ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಕೊರೊನಾ ಭೀತಿಯಲ್ಲಿ ಈ ಬಾರಿ ಚುಟುಕು ಗಣರಾಜ್ಯೋತ್ಸವ ಪರೇಡ್

|
Google Oneindia Kannada News

ನವದೆಹಲಿ, ಜನವರಿ 21: ಕೊರೊನಾ ಭೀತಿಯಿಂದಾಗಿ ಗಣರಾಜ್ಯೋತ್ಸವ ಪರೇಡ್ ಅವಧಿಯನ್ನು ಕೂಡ ಕಡಿಮೆ ಮಾಡಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಕಡಿಮೆ ಇರಲಿವೆ. ಜನವರಿ 26 ರಂದು ರಾಜ್‌ಪಥದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಆದಾಗ್ಯೂ ಒಟ್ಟಾರೆ ಸಾಂಪ್ರದಾಯಿಕ ಪಾತ್ರವನ್ನು ನಿರ್ಬಂಧಗಳ ಹೊರತಾಗಿಯೂ ನಿರ್ವಹಿಸಲಾಗುವುದು.

ಈ ಮೊದಲು ಪೆರೇಡ್ 8.2 ಕಿ.ಮೀ ನಡೆಯುತ್ತಿತ್ತು, ಈಗ ಅದನ್ನು 3.3 ಕಿ.ಮೀಗೆ ಇಳಿಕೆ ಮಾಡಲಾಗಿದೆ.ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ಪ್ರತಿ ಕಾಂಟಿಂಜೆಂಟ್‌ನಲ್ಲಿ 104 ಮಂದಿ ಸದಸ್ಯರು ಇರುತ್ತಿದ್ದರು, ಅದನ್ನು 96ಕ್ಕೆ ಇಳಿಸಲಾಗಿದೆ.

2021 Witness Shorter Vesrion Of Republic Day Parade

ಸಾಮಾನ್ಯವಾಗಿ 12/12 ಸಾಲುಗಳು ಇರುತ್ತಿತ್ತು ಅದನ್ನು 8ಕ್ಕೆ ಇಳಿಸಲಾಗಿದೆ. ಪೆರೇಡ್‌ನಲ್ಲಿ ಭಾಗವಹಿಸುವವರೆಲ್ಲರೂ ಮಾಸ್ಕ್ ಧರಿಸಲಿದ್ದಾರೆ.15 ವರ್ಷದೊಳಗಿನ ಮಕ್ಕಳಿಗೆ ಅನುಮತಿ ಇಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಕಡಿತಗೊಳಿಸಲಾಗಿದೆ.

ಅತಿಥಿಗಳು ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕುಳಿತುಕೊಳ್ಳಬೇಕಿದೆ. ದೆಹಲಿಗೆ ಗಣರಾಜ್ಯೋತ್ಸವ ಪರೇಡ್‌ಗೆಂದು ತೆರಳಿದ್ದ 150 ಮಂದಿ ಸೈನಿಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 25 ಸಾವಿರ ಮಂದಿಗೆ ಅವಕಾಶ ನೀಡಲಾಗಿದೆ. ಈ ಮೊದಲು 1.3 ಲಕ್ಷ ಮಂದಿಗೆ ಅವಕಾಶವಿತ್ತು.15 ವರ್ಷದೊಳಗಿನ ಮಕ್ಕಳಿಗೆ ಅವಕಾಶವಿಲ್ಲ.

ಆಗಸ್ಟ್ 15 1947ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ 29ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ 4,1947ರಂದು ಶಾಸನಸಭೆಯಲ್ಲಿ ಮಂಡಿಸಿತು. ನವೆಂಬರ್ 26,1949 ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26 1950ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.

ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ 26, 1929 ರಂದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದ೦ದೇ ಜಾರಿಗೆ ತರಲಾಯಿತು.

English summary
The Republic Day this year will be of shorter duration. The marching contingent will be smaller and the cultural performances will be fewer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X