India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ದೀರ್ಘಾವಧಿ ಚಂದ್ರಗ್ರಹಣ ಮುಗಿನ ನಂತರ ಮಾಡುವುದೇನು?

|
Google Oneindia Kannada News

ನವದೆಹಲಿ, ನವೆಂಬರ್ 19: ಈ ವರ್ಷದ ಕೊನೆಯ ಹಾಗೂ ದೀರ್ಘಾವಧಿಯ ಚಂದ್ರಗ್ರಹಣವು ನವೆಂಬರ್ 19ರ ಬೆಳಗ್ಗೆ 11.30ಕ್ಕೆ ಆರಂಭವಾಗಲಿದ್ದು, ಸಂಜೆ 5.33 ಗಂಟೆವರೆಗೆ ಕಾಣಿಸಿಕೊಳ್ಳಲಿದೆ. ಇದು ಖಂಡಗ್ರಾಸ ಚಂದ್ರಗ್ರಹಣ ಆಗಿರುವುದರಿಂದ ಭಾರತದಾದ್ಯಂತ ಇದನ್ನು ವೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂಗಳಲ್ಲಿ ಮಾತ್ರ ಈ ಚಂದ್ರಗ್ರಹಣವು ಭಾಗಶಃ ಗೋಚರಿಸುತ್ತದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಹುದೇವ ಸೂರ್ಯ ಮತ್ತು ಚಂದ್ರನನ್ನು ಬಾಯಿಯಿಂದ ಹಿಡಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಇದು ರಾಕ್ಷಸ ದೇವರನ್ನು ಒಳಗೊಂಡಿರುವುದರಿಂದ, ಈ ಸಂದರ್ಭದಲ್ಲಿ ಸಾಕಷ್ಟು ನಕಾರಾತ್ಮಕತೆಯನ್ನು ಹೊಂದಿರುತ್ತದೆ. ಈ ಹಿನ್ನೆಲೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣದ ವಿದ್ಯಮಾನವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

Lunar Eclipse 2021 Live Updates: 580 ವರ್ಷಗಳ ಬಳಿಕ ಸಂಭವಿಸುತ್ತಿದೆ ದೀರ್ಘಾವಧಿಯ ಚಂದ್ರಗ್ರಹಣLunar Eclipse 2021 Live Updates: 580 ವರ್ಷಗಳ ಬಳಿಕ ಸಂಭವಿಸುತ್ತಿದೆ ದೀರ್ಘಾವಧಿಯ ಚಂದ್ರಗ್ರಹಣ

ಗ್ರಹಣದ ಸಮಯದಲ್ಲಿ ಪೂಜೆ ಮತ್ತು ಶುಭ ಕಾರ್ಯಗಳನ್ನು ಮಾಡುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಗ್ರಂಥಗಳಲ್ಲಿ ಗ್ರಹಣಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಿದ್ದು, ಗ್ರಹಣ ಮುಗಿದ ನಂತರ ಕೆಲವು ಕೆಲಸಗಳನ್ನು ಮಾಡುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಕುರಿತು ಪ್ರಮುಖ ಅಂಶಗಳನ್ನು ಮುಂದೆ ಓದಿ.

ಚಂದ್ರಗ್ರಹಣ ಬಳಿಕ ಏನು ಮಾಡುವುದು?:

* ಚಂದ್ರಗ್ರಹಣದ ನಂತರ ಸ್ನಾನ ಮಾಡುವುದು ಅಗತ್ಯವಾಗಿರುತ್ತದೆ. ಚಂದ್ರಗ್ರಹಣದ ನಂತರ ಸ್ನಾನ ಮಾಡುವುದರಿಂದ ಗ್ರಹಣದ ಸಮಯದಲ್ಲಿ ಬಿಡುಗಡೆಯಾದ ನಕಾರಾತ್ಮಕ ಶಕ್ತಿಯ ಪ್ರಭಾವ ಕೊನೆಯಾಗುತ್ತದೆ. ಸ್ನಾನದ ವೇಳೆಗೆ ನೀರಿಗೆ ಗಂಗಾಜಲವನ್ನು ಮಿಶ್ರಣ ಮಾಡಿದರೆ ಉತ್ತಮ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ.

ಶುಭ್ರವಾದ ಬಟ್ಟೆಯನ್ನು ಧರಿಸಬೇಕು:

ಗ್ರಹಣದ ಸಮಯ ಅಂತ್ಯವಾಗುತ್ತಿದ್ದಂತೆ ಗಂಗಾಜಲ ಮಿಶ್ರಿತ ನೀರಿನಿಂದ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು.

ಮನೆಯಲ್ಲಿ ಗಂಗಾಜಲ ಸಿಂಪಡಿಸುವುದು ಉತ್ತಮ:

ಸಾಮಾನ್ಯವಾಗಿ ಗ್ರಹಣದ ಸಮಯ ಮುಗಿದ ಮೇಲೆ ದೇವರ ಕೋಣೆ ಆದಿಯಾಗಿ ಇಡೀ ಮನೆಗೆ ಗಂಗಾಜಲವನ್ನು ಸಿಂಪಡಿಸುವುದು. ಗಂಗಾಜಲವನ್ನು ಬಳಸಿ ದೇವರಿಗೆ ಅಭಿಷೇಕವನ್ನು ಮಾಡಬೇಕು.

ಆಹಾರ ಸೇವನೆ ಉತ್ತಮವಲ್ಲ

   600 ವರ್ಷಗಳ ನಂತರ ನಾಳೆ ಸಂಭವಿಸಲಿದೆ ಸುದೀರ್ಘ ಚಂದ್ರಗ್ರಹಣ | Oneindia Kannada

   ಗ್ರಹಣದ ಸಮಯದಲ್ಲಿ ಬಹಳಷ್ಟು ನಕಾರಾತ್ಮಕ ಅಂಶಗಳನ್ನು ಹೊರಸೂಸುತ್ತವೆ. ಈ ಅವಧಿಯಲ್ಲಿ ಆಹಾರವೂ ಕೂಡ ಅಪಾಯಕಾರಿ ಆಗಿರುತ್ತದೆ. ಹೀಗಾಗಿ ಆಹಾರ ಸೇವನೆಯನ್ನೂ ತ್ಯಜಿಸಬೇಕು. ಗ್ರಹಣ ಮುಗಿದ ಬಳಿಕ ಹಸುವಿಗೆ ರೊಟ್ಟಿ ತಿನ್ನಿಸುವುದರಿಂದ ಶುಭ ಫಲ ಪ್ರಾಪ್ತಿ ಆಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಹಸುವಿಗೆ ಆಹಾರ ನೀಡುವುದರಿಂದ ಎಲ್ಲಾ ರೀತಿಯ ದೋಷಮುಕ್ತಿ ಆಗಲಿದೆ.

   English summary
   2021 Lunar Eclipse: What to do after the eclipse ends? Know More About belief described in astrology.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X