ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2013ರ ಅತ್ಯಾಚಾರ ಪ್ರಕರಣ: ಅಸಾರಾಮ್‌ಗೆ ಜೀವಾವಧಿ ಶಿಕ್ಷೆ, ಪತ್ನಿ ಮತ್ತು ಮಗಳು ಖುಲಾಸೆ!

2013ರ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಪತ್ನಿ ಮತ್ತು ಮಗಳನ್ನು ಖುಲಾಸೆಗೊಳಿಸಲಾಗಿದೆ.

|
Google Oneindia Kannada News

ಜೋಧ್ ಪುರ ಜನವರಿ 31: 2013ರ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ಮಾನವ ಅಸಾರಾಮ್‌ಗೆ (77) ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಪತ್ನಿ ಮತ್ತು ಮಗಳನ್ನು ಖುಲಾಸೆಗೊಳಿಸಲಾಗಿದೆ. 2013ರಲ್ಲಿ ದಾಖಲಾದ ಶಿಷ್ಯೆಯ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಮ್‌ ಬಾಪು (77) ದೋಷಿ ಎಂದು ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಸೋಮವಾರ ತೀರ್ಪು ನೀಡಿತ್ತು. ಗಾಂಧಿನಗರ ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶ ಡಿಕೆ ಸೋನಿ ಅವರು ಶಿಕ್ಷೆಯ ಪ್ರಮಾಣವನ್ನು ಇಂದು (ಮಂಗಳವಾರ) ಪ್ರಕಟಿಸಿದ್ದಾರೆ.

ಚಹಾದಂಗಡಿಯಲ್ಲಿ ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಸಾರಾಮ್ ಈಗ ಸರಿ ಸುಮಾರು ಸಾವಿರಾರು ಕೋಟಿ ರೂಪಾಯಿ ಒಡೆಯ, 16 ವರ್ಷ ವಯಸ್ಸಿನ ಯುವತಿ ಮೇಲೆ ಜೋಧಪುರದ ಆಶ್ರಮದಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲುವಾಸಿಯಾಗಿದ್ದಾರೆ. ಆಗಸ್ಟ್ 15, 2013ರಲ್ಲಿ ಜೋಧಪುರದ ಮಾಣಾಯಿ ಆಶ್ರಮದಲ್ಲಿ 16 ವರ್ಷ ವಯಸ್ಸಿನ ಯುವತಿಯನ್ನು ಆಗಸ್ಟ್ 15ರಂದು ಕರೆಸಿಕೊಂಡು ಅತ್ಯಾಚಾರ ಎಸಗಿದ ಅಸಾರಾಮ್ ಬಾಪು.

ಆಸಾರಾಮ್‌ಗೆ ಜೀವಾವಧಿ ಶಿಕ್ಷೆ

ಆಸಾರಾಮ್‌ಗೆ ಜೀವಾವಧಿ ಶಿಕ್ಷೆ

2013 ರಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸಾರಾಮ್ ಬಾಪುನನ್ನು ರಾಜಸ್ಥಾನದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ದೋಷಿ ಎಂದು 2018 ಏ.25ರಂದು ಬೆಳಿಗ್ಗೆ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಇನ್ನೂ ಘೋಷಿಸಿರಲಿಲ್ಲ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಸಾರಾಮ್‌ ಅವರ ಪತ್ನಿ ಸೇರಿದಂತೆ ಇತರ ಆರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಹಮದಾಬಾದ್‌ನ ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ಅಸಾರಾಮ್‌ ಬಾಪು 2001 ರಿಂದ 2006 ರವರೆಗೆ ಗಾಂಧಿನಗರದ ಹೊರವಲಯದಲ್ಲಿರುವ ತಮ್ಮ ಆಶ್ರಮದಲ್ಲಿ ಶಿಷ್ಯೆಯೊಬ್ಬರ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾರೆ.

ಅಸಾರಾಮ್‌ ಆರೋಪಗಳ ಪಟ್ಟಿ

ಅಸಾರಾಮ್‌ ಆರೋಪಗಳ ಪಟ್ಟಿ

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್‌ಸಿ ಕೊಡೆಕರ್, "ನ್ಯಾಯಾಲಯವು ಪ್ರಾಸಿಕ್ಯೂಷನ್ ಪ್ರಕರಣವನ್ನು ಸ್ವೀಕರಿಸಿದೆ ಮತ್ತು ಸೆಕ್ಷನ್ 376 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು) ಮತ್ತು ಅಕ್ರಮ ಬಂಧನಕ್ಕಾಗಿ ಭಾರತೀಯ ದಂಡ ಸಂಹಿತೆಯ ಇತರ ನಿಬಂಧನೆಗಳ ಅಡಿಯಲ್ಲಿ ಅಸಾರಾಮ್‌ನನ್ನು ದೋಷಿ ಎಂದು ತೀರ್ಪು ನೀಡಿದೆ" ಎಂದು ಹೇಳಿದರು.

ಆರೋಪಪಟ್ಟಿಯಲ್ಲಿ ಅಸಾರಾಮ್‌ ಹೆಸರು

ಆರೋಪಪಟ್ಟಿಯಲ್ಲಿ ಅಸಾರಾಮ್‌ ಹೆಸರು

ಸೂರತ್ ಮೂಲದ ಮಹಿಳೆಯೊಬ್ಬರು ಅಸಾರಾಂ ಬಾಪು ಮತ್ತು ಇತರ ಏಳು ಜನರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಬಂಧನದ ಪ್ರಕರಣವನ್ನು ದಾಖಲಿಸಿದ್ದರು. ಅವರಲ್ಲಿ ಒಬ್ಬರು ವಿಚಾರಣೆ ಬಾಕಿ ಇರುವಾಗ ಅಕ್ಟೋಬರ್ 2013 ರಲ್ಲಿ ಸಾವನ್ನಪ್ಪಿದ್ದರು. 2013ರ ಆಗಸ್ಟ್​ 31ರಂದು ಅಸಾರಾಂ ಬಾಪು ಅವರನ್ನು ಬಂಧಿಸಲಾಗಿತ್ತು. 2014ರ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಜೋಧಪುರದ ಜೈಲಿನಲ್ಲಿ ಅಸಾರಾಮ್‌

ಜೋಧಪುರದ ಜೈಲಿನಲ್ಲಿ ಅಸಾರಾಮ್‌

ಈ ವಿವಾದಿತ ದೇವಮಾನವ ಈಗಾಗಲೇ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೋಧಪುರದ ಜೈಲಿನಲ್ಲಿದ್ದು, ಇಂದು ವರ್ಚುವಲ್​ ಆಗಿ ವಿಚಾರಣೆಗೆ ಹಾಜರಾಗಿದ್ದರು. ಗಾಂಧಿ ನಗರದ ತಮ್ಮ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಅಸಾರಾಂ ಬಾಪುವನ್ನು 2018ರಲ್ಲಿ ಜೋಧ್‌ಪುರ ನ್ಯಾಯಾಲಯವು ತಪ್ಪಿತಸ್ಥನೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

English summary
Asaram was sentenced to life imprisonment in the 2013 rape case, while his wife and daughter were acquitted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X