ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಗಶಃ ಚಂದ್ರಗ್ರಹಣ ನೋಡುವುದು ಶುಭವೋ, ಅಶುಭವೋ?

|
Google Oneindia Kannada News

ನವದೆಹಲಿ, ನವೆಂಬರ್ 18: ಈ ಹಿಂದೆ 15ನೇ ಶತಮಾನದಲ್ಲಿ ಸಂಭವಿಸಿದ ಚಂದ್ರಗ್ರಹಣದ ಬಳಿಕ ಮೊದಲ ಬಾರಿಗೆ ನವೆಂಬರ್ 18ರಂದು ಆರಂಭವಾಗಲಿರುವ ಭಾಗಶಃ ಚಂದ್ರಗ್ರಹಣವು ಅತ್ಯಂತ ದೀರ್ಘವಾಗಿರುತ್ತದೆ. ಈ ತಿಂಗಳಿನಲ್ಲಿ ಕಾಣಿಸಿಕೊಳ್ಳುವ ಗ್ರಹಣವು 6 ಗಂಟೆಗಳ ಕಾಲ ಇರಲಿದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಹುದೇವ ಸೂರ್ಯ ಮತ್ತು ಚಂದ್ರನನ್ನು ಬಾಯಿಯಿಂದ ಹಿಡಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಇದು ರಾಕ್ಷಸ ದೇವರನ್ನು ಒಳಗೊಂಡಿರುವುದರಿಂದ, ಈ ಸಂದರ್ಭದಲ್ಲಿ ಸಾಕಷ್ಟು ನಕಾರಾತ್ಮಕತೆಯನ್ನು ಹೊಂದಿರುತ್ತದೆ.

Lunar Eclipse 2021 Live Updates: ನ.19ಕ್ಕೆ ಶತಮಾನದ ಸುದೀರ್ಘ ಭಾಗಶಃ ಚಂದ್ರಗ್ರಹಣLunar Eclipse 2021 Live Updates: ನ.19ಕ್ಕೆ ಶತಮಾನದ ಸುದೀರ್ಘ ಭಾಗಶಃ ಚಂದ್ರಗ್ರಹಣ

ಚಂದ್ರ ಗ್ರಹಣವು 6.02 ಮತ್ತು 12.30 UTC ( ಬೆಳಗ್ಗೆ 11.30 ರಿಂದ ಸಂಜೆ 5.33 IST ) ನಡುವೆ ಕಾಣಿಸಿಕೊಳ್ಳುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರನ ಜೋಡಣೆಗೆ ಬಂದಾಗ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತದೆ. ನವೆಂಬರ್ 19 ರಂದು 6 ಗಂಟೆಗಳ ಕಾಲ ನಡೆಯುವ ದೀರ್ಘವಾದ ಭಾಗಶಃ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ.

2021 Lunar Eclipse Is auspicious to watch one?

ಚಂದ್ರಗ್ರಹಣ ಬಳಿಕ ಏನು ಮಾಡುವುದು?:

* ಚಂದ್ರಗ್ರಹಣದ ನಂತರ ಸ್ನಾನ ಮಾಡವುದು ಅಗತ್ಯವಾಗಿರುತ್ತದೆ. ಚಂದ್ರಗ್ರಹಣದ ನಂತರ ನೀವು ತಣ್ಣೀರಿನಿಂದ ಸ್ನಾನ ಮಾಡಬೇಕು ಎಂದು ಕೆಲವು ಧಾರ್ಮಿಕ ಸಂಸ್ಥೆಗಳು ಸೂಚಿಸುತ್ತವೆ.

* ಗ್ರಹಣದ ಸಮಯದಲ್ಲಿ ಬಹಳಷ್ಟು ನಕಾರಾತ್ಮಕ ಅಂಶಗಳನ್ನು ಹೊರಸೂಸುತ್ತವೆ. ಈ ಅವಧಿಯಲ್ಲಿ ಮನುಷ್ಯನ ದೇಹವಷ್ಟೇ ಅಲ್ಲ ಆಹಾರವೂ ಕೂಡ ಅಪಾಯಕಾರಿ ಆಗಿರುತ್ತದೆ. ಹೀಗಾಗಿ ಆಹಾರ ಸೇವನೆಯನ್ನೂ ತ್ಯಜಿಸಬೇಕು ಎಂದು ಧಾರ್ಮಿಕ ಸಂಸ್ಥೆಗಳು ಸಲಹೆ ನೀಡುತ್ತವೆ.

* ಇದಲ್ಲದೆ ಚಂದ್ರಗ್ರಹಣದ ಸಮಯದಲ್ಲಿ ಮಲಗಬಾರದು ಎಂದು ಪುರಾಣಗಳು ಹೇಳುತ್ತವೆ.

* ಚಂದ್ರಗ್ರಹಣದ ಸಂದರ್ಭದಲ್ಲಿ ಪ್ರಾಣಿಗಳ ಮೇಲೆ ಕುಳಿತುಕೊಳ್ಳುವುದೂ ಸೂಕ್ತವಲ್ಲ ಎಂದು ಹೇಳಲಾಗುತ್ತದೆ.

400 ವರ್ಷಗಳ ದಾಖಲೆ:

ನವೆಂಬರ್ 19ರಂದು ನಡೆಯಲಿರುವ ಚಂದ್ರಗ್ರಹಣವು ಮುಂದಿನ 400 ವರ್ಷಗಳಲ್ಲೇ ದೊಡ್ಡ ದಾಖಲೆ ಆಗಿರಲಿದೆ. ಅಂದರೆ ಮುಂದಿನ 400 ವರ್ಷಗಳವರೆಗೂ ಇಂಥ ಚಂದ್ರಗ್ರಹಣವು ಮತ್ತೊಮ್ಮೆ ಗೋಚರಿಸುವುದಿಲ್ಲ. ಏಕೆಂದರೆ ಮುಂದಿನ ಆರು ಗಂಟೆಗಳ ಚಂದ್ರಗ್ರಹಣವು 2,489ರ ಅಕ್ಟೋಬರ್ 9ರಂದು ನಡೆಯಲಿದೆ. ಈ ಹಿಂದೆ ಕೊನೆಯ ಬಾರಿಗೆ ಇಂತಹ ದೀರ್ಘ ಚಂದ್ರಗ್ರಹಣ ನವೆಂಬರ್ 9 2003ರಂದು ಸಂಭವಿಸಿತ್ತು. ಇದು ಆರು ಗಂಟೆ ಮೂರು ನಿಮಿಷಗಳ ಕಾಲ ಕಾಣಿಸಿಕೊಂಡಿತ್ತು. ಆದಾಗ್ಯೂ ಇದು ಪೂರ್ಣ ಮತ್ತು ಭಾಗಶಃ ಚಂದ್ರಗ್ರಹಣವಲ್ಲ.

ಎಲ್ಲೆಲ್ಲಿ ಗೋಚರಿಸಲಿದೆ ಭಾಗಶಃ ಚಂದ್ರಗ್ರಹಣ?:

ನವೆಂಬರ್ 18 ರಿಂದ ಪ್ರಪಂಚದ ಹಲವಾರು ಭಾಗಗಳು ಆರು ಗಂಟೆಗಳ ಕಾಲ ದೀರ್ಘವಾದ ಭಾಗಶಃ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿವೆ. ಈ ಭಾಗಶಃ ಚಂದ್ರಗ್ರಹಣವು ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಯುರೋಪ್ ಮತ್ತು ಭಾರತ ಸೇರಿದಂತೆ ಏಷ್ಯಾದ ಭಾಗಗಳಲ್ಲಿ ಪ್ರಪಂಚದಾದ್ಯಂತ ಗೋಚರಿಸುತ್ತದೆ. ಕಳೆದ 1440ರ ಫೆಬ್ರವರಿ 18ರಂದು ಜಗತ್ತು ಕೊನೆಯ ಬಾರಿಗೆ ಇಂತಹ ದೀರ್ಘ ಭಾಗಶಃ ಚಂದ್ರಗ್ರಹಣವನ್ನು ಕಂಡಿತ್ತು. ಭಾರತದಲ್ಲಿ ಭಾಗಶಃ ಚಂದ್ರಗ್ರಹಣವು ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ನೆರೆಯ ಪ್ರದೇಶಗಳಲ್ಲಿ ಗೋಚರಿಸುತ್ತದೆ.

ಕೆಂಪು ಬಣ್ಣದಲ್ಲಿ ಗೋಚರಿಸುವ ಚಂದ್ರ:

ಚಂದ್ರಗ್ರಹಣದ ಕೆಲವು ಹಂತಗಳಲ್ಲಿ, ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಬಹುದು. ಏಕೆಂದರೆ ಆ ಸಮಯದಲ್ಲಿ ಚಂದ್ರನನ್ನು ತಲುಪುವ ಉಳಿದಿರುವ ಸೂರ್ಯನ ಬೆಳಕು ಚಂದ್ರನ ಮೇಲ್ಮೈಯಿಂದ ನೋಡಿದಂತೆ ಭೂಮಿಯ ಅಂಚುಗಳ ಸುತ್ತಲೂ ಇರುತ್ತದೆ. ಅಲ್ಲಿಂದ, ಗ್ರಹಣದ ಸಮಯದಲ್ಲಿ ಭೂಮಿಯ ಎಲ್ಲಾ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಒಮ್ಮೆ ನೋಡಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಯಾವಾಗ ಚಂದ್ರಗ್ರಹಣ ಗೋಚರ?:

ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಎನಿಸಿಕೊಳ್ಳಲಿದೆ. 2001ರಿಂದ 2100ವರೆಗಿನ ಅವಧಿಯಲ್ಲಿ ಇಷ್ಟು ಸುದೀರ್ಘವಾದ ಯಾವುದೇ ಚಂದ್ರ ಗ್ರಹಣ ಇರುವುದಿಲ್ಲ. ಹಾಗಾಗಿಯೇ ಇದನ್ನ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂದು ಕರೆಯಲಾಗುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿಕೊಂಡಿದೆ. ಭಾರತದಲ್ಲಿ ಈ ಭಾಗಶಃ ಚಂದ್ರಗ್ರಹಣ ನವೆಂಬರ್ 19 ರಂದು ಮಧ್ಯಾಹ್ನ 12:48 ಕ್ಕೆ ಪ್ರಾರಂಭವಾಗಲಿದ್ದು ಸಂಜೆ 4:17 ರವರೆಗೆ ಗೋಚರಿಸುತ್ತದೆ.

English summary
2021 Lunar Eclipse Is auspicious to watch one?. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X