ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಡಿಸೆಂಬರ್ ವೇಳೆಗೆ 216 ಕೋಟಿ ಕೊರೊನಾ ಲಸಿಕೆ ಲಭ್ಯ

|
Google Oneindia Kannada News

ನವದೆಹಲಿ, ಮೇ 14: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆ ನಡುವೆ ಕೇಂದ್ರ ಸರ್ಕಾರ ಖುಷಿಯ ಸುದ್ದಿ ನೀಡಿದೆ. ಆಗಸ್ಟ್ ನಿಂದ ಡಿಸೆಂಬರ್ ನಡುವಿನ ಐದು ತಿಂಗಳಿನಲ್ಲಿ 200 ಕೋಟಿ ಡೋಸ್ ಕೊವಿಡ್-19 ಲಸಿಕೆ ಲಭ್ಯವಾಗಲಿದೆ. ದೇಶದ ಜನಸಂಖ್ಯೆಗೆ ಇಷ್ಟು ಪ್ರಮಾಣದ ಲಸಿಕೆ ಸಾಕಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯದ ಹಾಗೂ ನೀತಿ ಆಯೋಗದ ಸದಸ್ಯ ವಿ ಕೆ ಪೌಲ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಭಾರತದಲ್ಲಿ ಮುಂದಿನ ವಾರದ ವೇಳೆಗೆ ರಷ್ಯಾದ ಕೊವಿಡ್-19 ಲಸಿಕೆಯು ಲಭ್ಯವಾಗಲಿದೆ ಎಂದರು.

ಮುಂದಿನ ವಾರದಿಂದ ಸ್ಪುಟ್ನಿಕ್ ವಿ ಮಾರುಕಟ್ಟೆಯಲ್ಲಿ ಲಭ್ಯ
ಕೊರೊನಾವೈರಸ್ ಲಸಿಕೆಗೆ ಸೃಷ್ಟಿಯಾಗಿರುವ ಬೇಡಿಕೆಯನ್ನು ನೀಗಿಸಲು ಸಾಧ್ಯವಾಗದ ಹಿನ್ನೆಲೆ ಲಸಿಕೆಗಾಗಿ ಜಾಗತಿಕ ಟೆಂಡರ್ ಕರೆಯಲು ಹಲವು ರಾಜ್ಯಗಳು ಮುಂದಾಗಿವೆ. ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ಸರ್ಕಾರಗಳು ಕ್ರಮ ತೆಗೆದುಕೊಂಡಿವೆ. ಲಸಿಕೆಗಳು ಮುಖ್ಯ ಕೊರೊನಾವೈರಸ್ ಲಸಿಕೆ ಮುಖ್ಯವೇ ಆಗಿದ್ದರೂ ಅವುಗಳನ್ನು ಉತ್ಪಾದಿಸಲು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ನಾವು ಅರಿತುಕೊಳ್ಳಬೇಕಿದೆ ಎಂದು ವಿ ಕೆ ಪೌಲ್ ಹೇಳಿದ್ದಾರೆ.

216 cr Dose Of Vaccine To Be Available In 5 Months Between August-December In India

Recommended Video

ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

ಇಡೀ ದೇಶಕ್ಕೆ ಅಗತ್ಯವಾದ ಲಸಿಕೆ ಪೂರೈಕೆ:
ಭಾರತದಲ್ಲಿ 2021ರ ಡಿಸೆಂಬರ್ ವೇಳೆಗೆ ಇಡೀ ದೇಶದ ಜನಸಂಖ್ಯೆಗೆ ಸಾಕಾಗುವಷ್ಟು ಕೊರೊನಾವೈರಸ್ ಲಸಿಕೆಯನ್ನು ಪೂರೈಕೆ ಮಾಡಲಾಗುವುದು. ಆಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ 200 ಕೋಟಿ ಡೋಸ್ ಲಸಿಕೆ ಉತ್ಪಾದಿಸಲಾಗುವುದು. 2022ರ ಮೊದಲ ತ್ರೈಮಾಸಿಕದಲ್ಲಿ 3 ಕೋಟಿ ಡೋಸ್ ಕೊವಿಡ್-19 ಲಸಿಕೆ ಉತ್ಪಾದಿಸಲಾಗುವುದು. ಐದು ತಿಂಗಳಿನಲ್ಲಿ 216 ಕೋಟಿ ಲಸಿಕೆ ಉತ್ಪಾದಿಸಲಾಗುವುದು ಎಂದು ವಿ ಕೆ ಪೌಲ್ ಹೇಳಿದ್ದಾರೆ.
75 ಕೋಟಿ ಕೊವಿಶೀಲ್ಡ್ ಲಸಿಕೆ ಹಾಗೂ 55 ಕೋಟಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಆಗಲಿದೆ. ಇದರ ಜೊತೆಗೆ ಬಯೋಲಾಜಿಕಲ್ ಇ 30 ಕೋಟಿ ಡೋಸ್, ಜೈಡಸ್ ಕ್ಯಾಡಿಲಾ 5 ಕೋಟಿ ಡೋಸ್, ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ 20 ಕೋಟಿ ನೊವಾವ್ಯಾಕ್ಸ್ ಲಸಿಕೆ, ಭಾರತ್ ಬಯೋಟೆಕ್ ಸಂಸ್ಥೆಯ 10 ಕೋಟಿ ಡೋಸ್ ನಸಲ್ ಲಸಿಕೆ ಹಾಗೂ 15.6 ಕೋಟಿ ಡೋಸ್ ಸ್ಪುಟ್ನಿಕ್-ವಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

English summary
216 cr Dose Of Vaccine To Be Available In 5 Months Between August-December In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X