ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ; ಬೂತ್‌ಗಳ ಸಂಘಟನೆಗೆ ಬಿಜೆಪಿ ತಯಾರಿ

|
Google Oneindia Kannada News

ನವದೆಹಲಿ ಮೇ 26: 2024ರ ಲೋಕಸಭೆ ಚುನಾವಣೆಗೆ ಪೂರ್ವ ತಯಾರಿಯಾಗಿ ತಮ್ಮ ಕ್ಷೇತ್ರಗಳಲ್ಲಿ ದುರ್ಬಲವಾಗಿರುವ ಬೂತ್‌ಗಳನ್ನು ತಳಮಟ್ಟದಿಂದ ಬಲಪಡಿಸುವಂತೆ ಸಂಸದರು ಮತ್ತು ಶಾಸಕರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೂಚಿಸಿದೆ.

ಪಕ್ಷ ದುರ್ಬಲವಾಗಿರುವ ದೇಶದ ಸುಮಾರು 74,000 ಚುನಾವಣಾ ಬೂತ್‌ಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಚುಟುವಟಿಕೆಗಳನ್ನು ಹೆಚ್ಚಿಸಲು ಬಿಜೆಪಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ.

'ಪ್ರಸಾದ' ಹೆಂಗಿತ್ತು?- ಕಪಿಲ್ ಸಿಬಲ್‌ಗೆ ಬಿಜೆಪಿ ಮುಖಂಡ ಕುಟುಕಿದ್ದು ಯಾಕೆ? 'ಪ್ರಸಾದ' ಹೆಂಗಿತ್ತು?- ಕಪಿಲ್ ಸಿಬಲ್‌ಗೆ ಬಿಜೆಪಿ ಮುಖಂಡ ಕುಟುಕಿದ್ದು ಯಾಕೆ?

2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೇತೃತ್ವದಲ್ಲಿ ಪಕ್ಷದ ಉನ್ನತ ಮಟ್ಟದ ನಾಯಕರು, ಕೆಲವು ಹಿರಿಯ ಸಚಿವರು ಹಾಗೂ ಬೂತ್‌ ಉಸ್ತುವಾರಿಗಳ ಸಭೆ ಬುಧವಾರ ನಡೆಯಿತು.

2024 elections: BJP Charts Plan to Strengthen Booths

ಸಂಸದನಿಗೆ 100 ಬೂತ್ ಉಸ್ತುವಾರಿ: ಪಕ್ಷದ ಪ್ರತಿಯೊಬ್ಬ ಸಂಸದನಿಗೆ 100 ಬೂತ್ ಗಳ ಉಸ್ತುವಾರಿ ವಹಿಸುವಂತೆ ಹಾಗೂ ಪಕ್ಷದ ಪ್ರತಿಯೊಬ್ಬ ಶಾಸಕ 25 ಬೂತ್ ಗಳಲ್ಲಿ ಕಾರ್ಯಚುಟುವಟಿಕೆಗಳನ್ನು ಚುರುಕುಗೊಳಿಸುವಂತೆ ಬಿಜೆಪಿ ಸೂಚಿಸಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಪ್ರತಿನಿಧಿಸುವ 140ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಕೇಂದ್ರ ಸಚಿವರು ಭೇಟಿ ನೀಡಬೇಕು ಹಾಗೂ ವಿವಿಧ ಸಾಮಾಜಿಕ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಬೇಕು. ಸಚಿವರು ತಮಗೆ ನಿಗದಿಪಡಿಸಿರುವ ಪ್ರತಿ ಕ್ಷೇತ್ರದಲ್ಲಿ ಮೂರು ದಿನ ತಂಗಿದ್ದು, ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕಾರಣಿ ಸದಸ್ಯರೊಬ್ಬರು ತಿಳಿಸಿದರು.

ಮೈಸೂರಿಗೆ ಮೋದಿ ಭೇಟಿ; ಕಾರ್ಯಕ್ರಮ ಯಶಸ್ಸಿಗೆ ಸಮಿತಿ ರಚನೆ ಮೈಸೂರಿಗೆ ಮೋದಿ ಭೇಟಿ; ಕಾರ್ಯಕ್ರಮ ಯಶಸ್ಸಿಗೆ ಸಮಿತಿ ರಚನೆ

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ 8ನೇ ವರ್ಷಾಚರಣೆಯ ಸಿದ್ಧತೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ದೇಶದ ಸಮಾರು 74,000 ಬೂತ್‌ಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಚುಟುವಟಿಕೆಗಳನ್ನು ಕೈಗೊಳ್ಳಲು ಪಕ್ಷವು 4 ಸದಸ್ಯರ ಕಾರ್ಯಪಡೆಯನ್ನು ರಚನೆ ಮಾಡಿದೆ. ಸಂಘಟನೆಯ ಮೂಲಕ ತನ್ನ ಜನಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಜೆಪಿ ಮುಂದಾಗಿದೆ.

2024 elections: BJP Charts Plan to Strengthen Booths

ಪಕ್ಷ ಸಂಘಟನೆಗೆ ಸಮಿತಿಗಳ ರಚನೆ: ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಸಮಿತಿಗಳನ್ನು ರಚಿಸಲಾಗಿದೆ. ಪ್ರಚಾರದ ಮೂಲಕ ಚುನಾವಣೆ ಸಿದ್ಧತೆಗಳನ್ನು ಆರಂಭಿಸಲಾಗುತ್ತದೆ. ವಿವಿಧ ರಾಜ್ಯಗಳ ಪ್ರತಿನಿಧಿಗಳನ್ನು ಒಂದು ಕಡೆ ಸೇರಿಸಿ, ಅಲ್ಲಿಂದಲೇ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತದೆ ಎಂಬ ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣಾ ಪ್ರಚಾರಕ್ಕೆ ದೇಶಾದ್ಯಂತ ಸಂಸದರು, ಶಾಸಕರನ್ನು ಬಿಜೆಪಿ ನಿಯೋಜನೆ ಮಾಡಲಿದೆ. ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಸಹ ಈ ಪ್ರಚಾರ ಕಾರ್ಯವನ್ನು ಮುನ್ನಡೆಸಲಿದ್ದಾರೆ. ಒಟ್ಟು ಮೂರು ಹಂತದಲ್ಲಿ ಈ ಪ್ರಚಾರ ಕಾರ್ಯ ನಡೆಸಲಾಗುತ್ತದೆ.

ಮೊದಲ ಹಂತದಲ್ಲಿ ಪಕ್ಷ ಸಮಿತಿಯನ್ನು ರಚನೆ ಮಾಡಲಿದೆ. ಎರಡನೇ ಹಂತದಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಸಶಕ್ತಗೊಳಿಸುವ ಕಾರ್ಯಚಟುವಟಿಕೆಗಳನ್ನು ಸಕ್ರಿಯಗೊಳಿಸಲಾಗುತ್ತದೆ. ಮೂರನೇ ಹಂತದಲ್ಲಿ ಸಾರ್ವಜನಿಕ ಸಮಾವೇಶಗಳನ್ನು ನಡೆಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತ, ಸಾಧನೆಯನ್ನು ಜನರಿಗೆ ಮುಟ್ಟಿಸುವ ಕಾರ್ಯ ನಡೆಯುತ್ತದೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಬಿಜೆಪಿಯಿಂದ ಸರಣಿ ಸಭೆ: ಮತ್ತೊಂದೆಡೆ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಚುನಾವಣೆ ಪೂರ್ವಭಾವಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಸೋಮವಾರ ಸುಧೀರ್ಘ ಸಭೆ ನಡೆಸಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧಿಕಾರವಧಿ ಜುಲೈ 25ರಂದು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜುಲೈನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಪ್ರತಿಪಕ್ಷವು ಪ್ರತ್ಯೇಕವಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಮುಂಬರುವ 2024 ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಗೆಲುವು ದಿಕ್ಸೂಚಿ ಎಂದು ವಿಶ್ಲೇಷಿಸಲಾಗುತ್ತಿದೆ.

English summary
Inorder to 2024 Loksabha elections, BJP charts plan to strengthen booths across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X