ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಿಂದ ಬಂದ 21 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ಪಂಚಕುಲ, ಮೇ 24 : ಹರ್ಯಾಣದ ಪಂಚಕುಲಕ್ಕೆ ಮೇ 19ರಂದು ಅಮೆರಿಕದಿಂದ 73 ಪ್ರಯಾಣಿಕರು ಆಗಮಿಸಿದ್ದರು. ಇವರಲ್ಲಿ 21 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಪಂಚಕುಲದ ಮುಖ್ಯ ಆರೋಗ್ಯಾಧಿಕಾರಿ ಡಾ. ಜಸ್‌ಜಿತ್ ಕೌರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಅಮೆರಿಕದಿಂದ ಆಗಮಿಸಿದ ವಿಮಾನದಲ್ಲಿ 73 ಪ್ರಯಾಣಿಕರು ಇದ್ದರು. ಎಲ್ಲರನ್ನೂ ಪರೀಕ್ಷಿಸಲಾಗಿದ್ದು, 21 ಮಂದಿಗೆ ಕೊರೊನಾ ಇರುವುದು ಖಚಿತವಾಗಿದೆ" ಎಂದು ಹೇಳಿದ್ದಾರೆ.

ಅಕ್ರಮ ಪ್ರವೇಶ: 161 ಭಾರತೀಯರ ಗಡಿಪಾರು ಮಾಡಲಿರುವ ಅಮೆರಿಕ ಅಕ್ರಮ ಪ್ರವೇಶ: 161 ಭಾರತೀಯರ ಗಡಿಪಾರು ಮಾಡಲಿರುವ ಅಮೆರಿಕ

21 ಜನರು ಪಂಚಕುಲಕ್ಕೆ ಸೇರಿದವರಲ್ಲಿ ಹರ್ಯಾಣ ರಾಜ್ಯದ ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿದವರು. ಇನ್ನೂ ಇಬ್ಬರು ಪ್ರಯಾಣಿಕರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಂದೇ ಭಾರತ್ ಮಿಷನ್ ಅಡಿ ವಿಮಾನ ಪಂಚಕುಲಕ್ಕೆ ಬಂದಿಳಿದಿತ್ತು.

WHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕ WHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕ

airindia

ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವ ದೇಶ ಅಮೆರಿಕ. ಒಂದೇ ಭಾರತ್ ಮಿಷನ್ ಅಡಿ ಅಮೆರಿಕದಲ್ಲಿ ಸಿಲುಕಿದ್ದ ಭಾರತೀಯರನ್ನು ವಿವಿಧ ರಾಜ್ಯಗಳಿಗೆ ಕರೆ ತರಲಾಗುತ್ತಿದೆ. ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ಭಟ್ಕಳದ 20 ಮಂದಿ ಕೊರೊನಾ ಗುಣಮುಖರಿಗೆ ಆಸ್ಪತ್ರೆಯಿಂದ ಬಿಡುಗಡೆಭಟ್ಕಳದ 20 ಮಂದಿ ಕೊರೊನಾ ಗುಣಮುಖರಿಗೆ ಆಸ್ಪತ್ರೆಯಿಂದ ಬಿಡುಗಡೆ

ಒಂದು ವೇಳೆ ಕೊರೊನಾದ ಯಾವುದೇ ಲಕ್ಷಣ ಇಲ್ಲದಿದ್ದರೆ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್‌ಗೆ ಹಾಕಲಾಗುತ್ತದೆ. ಲಕ್ಷಣಗಳು ಇದ್ದರೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ.

ಹರ್ಯಾಣದಲ್ಲಿ ಇದುವರೆಗೂ 1331 ಕೊರೊನಾ ಪ್ರಕರಣಗಳು ದಾಖಲಾಗಿವೆ. 16 ಜನರು ಮೃತಪಟ್ಟಿದ್ದಾರೆ. ಪಂಚಕುಲದಲ್ಲಿ 25 ಪ್ರಕರಣಳಿವೆ.

English summary
Out of 73 passengers 21 tested positive for COVID - 19 in Haryana who come to Panchkula on May 19 from America. All of them are not residents of Panchkula but belong to various districts of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X