ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಹತ್ಯಾಕಾಂಡ: ನಾಲ್ವರಿಗೆ ಸುಪ್ರೀಂಕೋರ್ಟಿನಿಂದ ಜಾಮೀನು

|
Google Oneindia Kannada News

ನವದೆಹಲಿ, ಜನವರಿ 23: 2002ರಲ್ಲಿ ಗುಜರಾತಿನ ನರೋಡಾ ಪಾಟಿಯಾದಲ್ಲಿನ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪ್ರಮುಖ ಅಪರಾಧಿಗಳಿಗೆ ಇಂದು (ಜನವರು 23) ಸುಪ್ರೀಂಕೋರ್ಟಿನಿಂದ ಜಾಮೀನು ನೀಡಲಾಗಿದೆ.

ಈ ಪ್ರಕರಣದ ಪ್ರಮುಖ ಅಪರಾಧಿಗಳಾದ ಉಮೇಶ್‌ಭಾಯಿ ಭರ್ವಾಡ್‌, ರಾಜ್‌ಕುಮಾರ್‌, ಹರ್ಷದ್‌ ಮತ್ತು ಪ್ರಕಾಶ್‌ಭಾಯಿ ರಾಥೋಡ್‌ಗೆ 10 ವರ್ಷಗಳ ಶಿಕ್ಷೆಗೆ ವಿಧಿಸಲಾಗಿದೆ.

ಅಮಿತ್ ಶಾ ನೀಡಿದ ಸಾಕ್ಷಿಗೆ ಬೆಲೆ, ಮಾಯಾ ನಿರ್ದೋಷಿ!ಅಮಿತ್ ಶಾ ನೀಡಿದ ಸಾಕ್ಷಿಗೆ ಬೆಲೆ, ಮಾಯಾ ನಿರ್ದೋಷಿ!

ಗುಜರಾತ್‌ ಹೈಕೋರ್ಟ್‌ ನಾಲ್ವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಮಾಜಿ ಬಜರಂಗ ದಳ ಮುಖಂಡ ಬಾಬು ಬಜರಂಗಿ ಹಾಗೂ ಇತರರು ಸೇರಿದಂತೆ 32 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ್ದರು.

2002ರ ಗೋಧ್ರಾ ರೈಲಿಗೆ ಬೆಂಕಿಹಚ್ಚಿದ ಕೇಸ್,ಇಬ್ಬರಿಗೆ ಜೀವಾವಧಿ ಶಿಕ್ಷೆ2002ರ ಗೋಧ್ರಾ ರೈಲಿಗೆ ಬೆಂಕಿಹಚ್ಚಿದ ಕೇಸ್,ಇಬ್ಬರಿಗೆ ಜೀವಾವಧಿ ಶಿಕ್ಷೆ

ಕಳೆದ ವರ್ಷ ಜೂನ್‌ನಲ್ಲಿ ಗುಜರಾತ್‌ ಹೈಕೋರ್ಟ್‌ ಪ್ರಕರಣದಲ್ಲಿ ನಾಲ್ವರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ 10 ವರ್ಷಗಳ ಕಠಿಣ ಸೆರೆಮನೆವಾಸವನ್ನು ವಿಧಿಸಿತ್ತು. ಅಲ್ಲದೆ, ಬಾಬು ಬಜರಂಗಿ ಸೇರಿದಂತೆ 16 ಜನರಿಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಲಯ ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರು ಸೇರಿದಂತೆ ಇತರೆ 18 ಜನರನ್ನು ಖುಲಾಸೆಗೊಳಿಸಿತ್ತು.

ಎಕ್ಸ್ ಪ್ರೆಸ್ ಬೋಗಿಗೆ ಬೆಂಕಿ ಹಚ್ಚಿದ ಪ್ರಕರಣ

ಎಕ್ಸ್ ಪ್ರೆಸ್ ಬೋಗಿಗೆ ಬೆಂಕಿ ಹಚ್ಚಿದ ಪ್ರಕರಣ

ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ನ ಬೋಗಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 59 ಜನ ಹಿಂದು ಪ್ರಯಾಣಿಕರು ಸಜೀವ ದಹನಗೊಂಡಿದ್ದರು. ಇದಾದ ಬಳಿಕ 2002ರ ಫೆ. 28ರಂದು ಅಹ್ಮದಾಬಾದ್‌ ಸಮೀಪದ ನರೋಡಾ ಪಾಟಿಯಾದಲ್ಲಿ ನಡೆದ ಕೋಮು ಗಲಭೆಯಲ್ಲಿ ಸುಮಾರು 97 ಜನ ಮುಸ್ಲಿಂರನ್ನು ಹತ್ಯೆ ಮಾಡಲಾಗಿತ್ತು.

ಮೋದಿ ಆಪ್ತೆ ಮಾಯಾ ಕೊಡ್ನಾನಿ ಆರೋಪಿ

ಮೋದಿ ಆಪ್ತೆ ಮಾಯಾ ಕೊಡ್ನಾನಿ ಆರೋಪಿ

ಮೋದಿ ಸರ್ಕಾರ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಹಾಗೂ ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದರು.

ಬಂದ್ ಕರೆ ನೀಡಿದ್ದ ಸಂದರ್ಭದಲ್ಲಿ ಗಲಭೆ

ಬಂದ್ ಕರೆ ನೀಡಿದ್ದ ಸಂದರ್ಭದಲ್ಲಿ ಗಲಭೆ

ಗೋಧ್ರಾ ಹತ್ಯಾಕಾಂಡದ ಬಳಿಕ ನಡೆದ ಹಿಂಸಾಚಾರದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ವಿಚಾರಣೆ 2009ರ ಆಗಸ್ಟ್ ನಲ್ಲಿ ಪ್ರಾರಂಭವಾಗಿತ್ತು. ಗೋಧ್ರಾ ರೈಲು ದುರಂತದ ಮರು ದಿನ ನಗರದ ನರೋಡಾ ಪಾಟಿಯಾ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ 97 ಜನರನ್ನು ಉದ್ರಿಕ ಗುಂಪೊಂದು ಹತ್ಯೆ ಮಾಡಿತ್ತು. ಸಬರಮತಿ ರೈಲು ದುರಂತ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಬಂದ್‌ಗೆ ಕರೆ ನೀಡಿದ್ದ ವೇಳೆಯಲ್ಲಿ ಈ ಹತ್ಯಾಕಾಂಡ ನಡೆದಿತ್ತು.

ಪ್ರಧಾನಿ ಮೋದಿ ಹೇಳಿಕೆ

ಪ್ರಧಾನಿ ಮೋದಿ ಹೇಳಿಕೆ

ಫೆಬ್ರವರಿ 2002ರಲ್ಲಿ ಕರಸೇವಕರು ಪ್ರಯಾಣಿಸುತ್ತಿದ್ದ ಸಬರಮತಿ ರೈಲಿನ ಮೇಲೆ ಬೆಂಕಿ ಹಚ್ಚಲಾಯಿತು. ಆ ಘಟನೆ ಗುಜರಾತಿನಲ್ಲಿ ಭಾರೀ ಹಿಂಸಾಚಾರಕ್ಕೆ ನಾಂದಿ ಹಾಡಿತು. ಮೋದಿ ಆ ಸಮಯದಲ್ಲಿ ಅಕ್ಕಪಕ್ಕದ ರಾಜ್ಯಗಳ ಸಹಕಾರ ಕೋರಿದ್ದರು, ಅಲ್ಲದೇ ಸೇನೆಯನ್ನೂ ಸಜ್ಜಾಗಿರಲು ಸೂಚಿಸಿದ್ದರು ಎಂದು" ನರೇಂದ್ರ ಮೋದಿ ಎ ಪೊಲಿಟಿಕಲ್ ಬಯೋಗ್ರಫಿ' ಜೀವನ ಚರಿತ್ರೆಯಲ್ಲಿ ಹೇಳಲಾಗಿದೆ. 2002ರಲ್ಲಿ ಗುಜರಾತಿನಲ್ಲಿ ನಡೆದ ಹಿಂಸಾಚಾರ ನನ್ನ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಆದರೆ ಆ ಬಗ್ಗೆ ನನಗೆ ಪಾಪಪ್ರಜ್ಞೆ ಕಾಡುತ್ತಿಲ್ಲ ಎಂದು ಮೋದಿ ಹೇಳಿದ್ದರು.

English summary
The Supreme Court has ordered the release of four convicts on bail in connection with the 202 Naroda Patiya riots case. A Bench comprising Justice A M Khanwilkar granted bail to four convicts on the ground that the high court order of conviction was debatable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X