• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಆಪ್ತೆ ಮಾಯಾಗೆ ಜಾಮೀನು ಏಕೆ?

By Mahesh
|

ಅಹಮದಾಬಾದ್, ಜು.31: 2002ರ ನರೋಡಾ ಪಾಟಿಯಾ ಕೋಮುಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿಗೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ಥಳೀಯ ಹೈಕೋರ್ಟ್ ಬುಧವಾರ ಜಾಮೀನು ಮೂಲಕ ಬಿಡುಗಡೆ ನೀಡಿದ್ದನ್ನು ಎಸ್ ಐಟಿ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದೆ.

ಸುಪ್ರೀಂಕೋರ್ಟ್ ನಿಂದ ನಿಯೋಜಿತವಾಗಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಗುಜರಾತಿನ ಮಾಜಿ ಸಚಿವೆ, ಒಂದು ಕಾಲದಲ್ಲಿ ಅಂದಿನ ಸಿಎಂ ಮೋದಿ ಅವರ ಆಪ್ತ ವರ್ಗದ ಸದಸ್ಯೆಯಾಗಿದ್ದ ಮಾಯಾ ಅವರಿಗೆ ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಜಾಮೀನು ನೀಡಿದ್ದನ್ನು ಪ್ರಶ್ನಿಸಿದೆ.

ಈ ವರ್ಷದ ಫೆಬ್ರವರಿ ತಿಂಗಳಲ್ಲಿಯೂ ಹೈಕೋರ್ಟ್, ಕೊಡ್ನಾನಿಗೆ ತಾತ್ಕಾಲಿಕ ಜಾಮೀನು ನೀಡಿತ್ತು. ಆದರೆ, ಆ ತಿಂಗಳಲ್ಲೇ ಆಕೆಯ ಜಾಮೀನು ಬಿಡುಗಡೆಯ ಅವಧಿಯನ್ನು ವಿಸ್ತರಿಸಲು ನ್ಯಾಯಾಲಯ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿ 2012ರ ಡಿಸೆಂಬರ್‌ನಲ್ಲಿ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ಇನ್ನೂ ವಿಚಾರಣೆಗೆ ಬಾಕಿಯಿದೆ. ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿಲ್ಲ ಕಡಿಮೆಯಿರುವುದರಿಂದ ನನಗೆ ಜಾಮೀನು ನೀಡಿ ಎಂದು ಕೊಡ್ನಾನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ನರೋಡಾ ಪಾಟಿಯಾ ಹತ್ಯಾಕಾಂಡದ ತನಿಖೆ ನಡೆಸಿರುವ ವಿಶೇಷ ತನಿಖಾ ನ್ಯಾಯಾಲಯವು ಹಲವು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ತೀರ್ಪು ನೀಡಿದೆ. ಆದರೆ ಈ ಹೇಳಿಕೆಗಳು ಕಾನೂನಿನ ನಿಯಮಾವಳಿಗಳಡಿಯಲ್ಲಿ ಪರಿಗಣನೆಗೆ ಯೋಗ್ಯವಾದುದಲ್ಲ ಎಂದು ಕೊಡ್ನಾನಿ ವಾದಿಸಿದ್ದರು.

ತನ್ನ ಆರೋಗ್ಯ ಹದಗೆಡುತ್ತಿರುವುದರಿಂದಲೂ ತನಗೆ ಜಾಮೀನು ದೊರೆಯಬೇಕೆಂದು ಕೊಡ್ನಾನಿ ಅರ್ಜಿಯಲ್ಲಿ ಕೋರಿದ್ದಾರೆಂದು ಅವರ ವಕೀಲ ಮಿತೇಶ್ ಅಮಿನ್ ತಿಳಿಸಿದ್ದಾರೆ.

ಜಾಮೀನು ಬಿಡುಗಡೆ ಕೋರಿ ಕೊಡ್ನಾನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ಆನಂತ್ ದಾವೆಯ ಅವರಿದ್ದ ಏಕಸದಸ್ಯ ನ್ಯಾಯಪೀಠದ ವಿಚಾರಣೆಗೆ ಬಂದಿತ್ತು. ಆದರೆ, ನ್ಯಾಯಪೀಠವು ಆ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿತ್ತು. ಆನಂತರ ಈ ಪ್ರಕರಣದ ವಿಚಾರಣೆಯನ್ನು ಇನ್ನೊಂದು ನ್ಯಾಯಪೀಠದ ಮುಂದೆ ಬಂದಿದ್ದು, ಅದು ಇಂದು ತೀರ್ಪು ನೀಡಿದೆ.

ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿ ಯಾಗಿದ್ದಾಗ ಅವರ ಸಂಪುಟದಲ್ಲಿ ಮಾಯಾ ಕೊಡ್ನಾನಿ ಮಹಿಳಾ ಹಾಗೂ ಶಿಶು ಕಲ್ಯಾಣ ಸಚಿವೆಯಾಗಿದ್ದರು. 2002ರಲ್ಲಿ ನಡೆದ ಗುಜರಾತ್‌ ಹಿಂಸಾಚಾರದ ವೇಳೆ ನರೋಡಾದಲ್ಲಿ ನಡೆದ ಹತ್ಯಾಕಾಂಡದಲ್ಲಿ ಆಕೆ ಮುಖ್ಯ ಸೂತ್ರಧಾರಿಯೆಂದು ನ್ಯಾಯಾಲಯ ತೀರ್ಪು ನೀಡಿತ್ತು ಹಾಗೂ ಆಕೆಗೆ 28 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿತ್ತು.

ನರೋಡಾ ಪಾಟಿಯಾ ಹತ್ಯಾಕಾಂಡ: ಈ ದುರ್ಘಟನೆಯಲ್ಲಿ 97 ಮುಸ್ಲಿಮರ ಹತ್ಯೆಯಾಗಿತ್ತು. ಘಟನೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರ ಗುಂಪೇ ಹೊಣೆಯೆಂದು ಆರೋಪಿಸಲಾಗಿತ್ತು.

ಹೆಚ್ಚುವರಿ ಮುಖ್ಯ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಜ್ಞಿಕ್ ಅವರು ಕಳೆದ ತಿಂಗಳು ವಿಚಾರಣೆಯನ್ನು ಪೂರ್ತಿಗೊಳಿಸಿದ್ದು, ತೀರ್ಪನ್ನು ಬುಧವಾರ (ಆ.29) ಪ್ರಕಟಿಸಿ, 32 ಜನ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದರು. ಈ ಪ್ರಕರಣದಲ್ಲಿ 29 ಜನ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು.

ಮೋದಿ ಸರ್ಕಾರದ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಹಾಗೂ ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದರು. [ಹೆಚ್ಚಿನ ವಿವರ ಇಲ್ಲಿದೆ ಓದಿ]

English summary
The Special Investigating Team (SIT) appointed by the Supreme Court to prosecute the 2002 Gujarat communal riots case will on Thursday appeal against the bail granted to state's former minister Maya Kodnani in the apex court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X