ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ ನಡುವೆಯೇ "ಡೆಲ್ಟಾ ಪ್ಲಸ್" ಪ್ರಕರಣಗಳ ಸಂಖ್ಯೆ ಏರಿಕೆ

|
Google Oneindia Kannada News

ನವದೆಹಲಿ, ಜೂನ್ 21: ಕೊರೊನಾ ಮೂರನೇ ಅಲೆ ಎಚ್ಚರಿಕೆ ನಡುವೆ, ಭಾರತದಲ್ಲಿ ಈಚೆಗೆ ಪತ್ತೆಯಾಗಿರುವ "ಡೆಲ್ಟಾ ಪ್ಲಸ್" ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಡೆಲ್ಟಾ ರೂಪಾಂತರ B.1.617.2 ಹೆಚ್ಚು ಸಾಂಕ್ರಾಮಿಕವೆಂದು ಪರಿಗಣಿಸಲ್ಪಟ್ಟಿತ್ತು. ಭಾರತದಲ್ಲಿ ಎರಡನೇ ಅಲೆಗೆ ಈ ರೂಪಾಂತರ ಕಾರಣವಾಗಿದ್ದು, ಯುರೋಪ್ ಹಾಗೂ ಬ್ರಿಟನ್‌ನಾದ್ಯಂತ ಮತ್ತೆ ಕೊರೊನಾ ಹೆಚ್ಚಳವಾಗಿದ್ದು ಈ ರೂಪಾಂತರದಿಂದ ಎಂದು ತಿಳಿದುಬಂದಿತ್ತು.

ಡೆಲ್ಟಾ ನಂತರ ಭಾರತದಲ್ಲಿ ಮತ್ತೊಂದು ಹೊಸ ರೂಪಾಂತರ ಪತ್ತೆಡೆಲ್ಟಾ ನಂತರ ಭಾರತದಲ್ಲಿ ಮತ್ತೊಂದು ಹೊಸ ರೂಪಾಂತರ ಪತ್ತೆ

ಈಚೆಗೆ ಈ ರೂಪಾಂತರದಿಂದ ಡೆಲ್ಟಾ ಪ್ಲಸ್ ಅಥವಾ AY.1 ರೂಪಾಂತರ ಸೃಷ್ಟಿಯಾಗಿದ್ದು, ಈ ಸೋಂಕು ತನ್ನ ವ್ಯಾಪ್ತಿ ಹಿಗ್ಗಿಸುತ್ತಿದೆ. ದೇಶದಲ್ಲಿ 20 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

20 Delta Plus Covid 19 Variant Cases Found In India

"ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್‌ನ 15-20 ಪ್ರಕರಣಗಳು ಪತ್ತೆಯಾಗಿವೆ. ಈಗಲೇ ನಿಗಾ ವಹಿಸುವುದು ಅವಶ್ಯಕವಾಗಿದೆ. ಡೆಲ್ಟಾ ಪ್ಲಸ್ ಇನ್ನಷ್ಟು ಅಪಾಯಕಾರಿಯಾಗುವ ಸಾಧ್ಯತೆಯಿದೆ" ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ಸುಜೀತ್ ಸಿಂಗ್ ತಿಳಿಸಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರದ ಗಂಭೀರತೆ, ಹರಡುವಿಕೆ ಹಾಗೂ ಜೆನೋಮಿಕ್ ವಿವರಗಳನ್ನು ಕಲೆ ಹಾಕಲಾಗುತ್ತಿದೆ.

ಜೂನ್ 7ರವರೆಗೆ ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಏಳು ಪ್ರಕರಣಗಳು ಕಂಡುಬಂದಿದ್ದವು. ಮಹಾರಾಷ್ಟ್ರದಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ಇದೀಗ ಸೋಂಕಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

"ಇದು ಡೆಲ್ಟಾ ರೂಪಾಂತರವೇ ಆದ್ದರಿಂದ ಇದು ಕೂಡ ವೇಗವಾಗಿ ಪಸರಿಸಬಹುದು ಹಾಗೂ ಇದರಲ್ಲಿಯೂ ಮಾನವನ ಜೀವಕೋಶಕ್ಕೆ ಹಾನಿತರುವ ಲಕ್ಷಣಗಳು ಕಂಡುಬಂದಿವೆ," ಎಂದು ದೆಹಲಿ ಸಿಎಸ್‌ಐಆರ್ ಜೆನೋಮಿಕ್ ಇನ್‌ಸ್ಟಿಟ್ಯೂಟ್ ತಜ್ಞ ವಿನೋದ್ ಸ್ಕಾರಿಯಾ ಡೆಲ್ಟಾ ಪ್ಲಸ್ ಬಗ್ಗೆ ತಿಳಿಸಿದ್ದರು.

ರೂಪಾಂತರ ದ್ವಿಗುಣಗೊಳ್ಳುವುದನ್ನು ಹಾಗೂ ಮತ್ತೊಂದು ರೂಪಾಂತರ ಸೃಷ್ಟಿಸುವುದನ್ನು ತಡೆಯುವ ಅಗತ್ಯ ಹಿಂದಿನದಕ್ಕಿಂತ ಹೆಚ್ಚಿದೆ ಎಂದು ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಬೆನ್ನಲ್ಲೇ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

English summary
Highly infectious Delta-plus Covid-19 variant found in 20 cases in India, 8 in Maharashtra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X