಕಳೆದ 1999ರ ಜುಲೈ.26ರಂದು ಮೂರು ತಿಂಗಳಿನಿಂದ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿರುವ ಅಧಿಕೃತವಾಗಿ ಘೋಷಿಸಲಾಯಿತು.

ಕಾರ್ಗಿ‌ಲ್‌ ವಿಶೇಷ: 'ಯುದ್ಧ ಮ್ಯೂಸಿಯಂ' ಚಿತ್ರಗಳಲ್ಲಿ

ಪಾಕಿಸ್ತಾನದ ವಿರುದ್ಧ ನಿರಂತರ ಮೂರು ತಿಂಗಳವರೆಗೂ ನಡೆದ ಸಂಘರ್ಷದಲ್ಲಿ ಭಾರತದ 500ಕ್ಕೂ ಹೆಚ್ಚು ಯೋಧರು ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಹಿನ್ನೆಲೆ ಈ ಕಾರ್ಗಿಲ್ ವಿಜಯ್ ದಿವಸ್ ನ್ನು ಆಚರಿಸಲಾಗುತ್ತದೆ.

ಹುತಾತ್ಮ ಯೋಧರನ್ನು ಸ್ಮರಿಸಿದ ರಾಜನಾಥ್ ಸಿಂಗ್

ಭಾರತಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ಭಾರತೀಯ ಯೋಧರನ್ನು ನಾವು ಸ್ಮರಿಸಿಕೊಳ್ಳಬೇಕಿದೆ. ಹುತಾತ್ಮ ಯೋಧರ ಸಾಧನೆಯೇ ನಮಗೆ ಸ್ಪೂರ್ತಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಕೇಂದ್ರ ರಕ್ಷಣಾ ರಾಜ್ಯ ಸಚಿವ ಶ್ರೀಪಾದ್ ನಾಯಕ್, ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಭೂಸೇನಾ ಮುಖ್ಯಸ್ಥ ಎಂ.ಎಂ. ನರವಾನೆ, ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್. ಬದೌರಿಯಾ, ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಕೂಡಾ ಯುದ್ಧ ಸ್ಮಾರಕ ಹಾಗೂ ಅಮರ್ ಜ್ಯೋತಿಗೆ ಗೌರವ ಸಲ್ಲಿಸಿದರು.

ಹುತಾತ್ಮ ಯೋಧರಿಗೆ ಸಿಎಂ ಯಡಿಯೂರಪ್ಪ ಗೌರವ

ಹುತಾತ್ಮ ಯೋಧರಿಗೆ ಸಿಎಂ ಯಡಿಯೂರಪ್ಪ ಗೌರವ

ಕರ್ನಾಟಕದಲ್ಲೂ ಕಾರ್ಗಿಲ್ ವಿಜಯ್ ದಿವಸ್ ದಿಚಾರಣೆಯನ್ನು ಆಚರಿಸಲಾಯಿತು. ಬೆಂಗಳೂರಿನ ರಾಷ್ಟ್ರೀಯ ಸೇನಾ ಸ್ಮಾರಕ ಉದ್ಯಾನವನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದು, ಹುತಾತ್ಮ ಯೋಧರಿಗೆ ಸೆಲ್ಯೂಟ್ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಫಾರ್ವರ್ಡ್ ಪೋಸ್ಟ್ ಬಗ್ಗೆ ತಿಳಿಯಲೇಬೇಕಾದ ಸಂಗತಿ

ಆಂಧ್ರ ಪ್ರದೇಶದಲ್ಲಿ ಹುತಾತ್ಮ ಯೋಧರಿಗೆ ಗೌರವ

ಆಂಧ್ರ ಪ್ರದೇಶದಲ್ಲಿ ಹುತಾತ್ಮ ಯೋಧರಿಗೆ ಗೌರವ

ಆಂಧ್ರ ಪ್ರದೇಶದಲ್ಲಿಯೂ 21ನೇ ಕಾರ್ಗಿಲ್ ವಿಜಯ್ ದಿವಸ್ ನ್ನು ಸಂಭ್ರಮದಿಂದ ಆಚರಿಸಲಾಯಿತು. ಈಸ್ಟನ್ ನಾವೆಲ್ ಕಮಾಂಡ್ ವೈಸ್ ಅಡ್ಮಿರಲ್ ಅಥುಲ್ ಕುಮಾರ್ ಜೈನ್ ಅವರು ವಿಶಾಖಪಟ್ಟಣಂನಲ್ಲಿ ಇರುವ ನೌಕಾ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿದರು. ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ಬಿಟ್ಟ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದರು.

ದ್ರಾಸ್ ನಲ್ಲಿ 21ನೇ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ದ್ರಾಸ್ ನಲ್ಲಿ 21ನೇ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯ ಸಾಧಿಸಿದ ಸ್ಮರಣಾರ್ಥ 21ನೇ ವರ್ಷಾಚರಣೆ ಹಿನ್ನೆಲೆ ದ್ರಾಸ್ ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಾರ್ಪ್ ಕಮಾಂಡಿಂಗ್ ಜನರಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಉತ್ತರಾಖಂಡ್ ನಲ್ಲಿ ಕಾರ್ಗಿಲ್ ದಿವಸ್ ಆಚರಣೆ

ಉತ್ತರಾಖಂಡ್ ನಲ್ಲಿ ಕಾರ್ಗಿಲ್ ದಿವಸ್ ಆಚರಣೆ

ಉತ್ತರಾಖಂಡ್ ನಲ್ಲಿ 21ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ನ್ನು ಆಚರಿಸಲಾಯಿತು. ಡೆಹ್ರಾಡೂನ್ ನಲ್ಲಿ ಇರುವ ಗಾಂಧಿ ಪಾರ್ಕ್ ಗೆ ತೆರಳಿದ ಮುಖ್ಯಮಂತ್ರಿ ತ್ರಿವೆಂದರ್ ಸಿಂಗ್ ರಾವತ್ ಅವರು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದರು.

English summary
21st Kargil Vijay Diwas: Tribute To Martyrdom Warriors From Defence Minister And Many Leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X