ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಕರಾಳ ದಿನಕ್ಕಾಯ್ತು ಹದಿನಾರು! ಸಂಸತ್ ದಾಳಿಯ ಮರೆತವರ್ಯಾರು?!

|
Google Oneindia Kannada News

ಅದು ಫೆಬ್ರವರಿ 9, 2013. ಬೆಳಿಗ್ಗೆ ಎದ್ದು ಕಣ್ಣುಜ್ಜುತ್ತ ಫೋನಿನಲ್ಲಿ ಸಂದೇಶ ಓದುತ್ತಿದ್ದ ಹಲವರು "ವ್ಹಾಟ್, ಇದು ನಿಜಾನಾ..?!" ಎನ್ನುತ್ತ ಎದ್ದುಬಂದು ರಿಮೋಟ್ ತಡಕಾಡಿ, ಟಿವಿ ಹಚ್ಚಿದರೆ 'ಕುಣಿದು ಕುಪ್ಪಳಿಸುವಷ್ಟು ಖುಷಿ!'

ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಅಂದು ಬೆಳ್ಳಂಬೆಳಗ್ಗೆ, ಯಾರಿಗೂ ತಿಳಿಯದಂತೆ ಭಾರತೀಯ ಸರ್ಕಾರ ನೇಣಿಗೇರಿಸಿತ್ತು! ಶತ್ರುಗಳ ಸಾವನ್ನೂ ಸಂಭ್ರಮಿಸದ ಭಾರತೀಯರು ಅಂದು ಅದ್ಯಾವುದೋ ಹಬ್ಬವೇನೋ ಎಂಬಷ್ಟು ಸಂತಸದಲ್ಲಿ ಸಂಭ್ರಮ ಅನುಭವಿಸಿದ್ದೆವು!

ಉಂಡ ಮನೆಗೆ 2 ಬಗೆದಿದ್ದ ಗುರು ಟೈಂ ಲೈನ್ಉಂಡ ಮನೆಗೆ 2 ಬಗೆದಿದ್ದ ಗುರು ಟೈಂ ಲೈನ್

ಭಾರತದ ಆಡಳಿತದ ಶಕ್ತಿ ಕೇಂದ್ರವಾದ ಸಂಸತ್ತಿನ ಮೇಲೆ 2001 ರಲ್ಲಿ ನಡೆದ ದಾಳಿಗೆ ಇಂದಿಗೆ(ಡಿ.13) ಸರಿಯಾಗಿ ಹದಿನಾರು ವರ್ಷ ಸಂದಿದೆ. ಹದಿನಾರು ವರ್ಷದಲ್ಲಿ ಏನೇನೋ ಆಗಿಹೋಗಿದೆ. ಆದರೂ ಆ ದಿನ ಮಾತ್ರ, ನೆನೆದರೆ ನಡುಕ ಹುಟ್ಟುವ ಮಟ್ಟಿಗೆ ದುಃಸ್ವಪ್ನವಾಗಿ ಉಳಿದುಹೋಗಿದೆ.

2001 ರ ಡಿ.13 ರಂದು ನಡೆದ ದಾಳಿಯಲ್ಲಿ ಐವರು ಭಯೋತ್ಪಾದಕರು ಹತರಾದರು. ಆದರೆ ಈ ದಾಳಿಯ ರೂವಾರಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಅಫ್ಜಲ್ ಗುರುವನ್ನು ದಾಳಿ ನಡೆದ ಎರಡೇ ದಿನದಲ್ಲಿ ಅಂದರೆ ಡಿ.15 ರಂದೇ ಬಂಧಿಸಲಾಯ್ತು. 2005 ಆಗಸ್ಟ್ 4 ರಂದು ಅಫ್ಜಲ್ ಗುರುವಿಗೆ ಸುಪ್ರೀಂ ಕೋರ್ಟ್ ಮರಣದಂಡನೆಯನ್ನೇನೋ ದೃಢಪಡಿಸಿತ್ತು. ಕ್ಷಮಾದಾನ ಅರ್ಜಿಯ ವಿಚಾರಣೆ, ತೀರ್ಪಿನ ಮರುಪರಿಶೀಲನೆ, ಮಾನವ ಹಕ್ಕು ಹೋರಾಟಗಾರರ ಕೂಗುಗಳಿಂದ ಅಫ್ಜಲ್ ಗುರು ಎಂಬ ಕ್ರೂರಾತಿಕ್ರೂರ ಉಗ್ರ ನೇಣುಗಂಬ ಏರುವ ದಿನ ನಿಗದಿಯಾಗಿದ್ದು ಮಾತ್ರ ಸೆರೆ ಸಿಕ್ಕ 12 ವರ್ಷದ ನಂತರ ಎಂಬುದು ವಿಪರ್ಯಾಸ!

ಡಿ.13ರ ಸಂಸತ್ ದಾಳಿಯನ್ನು ಮರೆಯಲು ಸಾಧ್ಯವೇ?ಡಿ.13ರ ಸಂಸತ್ ದಾಳಿಯನ್ನು ಮರೆಯಲು ಸಾಧ್ಯವೇ?

ಸಂಸತ್ ದಾಳಿಯ ಸಂದರ್ಭದಲ್ಲಿ ಸಂಸತ್ತಿನೊಳಗಿದ್ದ 100 ಕ್ಕೂ ಹೆಚ್ಚು ಘಟಾನುಘಟಿ ನಾಯಕರನ್ನು ಉಳಿಸುವುದಕ್ಕೆ ತಮ್ಮ ಪ್ರಾಣತ್ಯಾಗ ಮಾಡಿದ 5 ಪೊಲೀಸ್ ಸಿಬ್ಬಂದಿ ಸೇರಿದಂತೆ 9 ಜನರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲ ಪ್ರಮುಖ ನಾಯಕರೂ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.

ಏನಾಯ್ತು ಆ ದಿನ?

ಏನಾಯ್ತು ಆ ದಿನ?

ಗೃಹಸಚಿವಾಲಯದ ನಕಲಿ ಗುರುತಿನ ಚೀಟಿಯೊಂದಿಗೆ ಡಿ.13 2001 ರಂದು ಕಾರಿನಲ್ಲಿ ಐವರು ಭಯೋತ್ಪಾದಕರು ಸಂಸತ್ ಭವನದೊಳಗೆ ಪ್ರವೇಶಿಸಿದ್ದರು. ಅಸಲಿ ಗುರುತಿನ ಚೀಟಿಗೆ ಸೆಡ್ಡು ಹೊಡೆಯುವಂಥ ಅವರ ಬಳಿ ಇದ್ದ ನಕಲಿ ಗುರುತಿನ ಚೀಟಿಗಳು ಭದ್ರತಾ ಸಿಬ್ಬಂದಿಗೂ ಚಳ್ಳೆಹಣ್ಣು ತಿನ್ನಿಸಿದ್ದವು! ಎಕೆ 47 ರೈಫಲ್ ಗಳು, ಗ್ರೆನೆಡ್, ಪಿಸ್ತೂಲ್ ಗಳನ್ನು ಹೊಂದಿದ್ದ ಅವರಿಗೆ ಪಾಕಿಸ್ಥಾನದಿಂದ ಸಲಹೆ-ಸೂಚನೆಗಳು ಸಿಗುತ್ತಿದ್ದವು! ಆಗಿನ ಉಪ ರಾಷ್ಟ್ರಪತಿ ಕೃಷ್ಣಕಾಂತ್ ಅವರ ಕಾರಿನ ಬಳಿ ತಮ್ಮ ಕಾರನ್ನು ನಿಲ್ಲಿಸಿದ ಭಯೋತ್ಪಾದಕರು ಏಕಾಏಕಿ ದಾಳಿ ಆರಂಭಿಸಿದ್ದರು. ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು. ಪೊಲೀಸರು ಭದ್ರತಾ ಸಿಬ್ಬಂದಿಯ ವೀರೋಚಿತ ಹೋರಾಟದಿಂದಾಗಿ ಎಷ್ಟೋ ನಾಯಕರು ತಮ್ಮ ಪ್ರಾಣ ಉಳಿಸಿಕೊಂಡರು!

ಸಂಸತ್ತಿನಲ್ಲಿ ಆಗ ಅಡ್ವಾಣಿಯವರೂ ಇದ್ದರಂತೆ!

ಸಂಸತ್ತಿನಲ್ಲಿ ಆಗ ಅಡ್ವಾಣಿಯವರೂ ಇದ್ದರಂತೆ!

ದಾಳಿ ನಡೆಯುವ ಸಮಯದಲ್ಲಿ ಸಂಸತ್ತಿನಲ್ಲಿ ಎಲ್ ಕೆ ಅಡ್ವಾನಿಯವರು ಸಹ ಇದ್ದರು! ಆಗಷ್ಟೇ ಸಂಸತ್ತಿನ ಲೋಕಸಭೆ ಮತ್ತು ರಾಜ್ಯ ಸಭೆಯ ಕಲಾಪವನ್ನು 40 ನಿಮಿಷಗಳ ಕಾಲ ಮುಂದೂಡಿದ್ದರಿಂದ ಹೆಚ್ಚಿನ ನಾಯಕರು ಅಲ್ಲಿರಲಿಲ್ಲ. ಆದರೆ ಆಗಿನ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಅಡ್ವಾಣಿಯವರು ಸೇರಿದಂತೆ 100 ಕ್ಕೂ ಹೆಚ್ಚು ನಾಯಕರು ಸಂಸತ್ತಿನೊಳಗೇ ಇದ್ದರು. ಭದ್ರತಾ ಸಿಬ್ಬಂದಿಗಳು ಸ್ವಲ್ಪ ಎಚ್ಚರ ತಪ್ಪಿದ್ದರೂ ಏನಾಗುತ್ತಿತ್ತು ಎಂಬುದು ಊಹಿಸಲು ಸಾಧ್ಯವಿಲ್ಲದ ವಿಷಯ!

ಶ್ರದ್ಧಾಂಜಲಿ ಅರ್ಪಿಸಿದ ಮೋದಿ, ರಾಹುಲ್

ಭಾರತೀಯ ಪ್ರಜಾಪ್ರಭುತ್ವದ ಪ್ರತೀಕವಾದ ಸಂಸತ್ತಿನ ಮೇಲೆ 2001 ರಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ 9 ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ನವದೆಹಲಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಹಲವು ನಾಯಕರು ಹುತಾತ್ಮರ ತ್ಯಾಗಕ್ಕೆ ಕಂಬನಿ ಮಿಡಿದರು.

ಹುತಾತ್ಮರಿಗೆ ಟ್ವಿಟ್ಟರ್ ನಲ್ಲಿ ನಮನ

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ನವೀನ್ ಜಿಂದಾಲ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವರು ಟ್ವಿಟ್ಟರ್ ನಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ.

ದಯವಿಟ್ಟು ಶ್ರದ್ಧಾಂಜಲಿ ಅರ್ಪಿಸಬೇಡಿ!

ಶಶಿ ತರೂರ್, ಮಣಿಶಂಕರ್ ಅಯ್ಯರ್, ಪಿ.ಚಿದಂಬರಂ, ಗುಲಾಮ್ ನಬಿ, ಮೆಹ್ಬೂಬಾ ಮುಫ್ತಿ, ಫಾರೂಖ್ ಅಬ್ದುಲ್ಲಾ, ಜೆಎನ್ ಯು ಅಫ್ಜಲ್ ಗ್ಯಾಂಗ್, ಪ್ರಶಾಂತ್ ಭೂಷಣ್ ಮತ್ತು ಅಫ್ಜಲ್ ನ ಕ್ಷಮಾದಾನ ಅರ್ಜಿಗೆ ಸಹಿ ಮಾಡಿದ 347 ಜನರಿಗೆ ನನ್ನ ಮನವಿ, ಸಂಸತ್ ದಾಳಿಯಲ್ಲಿ ಹುತಾತ್ಮರಾದ ಮಹನಿಯರಿಗೆ ದಯವಿಟ್ಟು ನೀವು ಶ್ರದ್ಧಾಂಜಲಿ ಅರ್ಪಿಸಬೇಡಿ. ನಿಮಗೆ ಆ ಅರ್ಹತೆ ಇಲ್ಲ ಎಂದು ಅಂಶುಲ್ ಸಕ್ಸೇನಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ 1,200ಕ್ಕೂ ಹೆಚ್ಚು ಲೈಕ್ಸ್ ಗಳಿದ್ದರೆ, 970 ಕ್ಕೂ ಹೆಚ್ಚು ಜನ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.

English summary
It has been 16 years since 5 terrorists stormed India's Parliament on 13th Dec 2001. Indian Prime Minister Narendra Modi and other leaders paying homage to the martyrs of the Parliament attack, and remembering their sacrifice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X